ETV Bharat / state

ಕೊರೊನಾ ವೈರಸ್ ಜಿಲ್ಲೆಯಲ್ಲಿ ಇಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ - No coronavirus found in Vijayapur,

ವಿಜಯಪುರದಲ್ಲಿ ಕೊರೊನಾ ವೈರಸ್​ ಪತ್ತೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್​ ಜನತೆಗೆ ಅಭಯ ನೀಡಿದ್ದಾರೆ.

No coronavirus, No coronavirus found in Vijayapur, DC YS Patil said No coronavirus found in Vijayapur, ವಿಜಯಪುರದಲ್ಲಿ ಕೊರೊನಾ ವೈರಸ್​ ಪತ್ತೆಯಾಗಿಲ್ಲ, ವಿಜಯಪುರದಲ್ಲಿ ಕೊರೊನಾ ವೈರಸ್​ ಪತ್ತೆಯಾಗಿಲ್ಲ ಎಂದ ಜಿಲ್ಲಾಧಿಕಾರಿ, ವಿಜಯಪುರದಲ್ಲಿ ಕೊರೊನಾ ವೈರಸ್​ ಪತ್ತೆಯಾಗಿಲ್ಲ ಸುದ್ದಿ,
ಕೊರೊನಾ ವೈರಸ್ ಜಿಲ್ಲೆಯಲ್ಲಿ ಇಲ್ಲ ಎಂದು ಸ್ಪಷ್ಟ ಪಡಿಸಿದ ಜಿಲ್ಲಾಧಿಕಾರಿ
author img

By

Published : Mar 4, 2020, 9:16 PM IST

ವಿಜಯಪುರ: ಕೊರೊನಾ ವೈರಸ್ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್​ ಹೇಳಿದರು.

ಕೊರೊನಾ ವೈರಸ್ ಜಿಲ್ಲೆಯಲ್ಲಿ ಇಲ್ಲ ಎಂದು ಸ್ಪಷ್ಟ ಪಡಿಸಿದ ಜಿಲ್ಲಾಧಿಕಾರಿ

ಮಾಧ್ಯಮಗಳೊಂದಿಗೆ‌ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಕೊರೊನಾ ವೈರಸ್ ಪತ್ತೆಯಾಗಿಲ್ಲ. ಈ‌ ಕುರಿತಾಗಿ ಜಿಲ್ಲಾ ಆರೋಗ್ಯ ಇಲಾಖೆಯಿಂದ ಜಾಗ್ರತಿ ‌ಮೂಡಿಸಲಾಗುತ್ತಿದೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಸಭೆ ಕೂಡ ಮಾಡಲಾಗಿದೆ ಎಂದರು.

ಜಿಲ್ಲೆಗೆ ವಿದೇಶಿ ಪ್ರವಾಸಿಗರು ಬಂದ್ರೆ ಯಾವ ರೀತಿಯಲ್ಲಿ ಜಾಗ್ರತಿ ವಹಿಸಬೇಕು ಎಂಬುದರ‌ ಕುರಿತು ಚರ್ಚೆ ಮಾಡಲಾಗಿದೆ. ಹೊರ ದೇಶದಿಂದ ಬರುವ ಪ್ರವಾಸಿಗರಿಗೆ ರಾಜ್ಯದ ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ತಪಾಸಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಜಿಲ್ಲೆಯಿಂದ ಆಂಧ್ರಪ್ರದೇಶ ಹಾಗೂ ತೆಲಂಗಾಣಕ್ಕೆ ಹೋಗುವ ಸರ್ಕಾರಿ ಬಸ್ ಚಾಲಕರಿಗೂ ಸರ್ಕಾರಿ ಪ್ರೋಟೋಕಾಲ್ ಅನ್ವಯ ಸಾರಿಗೆ ಸಂಚಾರ ಆರಂಭವಾಗಿದೆ. ಜಿಲ್ಲೆಯ‌ ಶಾಲಾ ಮಕ್ಕಳಿಗೆ ಜಾಗೃತಿ ಮೂಡಿಸಲಾಗುತ್ತಿದೆ.‌

ಶಾಲೆಯಲ್ಲಿ ಅಡುಗೆ‌‌ ಮಾಡುವ ಮಹಿಳೆಯರಲ್ಲಿ‌ ಜ್ವರ, ಕೆಮ್ಮು ಕಾಣಿಸಿಕೊಂಡರೆ ಅಂತವರಿಗೆ ರಜೆ ನೀಡಲು ಆದೇಶ ಮಾಡಲಾಗಿದೆ.‌ ಇನ್ನೂ ಹೋಳಿ ಹಬ್ಬಕ್ಕೆ ಯಾವುದೇ ರೀತಿ ತೊಂದರೆ ಇಲ್ಲ. ಜಿಲ್ಲೆಯಲ್ಲಿ ವೈರಸ್ ಭೀತಿಯಿಲ್ಲ‌ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.