ವಿಜಯಪುರ: ಸೋಮವಾರ ಸುರಿದ ಮಳೆಗೆ ತಾಳಿಕೋಟೆ ಪಟ್ಟಣದ ಬಳಿಯ ಡೋಣಿ ನದಿಯ ಸೇತುವೆ ಮುಳುಗಡೆಯಾಗಿದೆ. ಸೇತುವೆ ಜಲಾವೃತವಾಗಿದ್ದರಿಂದ ಕೆಲ ಗ್ರಾಮಗಳ ಸಂಪರ್ಕ ಕಡಿತಾವಗಿದೆ.
ಹಡಗಿನಾಳ, ಹರನಾಳ, ಮುಕಿಹಾಳ, ಕಲ್ಲದೇವನಹಳ್ಳಿ, ನಾಗೂರ, ಶಿವಪುರ, ಹಗರಗುಂಡ ಗ್ರಾಮಗಳ ಸಂಪರ್ಕ ಸಂಪೂರ್ಣ ಸ್ಥಗಿತವಾಗಿದೆ. ತಾಳಿಕೋಟೆ ಪಟ್ಟಣದ ಬಳಿ ಡೋಣಿ ನದಿಗೆ ಸೇತುವೆ ನಿರ್ಮಿಸಬೇಕೆಂದು ಸಾರ್ವಜನಿಕರ ಒತ್ತಾಯಿಸಿದ್ದಾರೆ.