ವಿಜಯಪುರ: ಜಿಲ್ಲಾ ಡಿಸಿಸಿ ಬ್ಯಾಂಕ್‌ನಿಂದ ಒಂದು ಕೋಟಿ ರೂಪಾಯಿ ಹಣವನ್ನು ಕೊರೊನಾ ವಿರುದ್ಧ ಹೋರಾಟಕ್ಕೆ ನೀಡುತ್ತಿದ್ದೇವೆ ಎಂದು ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ್ ತಿಳಿಸಿದರು.
ನಗರದ ಕೇಂದ್ರ ಡಿಸಿಸಿ ಬ್ಯಾಂಕ್‌ನಲ್ಲಿ ಮಾಧ್ಯಮಗೋಷ್ಟಿ ನಡೆಸಿದ ಅವರು, ರಾಜ್ಯದಲ್ಲಿ ಕೊರೊನಾ ಭೀತಿ ಎದುರಾಗಿದ್ದರಿಂದ ಎಲ್ಲಾ ಸಾರ್ವಜನಿಕ ವಲಯಗಳು ಬಂದ್ ಆಗಿವೆ. ಜಿಲ್ಲಾ ಡಿಸಿಸಿ ಬ್ಯಾಂಕ್ ನಿಂದ ಸಿಎಂ ವಿಪತ್ತು ಪರಿಹಾರ ನಿಧಿಗೆ 1 ಕೋಟಿ ಹಣ ನೀಡಲಾಗುವುದು. ಸಹಕಾರ ಸಚಿವರ ಜೊತೆ ಮಾತನಾಡಿ ನೇರವಾಗಿ ಸಿಎಂ ಭೇಟಿ ಮಾಡಿ ಚೆಕ್ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ವಿವಿಧ ಸಹಕಾರಿ ಬ್ಯಾಂಕ್‌ಗಳಿಂದ ಈಗಾಗಲೇ 58 ಲಕ್ಷ ಹಣವನ್ನು ಸಿಎಂಗೆ ಪರಿಹಾರ ನಿಧಿಗೆ ತಲುಪಿಸಲಾಗಿದೆ. ದೇಶಕ್ಕೆ ಆಪತ್ತು ಬಂದಾಗ ಡಿಸಿಸಿ ಬ್ಯಾಂಕ್ ಸರ್ಕಾರದ ನೆರವಿಗೆ ನಿಲ್ಲುತ್ತೆ ಎಂದರು.