ವಿಜಯಪುರ: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳು ಹಾಗೂ ವೈದ್ಯರು ಬಳಿಸಿದ ತ್ಯಾಜ್ಯವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಾಗುತ್ತಿದೆ. ಬಳಸಿದ ವಸ್ತುಗಳನ್ನ ಬೀದಿಯಲ್ಲಿ ಬಿಸಾಡದೆ ಆರೋಗ್ಯ ಇಲಾಖೆ ವ್ಯವಸ್ಥಿತವಾಗಿ ಕಸ ಪ್ಯಾಕ್ ಮಾಡಿ, ನಗರದ ಹೊರವಲದಲ್ಲಿ ಸುಡುತ್ತಿದೆ.
ಇನ್ನೂ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗುವ ಸೋಂಕಿತರಿಗೆ ಬಳಸಿದ ವಸ್ತು, ಕಸ ಎಸೆಯಲು, ರೋಗಿಗಳ ನಿರ್ವಹಣೆ ಕುರಿತು ತರಬೇತಿ ನೀಡಲಾಗುತ್ತಿದೆಯಂತೆ. ಜಿಲ್ಲಾಸ್ಪತ್ರೆಯಲ್ಲಿ ಇಡಲಾದ ಕಲರ್ಸ್ ಬಕೆಟ್ಸ್‌ಗಳಲ್ಲಿ ಸೋಂಕಿತರು ಬಳಸಿದ ವಸ್ತುಗಳನ್ನ ಯಾವ ಬಕೆಟ್ನಲ್ಲಿ ಏನು ಹಾಕಬೇಕು ಎಂಬುದನ್ನ ಹೇಳಲಾಗುತ್ತಿದೆ. ಪ್ರತಿದಿನವೂ ಡಬಲ್ ಯಲ್ಲೋ ಬ್ಯಾಗ್ಗಳ ತ್ಯಾಜ್ಯಗಳಿಗೆ ಆಸ್ಪತ್ರೆ ಸಿಬ್ಬಂದಿ ಸ್ಯಾನಿಟೈಸರ್ ಸಿಂಪಡಣೆ ಮಾಡುವ ಮೂಲಕ ಪ್ಯಾಕ್ ಮಾಡಿ ಕವರ್ ಮೇಲೆ ಕೋವಿಡ್ 19 ಎಂದು ಬರೆಯಲಾಗುತ್ತಿದಂತೆ. ಕಸವನ್ನ ಮಹಾನಗರ ಪಾಲಿಕೆ ಬದಲಾಗಿ ಜಿಲ್ಲಾಡಳಿತ ನಿಗದಿ ಪಡಿದ ಸಂಸ್ಥೆಗೆ ಹಣ ಪಾವತಿ ಮಾಡುವ ಮೂಲಕ ಪ್ರತಿದಿನವೂ ತ್ಯಾಜ್ಯ ಕಳುಹಿಸಿಕೊಡಲಾಗುತ್ತಿದೆ. ಬಳಿಕ ನಿರ್ಜನ ಪ್ರದೇಶದಲ್ಲಿ ಸುಡಲಾಗುತ್ತಿದೆಯಂತೆ.
ಇನ್ನೂ ಜಿಲ್ಲಾಸ್ಪತ್ರೆಯಲ್ಲಿ ಕಸ ನಿರ್ವಹಣೆಗೆ 3 ತಂಡಗಳನ್ನ ರಚನೆ ಮಾಡಲಾಗಿದ್ದು, ಪ್ರತಿದಿನ ಸಂಗ್ರಹವಾಗುವ 100 ರಿಂದ 150 ಕೆಜಿ ತ್ಯಾಜ್ಯವನ್ನ ಸಾರ್ವಜನಿಕ ಸ್ಥಳಗಳಲ್ಲಿ ಎಸೆಯದೆ, ವೈರಸ್ ಭೀತಿ ಎದುರಾಗದಂತೆ ನಿರ್ವಹಣೆ ಮಾಡಲಾಗುತ್ತಿದೆ. ಇತ್ತ ತ್ಯಾಜ್ಯ ನಿರ್ವಹಣೆ ಮಾಡುವ ಜಿಲ್ಲಾಸ್ಪತ್ರೆ ಸಿಬ್ಬಂದಿಗೆ ಅಧಿಕಾರಿಗಳು ಸುರಕ್ಷಿತ ಕ್ರಮಗಳ ಕುರಿತು ತರಬೇತಿ ನೀಡಿದ್ದಾರೆ. ಆರೋಗ್ಯಕ್ಕೆ ಯಾವುದೇ ಅಪಾಯವಾಗದ ರೀತಿಯಲ್ಲಿ ನಿರ್ವಹಣೆ ಮಾಡಲಾಗುತ್ತಿದೆ ಎಂಬುದು ಜಿಲ್ಲಾಸ್ಪತ್ರೆಯ ತ್ಯಾಜ್ಯ ನಿರ್ವಹಣಾಧಿಕಾರಿಗಳ ಮಾತಾಗಿದೆ.