ETV Bharat / state

ಯಾವ ಪಾರ್ಟಿಯಿಂದಾದ್ರೂ ಸರಿ, ದಲಿತ ಸಿಎಂ ಆಗಲೇಬೇಕು: ರಮೇಶ ಜಿಗಜಿಣಗಿ

author img

By

Published : Apr 28, 2022, 5:53 PM IST

ನನಗೆ ದಲಿತ ಸಿಎಂ ಆಗುವಂತೆ ಪಾರ್ಟಿ ಸೂಚಿಸಿದರೆ ಅದರಂತೆ ನಡೆಯುವೆ. ಜೀವನದಲ್ಲಿ ನಾನು ಯಾವುದಕ್ಕೂ ಆಸೆ ಪಟ್ಟಿಲ್ಲ, ಸಾಮಾನ್ಯ ಜನರ ಜತೆ ಇರುತ್ತೇನೆ ಎಂದು ಸಿಎಂ ಆಗುವ ಕನಸನ್ನು ರಮೇಶ್‌ ಜಿಗಜಿಣಗಿ ಪರೋಕ್ಷವಾಗಿ ವ್ಯಕ್ತಪಡಿಸಿದರು.

ಯಾವ ಪಾರ್ಟಿಯಿಂದಾದರೂ ಸರಿ ದಲಿತ ಸಿಎಂ ಆಗಲೇಬೇಕು ಎಂದ ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ಅವರು ದುಡ್ಡು ತಿಂದರು, ಇವರು ದುಡ್ಡು ತಿಂದರು ಎಂದು ಸುಮ್ಮನೆ ಭಾಷಣ ಮಾಡುವುದಲ್ಲ. ಯಾರ್ಯಾರು ರೊಕ್ಕ ಹೊಡೀತಾರೆ ಎನ್ನುವುದು ನನಗೂ ಗೊತ್ತು. ರೊಕ್ಕ ಮುಂದಿಟ್ಟಾಗ ರೊಕ್ಕಾ ತಗೀ ಎಂದು ಹೇಳುವ ಗಂಡಸ್ತನ ಇರಬೇಕು ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಪರೋಕ್ಷವಾಗಿ ಸ್ವಪಕ್ಷೀಯ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ವಿರುದ್ಧ ವಾಗ್ದಾಳಿ ನಡೆಸಿದರು.

'ದಲಿತ ಸಿಎಂ ಆಗಲೇಬೇಕು': ನೂರಕ್ಕೆ ನೂರು ಪರ್ಸೆಂಟ್ ರಾಜ್ಯದಲ್ಲಿ ದಲಿತ ಸಿಎಂ ಆಗಬೇಕು ಎನ್ನುವ ಬೇಡಿಕೆ ನನ್ನದು. ಯಾವ ಪಾರ್ಟಿಯಿಂದ ಆದರೂ ಸರಿ ದಲಿತ ಸಿಎಂ ಆಗಬೇಕು. ನಾನು ಆ ಪಾರ್ಟಿ, ಈ ಪಾರ್ಟಿ ಎಂದು ಹೇಳುವುದಿಲ್ಲ. ಮುಂದಿನ ಚುನಾವಣೆ ಸಿಎಂ ಬೊಮ್ಮಾಯಿ ನೇತೃತ್ವ ಬೇಡ ಅಂತಲೂ ಹೇಳುವುದಿಲ್ಲ. ನನಗೆ ದಲಿತ ಸಿಎಂ ಆಗುವಂತೆ ಪಾರ್ಟಿ ಸೂಚಿಸಿದರೆ ಅದರಂತೆ ನಡೆಯುವೆ. ಜೀವನದಲ್ಲಿ ನಾನು ಯಾವುದಕ್ಕೂ ಆಸೆ ಪಟ್ಟಿಲ್ಲ, ಸಾಮಾನ್ಯ ಜನರ ಜತೆ ಇರುತ್ತೇನೆ ಎಂದು ಸಿಎಂ ಆಗುವ ಕನಸನ್ನು ಪರೋಕ್ಷವಾಗಿ ವ್ಯಕ್ತಪಡಿಸಿದರು.

ಇದನ್ನೂ ಓದಿ: ರಾಜ್ಯದಲ್ಲಿರೋದು ಡಬಲ್ ಎಂಜಿನ್ ಸರ್ಕಾರವಲ್ಲ, ಡೀಲಿಂಗ್ ಸರ್ಕಾರ: ದಿನೇಶ್ ಗುಂಡೂರಾವ್

ಮುಂದುವರೆದು ಮಾತನಾಡಿ, ಸಚಿವ ಗೋವಿಂದ ಕಾರಜೋಳ ನನ್ನ ಕುಲಬಾಂಧವ. ಮುಂದಿನ ಚುನಾವಣೆಯಲ್ಲಿ ನಾಗಠಾಣ ಕ್ಷೇತ್ರದಿಂದ ನಿಲ್ಲುತ್ತಾರೋ, ಅವರ ಮಗನನ್ನು ನಿಲ್ಲಿಸುತ್ತಾರೋ ಅವರಿಗೆ ಬಿಟ್ಟ ವಿಚಾರ. ಹೈಕಮಾಂಡ್​ ರಾಜ್ಯ ರಾಜಕಾರಣಕ್ಕೆ ಹೋಗಿ ಎಂದರೆ ನಾನು ಸಿದ್ಧ ಎಂದು ಇದೇ ವೇಳೆ ತಿಳಿಸಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.