ವಿಜಯಪುರ: ಲಾಕ್ ಡೌನ್ ಹಿನ್ನೆಲೆ ಸಂಕಷ್ಟದಲ್ಲಿದ್ದ ಹೊರ ರಾಜ್ಯದ ಕಾರ್ಮಿಕರಿಗೆ ಆಹಾರ ಇಲಾಖೆ ಅಧಿಕಾರಿಗಳು ದವಸ ಧಾನ್ಯ ವಿತರಿಸಿದರು.
ಕಳೆದ ಎರಡು ವರ್ಷಗಳಿಂದ ನೂರಾರು ಕಾರ್ಮಿಕರು ನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಲಾಕ್ ಡೌನ್ ಕಾರಣ ಉದ್ಯೋಗವಿಲ್ಲದೇ 270 ಜನರು ಆಹಾರಕ್ಕಾಗಿ ಪರದಾಡುತ್ತಿದ್ದರು. ಇದನ್ನು ಮನಗಂಡ ಸಾರ್ವಜನಿಕರು ಆಹಾರ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಹೀಗಾಗಿ ಆಹಾರ ಇಲಾಖೆ ಅಧಿಕಾರಿಗಳು ಆಹಾರ ಸಾಮಗ್ರಿ ಒದಗಿಸಿದ್ದಾರೆ.
ನಗರದ ನಿವಾಸಿ ಶ್ರೀನಿವಾಸ ಎಂಬವರು 27 ಸಾವಿರ ರೂಪಾಯಿಯ ಆಹಾರ ಸಾಮಗ್ರಿ ಖರೀದಿಸಿ ಆಹಾರ ಇಲಾಖೆ ಅಧಿಕಾರಿಗಳಿಗೆ ನೀಡಿದ್ದರು. ಒಂದು ಕುಟುಂಬಕ್ಕೆ 5 ಕೆಜಿ ಗೋಧಿ ಹಿಟ್ಟು, 10 ಕೆ.ಜಿ ಅಕ್ಕಿ ಸೇರಿದಂತೆ ಬೇಳೆ, ತರಕಾರಿಗಳನ್ನು ನೀಡಲಾಯಿತು. ಆಹಾರ ಇಲಾಖೆ ಅಧಿಕಾರಿ ಅಮರೇಶ ಹಾಗೂ ಗೋಲ್ ಗುಂಬಜ್ ಪೊಲೀಸ್ ಠಾಣೆ ಪಿಎಸ್‌ಐ ಆಹಾರ ಸಾಮಗ್ರಿ ವಿತರಿಸಿದರು.