ETV Bharat / state

ಮುದ್ದೇಬಿಹಾಳ: 20ನೇ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆಗೆ ಮುಂದಾದ ದೀಪಾ ಜೈನ್ - deepa jain getting sanyasa deekshe

ಮುನಿಲಾಲ್ ಅವರ ಮೊದಲ ಮಗಳು ಪೂಜಾ ಜೈನ್ ಈಗಾಗಲೇ ಸನ್ಯಾಸ ದೀಕ್ಷೆ ಪಡೆದಿದ್ದಾರೆ. ಇದೀಗ ಎರಡನೇ ಮಗಳು ಕೂಡ ಅದೇ ಮಾರ್ಗ ಅನುಸರಿಸಿದ್ದಾರೆ. ರಾಜಸ್ಥಾನದಲ್ಲಿ ಮೇ 2 ರಂದು ಸನ್ಯಾಸ ದೀಕ್ಷೆ ಕಾರ್ಯಕ್ರಮ ನಡೆಯಲಿದೆ.

deepa jain getting sanyasa deekshe
20ನೇ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆ ಪಡೆಯಲಿರುವ ದೀಪಾ ಜೈನ್ ; ಮೆರವಣಿಗೆ ಮೂಲಕ ಸಂದೇಶ ರವಾನೆ
author img

By

Published : Apr 15, 2021, 1:14 PM IST

ಮುದ್ದೇಬಿಹಾಳ: ನಾಲತವಾಡ ಪಟ್ಟಣದ ಜವಳಿ ವರ್ತಕ ಮುನಿಲಾಲ್ ಜೈನ್ ಅವರ ಎರಡನೇ ಪುತ್ರಿ ದೀಪಾ ಜೈನ್ ತಮ್ಮ 20ನೇ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆ ಪಡೆಯಲಿದ್ದು, ಅವರನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿಸಲಾಯಿತು.

ವಿಂಡೋ 1. ಶಾಸಕ ಎ.ಎಸ್‌ ಪಾಟೀಲ ನಡಹಳ್ಳಿ ಭಾಷಣ, ವಿಂಡೋ 2. ಪೂಜಾ ಜೈನ್‌ ಅವರ ಮೆರವಣಿಗೆ

ಮುನಿಲಾಲ್ ಅವರ ಮೊದಲ ಮಗಳು ಪೂಜಾ ಜೈನ್ ಈಗಾಗಲೇ ಸನ್ಯಾಸ ದೀಕ್ಷೆ ಪಡೆದಿದ್ದಾರೆ. ಇದೀಗ ಎರಡನೇ ಮಗಳು ಕೂಡ ಅದೇ ಮಾರ್ಗ ಅನುಸರಿಸಿದ್ದಾರೆ. ರಾಜಸ್ಥಾನದಲ್ಲಿ ಮೇ. 2 ರಂದು ಸನ್ಯಾಸ ದೀಕ್ಷೆ ಕಾರ್ಯಕ್ರಮ ನಡೆಯಲಿದೆ.

ಪಟ್ಟಣದ ಗಣೇಶ ವೃತ್ತದಿಂದ ಆರಂಭಗೊಂಡ ಮೆರವಣಿಗೆಗೆ ಮಾಜಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಚಾಲನೆ ನೀಡಿದರು‌. ಈ ಭವ್ಯ ಮೆರವಣಿಗೆ ವೀರೇಶ್ವರ ಶಿಕ್ಷಣ ಸಂಸ್ಥೆಯವರೆಗೆ ಸಾಗಿಬಂತು. ಈ ವೇಳೆ ಸನ್ಯಾಸ ದೀಕ್ಷೆ ಪಡೆಯಲಿರುವ ದೀಪಾ ಜೈನ್ ಅಲ್ಲಿ ನೆರೆದವರಿಗೆ ಹಣ, ಬಟ್ಟೆ ಹಂಚಿದರು. 'ನಮ್ಮ ಬದುಕಿನ ಜೊತೆಗೆ ಯಾವುದೂ ಬರುವುದಿಲ್ಲ' ಎಂದು ಹೇಳಿ ಬಟ್ಟೆ, ಹಣವನ್ನು ತೂರಿ ಅವುಗಳ ಮೇಲೆ ವ್ಯಾಮೋಹ ಇರಬಾರದು ಎಂಬ ಸಂದೇಶ ರವಾನಿಸಿದರು.

ಇದನ್ನೂ ಓದಿ: ಹುಕ್ಕೇರಿ ಹಿರೇಮಠದಲ್ಲಿ ಧನ್ವಂತರಿ ಸುದರ್ಶನ ಹೋಮ: ಬಿಎಸ್​ವೈ ಭಾಗಿ

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ, ಜೈನ ಧರ್ಮದಲ್ಲಿ ಸನ್ಯಾಸತ್ವದ ಸ್ವೀಕಾರ ಪ್ರಕ್ರಿಯೆ ಮಹೋನ್ನತವಾಗಿದೆ. ಧರ್ಮ ಮಾರ್ಗದಲ್ಲಿ ನಡೆಯಲು ಭಗವಾನ್ ಮಹಾವೀರರು ಲೋಕಕ್ಕೆ ಶಾಂತಿಯ ಸಂದೇಶ ನೀಡಿದ್ದಾರೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.