ETV Bharat / state

ಹಿರೇಮಠದ ಪೀಠಾಧಿಪತಿ ಚನ್ನವೀರ ದೇವರಿಗೆ ಗೌರವ ಡಾಕ್ಟರೇಟ್ - ಮುದ್ದೇಬಿಹಾಳ ವಿಜಯಪುರ ನ್ಯೂಸ್

ಹಿರೇಮಠದ ಪೀಠಾಧಿಪತಿ ಚನ್ನವೀರ ದೇವರು ಅವರಿಗೆ ತಮಿಳುನಾಡಿನ ಇಂಡಿಯನ್ ಎಂಪೈರ್ ವರ್ಚುವಲ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಘೋಷಿಸಿದೆ.

channaveera devaru
ಹಿರೇಮಠದ ಪೀಠಾಧಿಪತಿ ಚನ್ನವೀರ ದೇವರು
author img

By

Published : Oct 22, 2021, 9:35 AM IST

ಮುದ್ದೇಬಿಹಾಳ: ತಾಲೂಕಿನ ಕುಂಟೋಜಿಯ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಚನ್ನವೀರ ದೇವರು ಅವರಿಗೆ ತಮಿಳುನಾಡಿನ ಇಂಡಿಯನ್ ಎಂಪೈರ್ ವರ್ಚುವಲ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಘೋಷಿಸಿದೆ.

ಚನ್ನವೀರ ದೇವರು ಅವರು ಇತ್ತೀಚೆಗೆ ತಮ್ಮ ನೇತೃತ್ವದ ಶ್ರೀ ಕುಮಾರೇಶ್ವರ ಜೀವನ ವಿಕಾಸ ಫೌಂಡೇಶನ್ ಅಡಿ ಬೀದಿ ಬದಿ ವ್ಯಾಪಾರ ಮಾಡುವವರಿಗೆ ಕೊಡೆ ಮತ್ತು ನೆರವು ತಲುಪಿಸಿದ್ದರು. ಅವರ ಈ ಕಾರ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಎಲ್ಲೆಡೆ ಪ್ರಚಾರಗೊಂಡಿತ್ತು. ಇದನ್ನು ಕಂಡು ಸ್ವಾಮೀಜಿಯವರ ಅಭಿಮಾನಿಗಳು, ಭಕ್ತರು ಸ್ವಾಮೀಜಿಯವರ ಹೆಸರನ್ನು ಗೌರವ ಡಾಕ್ಟರೇಟ್‍ಗೆ ನಾಮಿನೇಟ್ ಮಾಡಿದ್ದರು.

ನಿನ್ನೆ ಸಂಜೆ ಶ್ರೀಗಳು ತಮ್ಮ ಸಹವರ್ತಿಗಳೊಂದಿಗೆ ತಮಿಳುನಾಡಿನ ಕೊಯಂಬತ್ತೂರಿಗೆ ಹುಬ್ಬಳ್ಳಿ ಮೂಲಕ ವಿಮಾನದಲ್ಲಿ ತೆರಳಿದ್ದು, ಶುಕ್ರವಾರ-ಶನಿವಾರ ನಡೆಯುವ ಗೌರವ ಡಾಕ್ಟರೇಟ್ ಪ್ರದಾನ ಕಾರ್ಯಕ್ರಮದಲ್ಲಿ ಡಾಕ್ಟರೇಟ್ ಸ್ವೀಕರಿಸಲಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಮತಾಂತರ ನಿಷೇಧ ಕಾನೂನು ಜಾರಿಯಾಗಬೇಕು: ಮಠಾಧೀಶರ ಒಕ್ಕೊರಳ ಧ್ವನಿ

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಮಾಡುತ್ತಿರುವ ಸಮಾಜಮುಖಿ ಕೆಲಸಗಳನ್ನು ಗಮನಿಸಿ ತಮಗೆ ನೀಡಲಿರುವ ಗೌರವ ಡಾಕ್ಟರೇಟ್ ಅನ್ನು ಫೌಂಡೇಶನ್‍ನ ಎಲ್ಲ ಸದಸ್ಯರಿಗೆ ಮತ್ತು ಕನ್ನಡನಾಡಿನ ಜನತೆಗೆ ಅರ್ಪಿಸುವುದಾಗಿ ತಿಳಿಸಿದ್ದಾರೆ. ಸ್ವಾಮೀಜಿಯವರಿಗೆ ಗೌರವ ಡಾಕ್ಟರೇಟ್ ದೊರಕಿದ್ದಕ್ಕೆ ಹಲವು ಮಠಾಧೀಶರು, ಸಂಘ ಸಂಸ್ಥೆಗಳ ಮುಖಂಡರು, ರಾಜಕಾರಣಿಗಳು, ಭಕ್ತರು ಸೇರಿ ಹಲವರು ಹರ್ಷ ವ್ಯಕ್ತಪಡಿಸಿ ಸ್ವಾಮೀಜಿಯವರನ್ನು ಅಭಿನಂದಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.