ETV Bharat / state

ತೊಗರಿ ಖರೀದಿ ಕೇಂದ್ರಗಳನ್ನು ಆರಂಭಿಸಲು ಸೂಚನೆ: ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್​ - ತೊಗರಿ ಖರೀದಿ ಕೇಂದ್ರಗಳ ಆರಂಭ ಸುದ್ದಿ ವಿಜಯಪುರ

ತೊಗರಿ ಖರೀದಿ ಕೇಂದ್ರಗಳನ್ನು ಶೀಘ್ರ ಆರಂಭಿಸಲು ನೋಂದಣಿ ಕಾರ್ಯಕ್ಕೆ ತಕ್ಷಣ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್​ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.

vijayapura
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ
author img

By

Published : Dec 25, 2019, 2:47 PM IST

ವಿಜಯಪುರ: ತೊಗರಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಯೋಜನೆಯಡಿ ಕೇಂದ್ರ ಸರ್ಕಾರ ಘೋಷಿಸಿದ ಬೆಂಬಲ ಬೆಲೆ ಮತ್ತು ರಾಜ್ಯ ಸರ್ಕಾರದ ಪ್ರೋತ್ಸಾಹ ಧನದೊಂದಿಗೆ ತೊಗರಿ ಖರೀದಿ ಕೇಂದ್ರಗಳನ್ನು ಶೀಘ್ರ ಆರಂಭಿಸಲು ನೋಂದಣಿ ಕಾರ್ಯಕ್ಕೆ ತಕ್ಷಣ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್​ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಕೃಷಿ ಮಾರಾಟ ಇಲಾಖೆ ಬೆಂಬಲ ಬೆಲೆ ಜಿಲ್ಲಾ ಕಾರ್ಯಪಡೆ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಗುಣಮಟ್ಟದ ತೊಗರಿ ಉತ್ಪನ್ನಗಳ ಪ್ರತಿ ಕ್ವಿಂಟಲ್‍ಗೆ ರೂ.5,800 ಮತ್ತು ರಾಜ್ಯ ಸರ್ಕಾರದ ಪ್ರೋತ್ಸಾಹ ಧನ ರೂ.300 ಸೇರಿ ಒಟ್ಟು ರೂ 6,100 ರಂತೆ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ತೊಗರಿ ಖರೀದಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬೆಂಬಲ ಬೆಲೆ ಯೋಜನೆ ಮಾರ್ಗಸೂಚಿಗಳನ್ವಯ ಪೂರ್ವಸಿದ್ಧತೆ ಮತ್ತು ರೈತರ ನೋಂದಣಿಯನ್ನು 20 ದಿನಗಳವರೆಗೆ ನಿರ್ವಹಿಸಬೇಕು ಎಂದು ಸೂಚಿಸಿದರು.

ತೊಗರಿ ದಾಸ್ತಾನು ಕುರಿತು :

ಬಸವನ ಬಾಗೇವಾಡಿ ಉಪಮಾರುಕಟ್ಟೆ ಪ್ರಾಂಗಣದಲ್ಲಿ 1,500 ಎಂ.ಟಿ ಮತ್ತು ಆಲಮೇಲ ಉಪ ಮಾರುಕಟ್ಟೆಯಲ್ಲಿ 500 ಎಂ.ಟಿ ಸಾಮರ್ಥ್ಯ ಸಮಿತಿಯ ಒಡೆತನದ ಗೋದಾಮುಗಳು ಖಾಲಿ ಇದ್ದು, ಈ ಗೋದಾಮುಗಳಿಗೆ ಸಂಬಂಧಿಸಿದ ಉಗ್ರಾಣ ವ್ಯವಸ್ಥಾಪಕರು ಹಸ್ತಾಂತರ ಪಡೆದುಕೊಂಡು ದಾಸ್ತಾನು ಮಾಡಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ಒಟ್ಟು ಜಿಲೆಯಲ್ಲಿ 94 ಖರೀದಿ ಕೇಂದ್ರ ತೆರೆಯಲು ಉದ್ದೇಶಿಸಲಾಗಿದೆ. ಕೃಷಿ ಜಂಟಿ ನಿರ್ದೇಶಕರು ಹಾಗೂ ಆಯಾ ತಾಲೂಕುಗಳ ಎಪಿಎಂಸಿ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ. ಖರೀದಿ ಕೇಂದ್ರಗಳ ನೋಂದಣಿ ಮೇಲ್ವಿಚಾರಣೆಗೆ ಸಹಕಾರಿ ಸಂಘಗಳ ಉಪ ನಿಬಂಧಕರು ಹಾಗೂ ಮಾರ್ಕೇಟಿಂಗ್ ಫೆಡರೇಶನ್ ಶಾಖಾ ವ್ಯವಸ್ಥಾಪಕರನ್ನು ನೇಮಿಸಲಾಯಿತು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಸನ್ನ, ಕೃಷಿ ಜಂಟಿ ನಿರ್ದೇಶಕ ಶಿವುಕುಮಾರ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Intro:ವಿಜಯಪುರ Body:ವಿಜಯಪು: ತೊಗರಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಯೋಜನೆಯಡಿ ಕೇಂದ್ರ ಸರ್ಕಾರ ಘೋಷಿಸಿದ ಬೆಂಬಲ ಬೆಲೆ ಮತ್ತು ರಾಜ್ಯ ಸರ್ಕಾರದ ಪ್ರೋತಾಹ ಧನದೊಂದಿಗೆ ತೋಗರಿ ಖರೀಧಿ ಕೇಂದ್ರಗಳನ್ನು ಶೀಘ್ರ ಆರಂಭಿಸಲು ನೋಂದಣಿ ಕಾರ್ಯ ತಕ್ಷಣೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಕೃಷಿ ಮಾರಾಟ ಇಲಾಖೆ ಬೆಂಬಲ ಬೆಲೆ ಜಿಲ್ಲಾ ಕಾರ್ಯಪಡೆ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಬೆಂಬಲ ಬೆಲೆ ಕಾರ್ಯ ನಿರ್ವಹಣೆಯ ಕುರಿತು ಸೂಚನೆ ನೀಡಿದ ಜಿಲ್ಲಾಧಿಕಾರಿಗಳು ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಗುಣಮಟ್ಟದ ತೊಗರಿ ಉತ್ಪನ್ನಗಳ ಪ್ರತಿ ಕ್ವಿಂಟಲ್‍ಗೆ ರೂ.5800 ಮತ್ತು ರಾಜ್ಯ ಸರ್ಕಾರದ ಪ್ರೋತ್ಸಾಹ ಧನ ಧನ ರೂ.300 ಸೇರಿ ಒಟ್ಟು ರೂ .6100 ರಂತೆ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ತೊಗರಿ ಖರೀದಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬೆಂಬಲ ಬೆಲೆ ಯೋಜನೆ ಮಾರ್ಗಸೂಚಿಗಳನ್ವಯ ಪೂರ್ವ ಸಿದ್ಧತೆ ಮತ್ತು ರೈತರ ನೋಂದಣಿಯನ್ನು 20 ದಿನಗಳವರೆಗೆ ಕಾರ್ಯವನ್ನು ನಿರ್ವಹಿಸಬೇಕು ಎಂದು ಸೂಚಿಸಿದರು.
ಸರ್ಕಾರದ ಆದೇಶದಂತೆ ರೈತರ ನೋಂದಣಿಯನ್ನು ಡಿ.26 ರಂದು ಆರಂಭಿಸಬೇಕಾಗಿದೆ. ವಿಜಯಪುರ ಜಿಲ್ಲಾ ಸಹಕಾರಿ ಸಂಘಗಳ ಉಪನಿಭಂದಕರು ಹಾಗೂ ಶಾಖಾ ವ್ಯವಸ್ಥಾಪಕರು, ಮಾರ್ಕೆಟಿಂಗ್ ಫೆಡರೇಶನ್ ಅವರ ಅಭಿಪ್ರಾಯದಂತೆ ಖರೀದಿ ಕೇಂದ್ರಗಳೆಂದು ಪರಿಗಣಿಸಿರುವ ಕೃಷಿ ಪತ್ತಿನ ಸಹಕಾರಿ ಸಂಘ ಸಂಸ್ಥೆಗಳಲ್ಲಿ ರೈತರ ನೋಂದಣಿಯನ್ನು ಪ್ರಾರಂಭಿಸಬೇಂಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಕೃಷಿ ಇಲಾಖೆಯ ಅಧಿಕಾರಿಗಳು ತೊಗರಿ ಬೆಳೆ ಬಿತ್ತನೆಯ ಕುರಿತು ಸಮಗ್ರ ವರದಿಯೋಂದಿಗೆ ಇತರ ಅವಶ್ಯಕ ಮಾಹಿತಿಯನ್ನು ನೀಡಿದರು.
ತೊಗರಿ ದಾಸ್ತಾನು ಕುರಿತು : ಬಸವನ ಬಾಗೇವಾಡಿ ಉಪಮಾರುಕಟ್ಟೆ ಪ್ರಾಂಗಣದಲ್ಲಿ 1500 ಎಂ.ಟಿ ಮತ್ತು ಆಲಮೇಲ ಉಪಮಾರುಕಟ್ಟೆಯಲ್ಲಿ 500 ಎಂ.ಟಿ ಸಾಮರ್ಥ್ಯ ಸಮಿತಿಯ ಓಡೆತನದ ಗೋದಾಮುಗಳು ಖಾಲಿ ಇದ್ದು, ಈ ಗೋದಾಮುಗಳನ್ನು ಸಂಬಂಧಿಸಿದ ಉಗ್ರಾಣ ವ್ಯವಸ್ಥಾಪಕರು ಹಸ್ತಾಂತರ ಪಡೆದುಕೊಂಡು ದಾಸ್ತಾನು ಮಾಡಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಮಾತನಾಡಿದ ಎ.ಪಿ.ಎಮ್.ಸಿ ಸಹಾಯಕ ನಿರ್ದೇಶಕ ಚಬನೂರ ಅವರು ಸರ್ಕಾರದ ನಿರ್ದೆಶನದನ್ವಯ
ಪ್ರತಿ ಎಕರೆಗೆ 5 ಕ್ವಿಂಟಾಲ್ ಗರಿಷ್ಟ ಪ್ರಮಾಣ ಹಾಗೂ ಪ್ರತಿ ರೈತರಿಂದ ಗರಿಷ್ಠ 10 ಕ್ವಿಂಟಾಲ್ ಖರೀದಿ ಪ್ರಮಾಣ ನಿಗದಿಪಡಿಸಿ ಖರೀದಿಸತಕ್ಕದ್ದು, ಖರೀದಿ ಕೇಂದ್ರಗಳಲ್ಲಿ ತೊಗರಿ ಉತ್ಪನ್ನವನ್ನು ಖರೀದಿಸುವ ಪೂರ್ವದಲ್ಲಿ ರೈತರು ವಿವರವನ್ನು ನ್ಯಾಫೆಡ್ ಸಂಸ್ಥೆಯ ತಂತ್ರಾಂಶದೊಂದಿಗೆ ಭೂಮಿ, ಯುಐಡಿಎಐ ಮತ್ತು ಬೆಳೆ ಸಮೀಕ್ಷೆ ದತ್ತಾಂಶದೊಂದಿಗೆ ತಾಳೆ ಮಾಡಿ ಪರಿಶೀಲಸಿದ ನಂತರವೇ ನೋಂದಾಯಿಸಿಕೊಳ್ಳುವುದು. ಅದರಂತೆ ರೈತರ ಹೆಸರಿನ ಆಧಾರ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ಮಾತ್ರ ಉತ್ಪನ್ನದ ಮೌಲ್ಯವನ್ನು ಜಮೆ ಆಗುವಂತೆ ಪಾವತಿ ಮಾಡಬೇಕಾಗಿದೆ ಎಂದರು.
ತೂಗರಿ ಖರೀದಿ ಕೇಂದ್ರಗಳಲ್ಲಿ ರೈತರ ಹೆಸರಿನಲ್ಲಿ ವರ್ತಕರು ತರುವ ತೊಗರಿ ಖರೀದಿಸದಂತೆ ಹಾಗೂ ಖರೀದಿ ಸಂಸ್ಥೆಗಳ ಯಾವುದೇ ರೀತಿಯ ದುರುಪಯೋಗ ಆಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸತಕ್ಕದ್ದು ಪ್ರಸ್ತುತ ಖರೀದಿ ಮಾಡಿದ ಉತ್ಪನ್ನವನ್ನು ದಾಸ್ತಾನು ಜಿಲ್ಲೆಯಲ್ಲಿ ಸ್ಥಳಾವಕಾಶದ ಕೊರತೆ ಇರುವುದರಿಂದ ಪಕ್ಕದ ಜಿಲ್ಲೆಯ ಉಗ್ರಾಣಗಳಲ್ಲಿ ದಾಸ್ತಾನು ಮಾಡಬೇಕಾಗಿರುವುದರಿಂದ ಕನಿಷ್ಟ ಬೆಂಬಲ ಬೆಲೆ ಮಾಗ9ಸೂಚಿಗಳನ್ವಯ 50ಕಿ.ಮೀ ವ್ಯಾಪ್ತಿಯಲ್ಲಿ ಮಾತ್ರ ಸಾಗಾಣಿಕೆ ಮಾಡಲು ಅವಕಾಶ ಇದ್ದು ಪ್ರಸ್ತುತ ದಾಸ್ತಾನುವನ್ನು ಮಾಡಲು ಉದ್ದೇಶಿಸಿದ ಉಗ್ರಾಣಗಳು 200ಕಿ.ಮೀ ಕ್ಕಿಂತ ಹೆಚ್ಚಿನ ಅಂತರದಲ್ಲಿರುತ್ತವೆ ಎಂದು ಸಭೆಯ ಗಮನಕ್ಕೆ ತಂದರು.
ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಖರೀದಿ ಕೇಂದ್ರಗಳ ವಿವರ
ವಿಜಯಪುರ ತಾಲೂಕಿನ ವಿಜಯಪುರ ಟಿಎಪಿಸಿಎಂಎಸ್, ಬಬಲೇಶ್ವರ ಪಿಎಸಿಎಸ್, ತಿಕೋಟಾ ಪಿಎಸಿಎಸ್, ನಾಗಠಾಣ ಪಿಎಸಿಎಸ್, ಕಾಖಂಡಕಿ ಹಿಟ್ನಳ್ಳಿ ಪಿಎಸಿಎಸ್, ಕನ್ನೂರ ಪಿಎಸಿಎಸ್, ಶಿವಣಗಿ ಪಿಎಸಿಎಸ್, ಕಾರಜೋಳ ಪಿಎಸಿಎಸ್, ಸಾರವಾಡ ಪಿಎಸಿಎಸ್, ಅರ್ಜುಣಗಿ ಪಿಎಸಿಎಸ್, ಶೇಗುಣಸಿ ಪಿಎಸಿಎಸ್, ಹೊನ್ನುಟಗಿ ಪಿಎಸಿಎಸ್, ಬಾಬಾನಗರ ಪಿಎಸಿಎಸ್, ಹೊನವಾಡ ಪಿಎಸಿಎಸ್, ನಿಡೋಣಿ-2 ಪಿಎಸಿಎಸ್, ತೊರವಿ ಪಿಎಸಿಎಸ್. ( ಒಟ್ಟು 17)
ಬಸವಣ ಬಾಗೇವಾಡಿ ತಾಲೂಕಿನ ಬಸವಣ ಬಾಗೇವಾಡಿ ಟಿಎಪಿಸಿಎಂಎಸ್, ಬೈರವಾಡಗಿ ಪಿಎಸಿಎಸ್, ಹೂ.ಹಿಪ್ಪರಗಿ ಪಿಎಸಿಎಸ್, ಇಂಗಳೇಶ್ವರ ಪಿಎಸಿಎಸ್, ಕೋಲ್ಹಾರ ಪಿಎಸಿಎಸ್, ಕೆ.ಸಾಲವಾಡಗಿ ಪಿಎಸಿಎಸ್, ಮನಗೂಳಿ ಪಿಎಸಿಎಸ್, ಮುತ್ತಗಿ ಪಿಎಸಿಎಸ್, ಮುಳವಾಡ ಪಿಎಸಿಎಸ್, ನಿಡಗುಂದಿ ಪಿಎಸಿಎಸ್, ಸಾತಿಹಾಳ ಪಿಎಸಿಎಸ್, ತಳೆವಾಡ ಪಿಎಸಿಎಸ್, ಉಕ್ಕಲಿ ಪಿಎಸಿಎಸ್, ವಂದಾಲ ಪಿಎಸಿಎಸ್, ವಡವಡಗಿ ಪಿಎಸಿಎಸ್, ಯಾಳವಾರ ಪಿಎಸಿಎಸ್, ಸಾಸನೂರ ಪಿಎಸಿಎಸ್, ಶರಣ ಸೋಮನಾಳ ಪಿಎಸಿಎಸ್, ಬ್ಯಾಕೋಡ ಪಿಎಸಿಎಸ್.( ಒಟ್ಟು 19)
ಮದ್ದೇಬಿಹಾಲ ತಾಲೂಕಿನ ಮದ್ದೇಬಿಹಾಳ ಟಿಎಪಿಎಂಎಸ್ ,ತಾಳಿಕೋಟಿ ಟಿಎಪಿಎಂಎಸ್ ನಾಲತವಾಡ ಟಿಎಪಿಎಂಎಸ್ ಬಿದರಕುಂದಿ ಪಿಎಸಿಎಸ್, ಹಡಲಗೇರಿ ಪಿಎಸಿಎಸ್, ಹಿರೂರ ಪಿಎಸಿಎಸ್, ಹಿರೇಮುರಾಳ ಪಿಎಸಿಎಸ್, ಜಮ್ಮಲದಿನ್ನಿ ಪಿಎಸಿಎಸ್, ಕವಡಿಮಟ್ಟಿ ಪಿಎಸಿಎಸ್, ಲಿಂಗದಳ್ಳಿ ಪಿಎಸಿಎಸ್, ರಕ್ಕಸಗಿ ಪಿಎಸಿಎಸ್, ಯರಝರಿ ಪಿಎಸಿಎಸ್, ಕೋಳುರು ಎಲ್.ಟಿ ಪಿಎಸಿಎಸ್, ಬಂಟನೂರ ಪಿಎಸಿಎಸ್, ಹುನಕುಂಟಿ ಪಿಎಸಿಎಸ್,(ಒಟ್ಟು 15)
ಸಿಂದಗಿ ತಾಲೂಕಿನ ಸಿಂದಗಿ ಟಿಎಪಿಎಂಎಸ್ , ತಿಳಗೂಳ ಪಿಎಸಿಎಸ್, ಯಂಕಂಚಿ ಪಿಎಸಿಎಸ್, ಸುಂಗಠಾಣ ಪಿಎಸಿಎಸ್, ಸೋಮಜಾಳ ಪಿಎಸಿಎಸ್, ಮೊರಟಗಿ ಪಿಎಸಿಎಸ್, ಮಾಡಬಾಳ ಪಿಎಸಿಎಸ್, ಕೋರವಾರ ಪಿಎಸಿಎಸ್, ಕೊಂಡಗೂಳಿ ಪಿಎಸಿಎಸ್, ಕಲಕೇರಿ ಪಿಎಸಿಎಸ್, ಕಕ್ಕಳಮೇಲಿ ಪಿಎಸಿಎಸ್, ಜಾಲವಾದಿ ಪಿಎಸಿಎಸ್, ಹಿಕ್ಕನಗುತ್ತಿ ಪಿಎಸಿಎಸ್, ಗುಬ್ಬೇವಾಡ ಪಿಎಸಿಎಸ್, ಬಳಗಾನೂರ ಪಿಎಸಿಎಸ್, ಬಿಂಜಲಬಾವಿ ಪಿಎಸಿಎಸ್, ಬೆಕ್ಕಿನಾಳ ಪಿಎಸಿಎಸ್, ಬ್ಯಾಕೋಡ ಪಿಎಸಿಎಸ್, ಆಲಗೂರ ಪಿಎಸಿಎಸ್, ಆಲಮೇಲ ಪಿಎಸಿಎಸ್, ಮಲಘಾಣ ಪಿಎಸಿಎಸ್, ಹರನಾಳ ಪಿಎಸಿಎಸ್, ಅಸಂತಾಪುರ ಪಿಎಸಿಎಸ್, ಗೋಲಗೇರಿ ಪಿಎಸಿಎಸ್. (ಒಟ್ಟು 24)
ಇಂಡಿ ತಾಲ್ಲೂಕಿನ ಇಂಡಿ ಟಿಎಪಿಸಿಎಮ್‍ಎಸ್, ಚಡಚಣ ಟಿಎಪಿಸಿಎಮೆಸ್, ನಿವರಗಿ ಪಿಎಸಿಎಸ್, ಪಡನೂರ ಪಿಎಸಿಎಸ್, ರೇವತಗಾಂವ್ ಪಿಎಸಿಎಸ್, ಸಾಲೋಟಗಿ ಪಿಎಸಿಎಸ್, ಸಾಂತಲಗಾಂವ್ ಪಿಎಸಿಎಸ್, ಮಿರಗಿ ಪಿಎಸಿಎಸ್, ಲೋಣಿ ಬಿ.ಕೆ ಪಿಎಸಿಎಸ್, ಲಚ್ಯಾಣ ಪಿಎಸಿಎಸ್, ಇಂಚಗೇರಿ ಪಿಎಸಿಎಸ್, ಹೋರ್ತಿ ಪಿಎಸಿಎಸ್, ಹಿರೇವನೂರ ಪಿಎಸಿಎಸ್, ಹಲಸಂಗಿ ಪಿಎಸಿಎಸ್, ಅಥರ್ಗಾ ಪಿಎಸಿಎಸ್, ಅಂಜುಟಗಿ ಪಿಎಸಿಎಸ್, ತಾಂಬಾ ಪಿಎಸಿಎಸ್, ಹಿರೆರೂಗಿ ಪಿಎಸಿಎಸ್, ಶಿರಶ್ಯಾಡ ಪಿಎಸಿಎಸ್ ಹೀಗೆ ಒಟ್ಟು 19 ಸೇರಿದಂತೆ ಜಿಲೆಯಲ್ಲಿ 94 ಖರೀದಿ ಕೇಂದ್ರ ತೆರೆಯಲು ಉದ್ದೇಶಿಸಲಾಗಿದೆ. ಕೃಷಿ ಜಂಟಿ ನಿರ್ದೇಶಕರು ಹಾಗೂ ಆಯಾ ತಾಲೂಕಲುಗಳ ಎಪಿಎಂಸಿ ಅಧಿಕಾರಿಗಳನ್ನು ನೋಡಲ್ ಅಧುಕಾರಿಗಳಾಗಿ ನೇಮಿಸಲಾಗಿದೆ. ಖರೀದಿ ಕೇಂದ್ರಗಳ ನೋಂದಣಿ ಮೇಲ್ವಿಚಾರಣೆಗೆ ಸಹಕಾರಿ ಸಂಘಗಳ ಉಪ ನಿಭಂದಕರು ಹಾಗೂ ಮಾರ್ಕೆಟಿಂಗ್ ಫೆಡರೇಶನ್ ಶಾಖಾ ವ್ಯವಸ್ಥಾಪಕರನ್ನು ನೇಮಿಸಲಾಯಿತು.
ಸಭೆಯಲ್ಲಿ ಅಪರ ಜಿಲ್ಲಾದಿಕಾರಿ ಪ್ರಸನ್ನ, ಕೃಷಿ ಜಂಟಿ ನಿರ್ದೇಶಕ ಶಿವುಕುಮಾರ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.Conclusion:ವಿಜಯಪುರ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.