ವಿಜಯಪುರ: ಕೌನ್ ಬನೇಗಾ ಕರೋಡ್‌ಪತಿ ಹೆಸರಿನಲ್ಲಿ ಮಹಿಳೆಗೆ ಲಕ್ಷಾಂತರ ನಗದು ವಂಚನೆ ಮಾಡಿರುವ ಘಟನೆ ನಗರದ ಶ್ರೀನಗರ ಕಾಲೋನಿಯಲ್ಲಿ ನಡೆದಿದೆ. ಶ್ರೀನಗರ ಕಾಲೋನಿಯ ನಿವಾಸಿ ರೇಣುಕಾ ಬಿರಾದಾರ ಮೋಸ ಹೋಗಿರುವ ಮಹಿಳೆ.
ಮಹಿಳೆಗೆ ಫೋನ್ ಮಾಡಿ ಕೆಬಿಸಿಯಲ್ಲಿ ನೀವು 25 ಲಕ್ಷ ಲಕ್ಕಿ ಡ್ರಾ ವಿನ್ ಆಗಿದ್ದೀರಿ. ಅದಕ್ಕಾಗಿ ನೀವು 12 ಸಾವಿರ ಮುಂಗಡ ಪಾವತಿ ಮಾಡಬೇಕು ಎಂದಿದ್ದರು. ಇದನ್ನು ನಂಬಿ ಮಹಿಳೆ ಮೊದಲು 12 ಸಾವಿರ ಬಳಿಕ 30 ಸಾವಿರ ಹೀಗೆ ಒಟ್ಟು 1.15 ಲಕ್ಷ ರೂ ತುಂಬಿದ್ದರು. ಆ ಬಳಿಕ ಮೋಸ ಹೋಗಿರುವ ಬಗ್ಗೆ ಅರಿತ ಮಹಿಳೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 8582038738 ನಂಬರ್ನಿಂದ ಮೋಸ ಮಾಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಸೈಬರ್ ವಂಚಕರ ಹಾವಳಿ ಹೆಚ್ಚಾಗುತ್ತಿದ್ದು, ಪೊಲೀಸರು ಜಾಗೃತಿ ಮೂಡಿಸುತ್ತಲೇ ಇದ್ದಾರೆ. ಆದರೂ ಜನ ವಂಚನೆಗೊಳಗಾಗುತ್ತಲೇ ಇದ್ದಾರೆ.
(ಇದನ್ನೂ ಓದಿ: 231 ಚುನಾವಣೆಗಳಲ್ಲಿ ಸೋತು ರಾಷ್ಟ್ರಪತಿ ಸ್ಥಾನಕ್ಕೂ ನಾಮಪತ್ರ ಸಲ್ಲಿಸಿದ ಉತ್ಸಾಹಿ!)