ಮುದ್ದೇಬಿಹಾಳ(ವಿಜಯಪುರ) : ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಮಾರ್ಗಸೂಚಿಗಳ ಅನ್ವಯ ನಿಯಮಗಳನ್ನು ಪಾಲಿಸಿ ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಶಿಕ್ಷಕರೊಬ್ಬರು ತಮ್ಮ ಮದುವೆ ದಿನದಂದೇ ಮಾಡಿ ಮಾದರಿಯಾಗಿದ್ದಾರೆ.
ನಾಗೂರ ಎಚ್.ಪಿ.ಎಸ್.ಶಾಲೆಯ ಸಹ ಶಿಕ್ಷಕ ಸಿದ್ಧನಗೌಡ ಕಾಶೀನಕುಂಟಿ ತಮ್ಮ ಮದುವೆ ವೇಳೆ ಸಹೋದರ ಮಹಾಂತಗೌಡನನ್ನೂ ಜೊತೆಗೂಡಿಸಿಕೊಂಡು ಮುದ್ದೇಬಿಹಾಳ ತಾಲೂಕಿನ ಅಗಸಬಾಳದಲ್ಲಿ ಕೊರೊನಾ ವೈರಸ್ ಬಗ್ಗೆ ಅರಿವು ಮೂಡಿಸಿದ್ದಾರೆ. ಮದುವೆಗೆ ಬಂದ ತಮ್ಮ ಸ್ನೇಹಿತರಿಗೆ, ಬಂಧುಗಳಿಗೆ ಪ್ರವೇಶ ದ್ವಾರದಲ್ಲಿಯೇ ಮಾಸ್ಕ್, ಸ್ಯಾನಿಟೈಸರ್ ನೀಡಿದ್ದಾರೆ.
ಓದಿ:ಮುದ್ದೇಬಿಹಾಳ ಸರಕಾರಿ ಆಸ್ಪತ್ರೆ ಸಿಬ್ಬಂದಿಗೆ ಕೊರೊನಾ ಶಂಕೆ: ಆಸ್ಪತ್ರೆಗೆ ಸ್ಯಾನಿಟೈಸರ್ ಸಿಂಪಡನೆ
ಕೊರೊನಾ ಮುಂಜಾಗ್ರತಾ ಕ್ರಮವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಚೌಕ ನಿರ್ಮಾಣ ಮಾಡಿದ್ದರು. ಥರ್ಮಲ್ ಸ್ಕ್ರೀ ನಿಂಗ್, ಅಲ್ಲಲ್ಲಿ 20 ಕ್ಕೂ ಹೆಚ್ಚು ಕೊರೊನಾ ಜಾಗೃತಿ ಫಲಕಗಳು, ಸ್ಯಾನಿಟೈಸರ್, ಪ್ರತಿಯೊಬ್ಬರಿಗೆ ಮಾಸ್ಕ್ ವಿತರಣೆ ಮಾಡುವ ಮೂಲಕ ನವ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದು ಈಗಿನ ಯುವ ಜನಾಂಗಕ್ಕೆ ಮಾದರಿಯಾಗಿದ್ದು, ಅಲ್ಲದೇ ಅಧಿಕಾರಿಗಳು ಮೆಚ್ಚುಗೆಗೆ ಪಾತ್ರವಾಗಿದೆ.