ವಿಜಯಪುರ: ಪಶು ವೈದ್ಯ ಪ್ರಿಯಂಕಾ ರೆಡ್ಡಿ ಹತ್ಯೆ ಖಂಡಿಸಿ ಕರ್ನಾಟಕ ಪಶುವೈದ್ಯಕೀಯ ಸಂಘಟನೆ ಜಿಲ್ಲಾ ಘಟಕದಿಂದ ಮೌನ ಪ್ರತಿಭಟನೆ ನಡೆಸಲಾಯಿತು.
ನಗರದ ಸಿದ್ದೇಶ್ವರ ಮಂದಿರದಿಂದ ಗಾಂಧಿ ವೃತ್ತವರಿಗೆ ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪಾದಯಾತ್ರೆ ನಡಿಸಿ ಪ್ರಿಯಂಕಾ ಹತ್ಯೆಯನ್ನು ಖಂಡಸಿದರು. ಗಾಂಧಿ ವೃತ್ತದಲ್ಲಿ ಪ್ರಿಯಂಕಾ ರೆಡ್ಡಿ ಭಾವಚಿತ್ರಕ್ಕೆ ಕ್ಯಾಂಡಲ್ ಬೆಳಗಿಸಿ ಮೌನ ಪ್ರತಿಭಟನೆ ನಡೆಸಿದರು.
ಮೌನ ಪ್ರತಿಭಟನೆಯಲ್ಲಿ ಜಿಲ್ಲೆಯ ಹಲವು ಭಾಗಗಳ ಪಶುವೈದ್ಯರು ಭಾಗಿಯಾಗಿದ್ದರು.