ವಿಜಯಪುರ: ಕುರಿ ಕಾಯುತ್ತಿದ್ದವನ ಮೇಲೆ ತೋಳವೊಂದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹೊಕ್ರಾಣಿ ಗ್ರಾಮದ ಕೆರೆಯ ಬಳಿ ನಡೆದಿದೆ.
ಸಂಗಪ್ಪ ನೀಲಪ್ಪ ಹುಲಗಬಾಳ (28) ಎಂಬ ಕುರಿಗಾಹಿ ದಾಳಿಗೆ ಒಳಗಾಗಿರುವವರು. ಸಂಜೆ ಕುರಿಗಳನ್ನು ಮರಳಿ ಹೊಡೆದುಕೊಂಡು ಬರುತ್ತಿದ್ದ ವೇಳೆ ತೋಳ ಏಕಾಏಕಿ ದಾಳಿ ನಡೆಸಿದೆ. ದಾಳಿ ಹಿನ್ನೆಲೆ ಸಂಗಪ್ಪನ ಮೂಗು, ತಲೆಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.