ETV Bharat / state

ನಾಗರಿಕ ಸೇವಾ ಪರೀಕ್ಷೆ ತರಬೇತಿ ಕೇಂದ್ರ ಆರಂಭಿಸಲು ವಿಜಯಪುರ ಡಿಸಿ ಸೂಚನೆ - Vijayapura latest news

ನಗರ ವ್ಯಾಪ್ತಿಯಲ್ಲಿ ವಿದ್ಯಾವಂತ ನಿರುದ್ಯೋಗಿ ವಿದ್ಯಾರ್ಥಿಗಳಿಗಾಗಿ ನಾಗರೀಕಾ ಸೇವಾ ಪರೀಕ್ಷೆ ಮತ್ತು ಇತರೆ ಹುದ್ದೆಗಳ ಸಂಬಂಧ ಪರೀಕ್ಷಾ ಪೂರ್ವ ತರಬೇತಿ ನೀಡಲು ತರಬೇತಿ ಕೇಂದ್ರ ತೆರೆಯುವ ಬಗ್ಗೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಾಕೀತು ಮಾಡಿದರು.

Vijayapura
Vijayapura
author img

By

Published : Jun 30, 2020, 1:45 AM IST

ವಿಜಯಪುರ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಶೋಷಣೆಗೆ ಒಳಗಾದ 23 ಪ್ರಕರಣಗಳ ಸಂತ್ರಸ್ತರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ 45.38 ಲಕ್ಷ ರೂ. ಪರಿಹಾರ ಧನ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದರು.

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಸಲಾಯಿತು. ಜಿಲ್ಲೆಯಲ್ಲಿ 2020ರ ಜ.01ರಿಂದ ಮೇ 31ರವರೆಗೆ ಎಸ್​ಸಿ ಮತ್ತ ಎಸ್​ಟಿ ಜನರ ಮೇಲೆ 33 ದೌರ್ಜನ್ಯ ಪ್ರಕರಣಗಳು ನಡೆದಿವೆ. ಈ ಪೈಕಿ 23 ಪ್ರಕರಣಗಳ ಸಂತ್ರಸ್ತರಿಗೆ 45.38 ಲಕ್ಷ ರೂ. ವಿತರಿಸಲಾಗಿದ್ದು, ಇನ್ನೂ 10 ಪ್ರಕರಣಗಳಲ್ಲಿ 11.75 ಲಕ್ಷ ರೂ. ವಿತರಿಸಬೇಕಾಗಿದೆ ಎಂದರು.

ನ್ಯಾಯಾಲಯಗಳಲ್ಲಿ 2020ರಲ್ಲಿ ದಾಖಲಾದ ಪ್ರಕರಣಗಳಲ್ಲಿ 16 ಜನ ಬಿಡುಗಡೆ ಹೊಂದಿದ್ದಾರೆ ಎಂದು ಸಭೆ ಮುಂದೆ ಪ್ರಸ್ತಾಪಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಅವಶ್ಯಕವಿರುವ ಸ್ಮಶಾನ ಭೂಮಿ ಕಾಯ್ದಿರಿಸಬೇಕು. ಆದ್ಯತೆ ಮೇಲೆ ಅವಶ್ಯಕತೆಯಿರುವ ಕಡೆಯಲ್ಲಿ ಭೂಮಿ ಖರೀದಿಸಬೇಕು. ಈಗಾಗಲೇ ಜಿಲ್ಲೆಯ 144 ಗ್ರಾಮಗಳಿಗೆ ಮತ್ತು ಉಪವಿಭಾಗ ಮಟ್ಟದಲ್ಲಿ ಸ್ಮಶಾನ ಭೂಮಿ ಸೌಲಭ್ಯ ಕಲ್ಪಿಸಲಾಗಿದೆ. ತೊರವಿ ಗ್ರಾಮದಲ್ಲಿ 4 ಎಕರೆ ಜಮೀನು ಸ್ಮಶಾನಕ್ಕಾಗಿ ಒದಗಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ವಿಶೇಷ ಘಟಕ ಮತ್ತು ಗಿರಿಜನ ಉಪ ಯೋಜನೆಯಡಿ (ಎಸ್‌ಎಫ್‌ಸಿ) ಅನುದಾನವನ್ನು ಕ್ರಿಯಾ ಯೋಜನೆಗೆ ಸಂಬಂಧಿಸಿದ ಕಾಮಗಾರಿಗಳಿಗೆ ಬಳಸಬೇಕು. ಕೃಷಿ ಇಲಾಖೆ ವ್ಯಾಪ್ತಿಯಲ್ಲಿ 1 ಎಕರೆಗಿಂತಲೂ ಕಡಿಮೆ ಜಮೀನು ಹೊಂದಿದವರಿಗೂ ಸ್ಪಿಂಕ್ಲರ್ ಪೈಪ್ ನೀಡುವ ವ್ಯವಸ್ಥೆ ಆಗಬೇಕು. ನಗರ ವ್ಯಾಪ್ತಿಯಲ್ಲಿ ವಿದ್ಯಾವಂತ ನಿರುದ್ಯೋಗಿ ವಿದ್ಯಾರ್ಥಿಗಳಿಗಾಗಿ ನಾಗರೀಕಾ ಸೇವಾ ಪರೀಕ್ಷೆ ಮತ್ತು ಇತರೆ ಹುದ್ದೆಗಳ ಸಂಬಂಧ ಪರೀಕ್ಷಾ ಪೂರ್ವ ತರಬೇತಿ ನೀಡಲು ತರಬೇತಿ ಕೇಂದ್ರ ತೆರೆಯುವ ಬಗ್ಗೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲೆಯಾದ್ಯಂತ ದೌರ್ಜನ್ಯ ಪ್ರಕರಣಗಳು ನಿಯಂತ್ರಣ ಆಗಬೇಕು. ಈ ಕುರಿತು ಜಾಗೃತಿ ಸಹ ಮೂಡಿಸಬೇಕು. ಉದ್ಯೋಗ, ಶಿಕ್ಷಣ, ಸಾಲ ಸೌಲಭ್ಯಗಳಿಗೆ ನೆರವಾಗಿ ಜೀವನದಲ್ಲಿ ನಿರಾಸೆ ಆದವರನ್ನು ಸಕಾಲಕ್ಕೆ ಸ್ಪಂದಿಸುವಂತೆ ಸಲಹೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಹೆಚ್ಚುವರಿ ಪೊಲೀಸ್ ಅಧಿಕಾರಿ ರಾಮ ಅರಿಸಿದ್ದಿ, ಉಪ ವಿಭಾಗಾಧಿಕಾರಿ ಸ್ನೇಹಲ್ ಲೋಖಂಡೆ, ಡಿಎಸ್ಪಿ ಲಕ್ಷಿ ನಾರಾಯಣ್, ಸಮಿತಿಯ ಸದಸ್ಯರಾದ ಅಡಿವೆಪ್ಪ ಸಾಲಗಲ್ಲ, ಅರವಿಂದ ಸಾಲವಾಡಗಿ, ರಾಜಶೇಖರ್ ಕೂಚಬಾಳ, ಸುರೇಶ ಮನೂರ, ವಿನಾಯಕ ಗುಣಸಾಗರ್, ಬಸವರಾಜ ಪೂಜಾರಿ, ಗಣಪತಿ ಬಾಣಿಕೋಲ, ಶಿವಾನಂದ ಪಟ್ಟೇದ, ಅಶೋಕ ಕರೆಕಲ್ಲ, ಮತ್ತಣ್ಣ ಸಾಸನೂರ ಅವರು ಜಿಲ್ಲೆಯ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹೇಶ ಪೋದ್ದಾರ ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.