ವಿಜಯಪುರ: ಜಿಲ್ಲೆಯಲ್ಲಿ ನಡೆದ 15ನೇ ರಾಜ್ಯಮಟ್ಟದ ಸೈಕ್ಲಿಂಗ್ ಚಾಂಪಿಯನ್ಶಿಪ್ನಲ್ಲಿ ವಿಜಯಪುರದ ಕ್ರೀಡಾನಿಲಯ 91 ಅಂಕ ಪಡೆದು ಸಮಗ್ರ ವೀರಾಗ್ರಣಿ ಪ್ರಶಸ್ತಿ ಬಾಚಿಕೊಳ್ಳುವ ಮೂಲಕ ತನ್ನ ಸೈಕ್ಲಿಂಗ್ನಲ್ಲಿ ಪಾರುಪತ್ಯ ಮುಂದುವರೆಸಿದೆ.
ಮೈಸೂರು 36 ಅಂಕ ಗಳಿಸುವ ಮೂಲಕ ರನ್ನರ್ ಅಪ್ಗೆ ತೃಪ್ತಿಕೊಳ್ಳಬೇಕಾಯಿತು. ಚಾಂಪಿಯನಶಿಪ್ನಲ್ಲಿ ರಾಜ್ಯದ ಮೂಲೆ ಮೂಲೆಯಿಂದ 125 ಸೈಕ್ಲಿಸ್ಟ್ಗಳು ಭಾಗವಹಿಸಿದ್ರು. ಕರ್ನಾಟಕ ಅಮೇಚ್ಯೂರ್ ಸೈಕ್ಲಿಂಗ್ ಅಸೋಸಿಯೇಷನ್ ಹಾಗೂ ವಿಜಯಪುರ ಅಮೇಚ್ಯೂರ್ ಸೈಕ್ಲಿಂಗ್ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ನಡೆದ 2 ದಿನಗಳ ಈ ಸೈಕ್ಲಿಂಗ್ ಚಾಂಪಿಯನಶಿಪ್ನಲ್ಲಿ ಮಹಿಳೆಯರ ವಿಭಾಗದಲ್ಲಿ ಇಬ್ಬರು ಕ್ರೀಡಾಪಟುಗಳು ತಲಾ ಮೂರು ಚಿನ್ನದ ಪದಕ ಗಳಿಸಿ ಗಮನ ಸೆಳೆದರು.
14, 16, ಬಾಲಕ ಹಾಗೂ ಬಾಲಕಿಯರಿಗಾಗಿ 4.5 ಕಿ.ಮೀ ಅಂತರದ ಮತ್ತು18 ವರ್ಷದ ಪುರುಷರಿಗಾಗಿ 9 ಕಿ.ಮೀ. ಅಂತರದ ಮೌಂಟೆನ್ ಬೈಕ್ ಸೈಕ್ಲಿಂಗ್ ಆಯೋಜಿಸಲಾಗಿತ್ತು. ಇಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದ 32 ಸೈಕ್ಲಿಸ್ಟ್ಗಳು ಮುಂದಿನ ತಿಂಗಳು ಪೂನಾದಲ್ಲಿ ನಡೆಯುವ ರಾಷ್ಟ್ರಮಟ್ಟದ ಸೈಕ್ಲಿಂಗ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲಿದ್ದಾರೆ.