ವಿಜಯಪುರ: ಬನದ ಹುಣ್ಣಿಮೆ ನಿಮಿತ್ತ ತಾಳಿಕೋಟೆ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಅದ್ಧೂರಿಯಾಗಿ ಜಾತ್ರೆ ನೆರವೇರಿತು. ಕೋವಿಡ್ ನಿಯಮ ಗಾಳಿ ತೂರಿ ಸಾವಿರಾರು ಭಕ್ತರು ಸೇರಿ ರಥೋತ್ಸವ ಆಚರಿಸಿದರು. ಬಳಗಾನೂರ ಗ್ರಾಮದ ನೀಲಗಂಗಾಂಬಿಕೆ ದೇವಿ ಜಾತ್ರೆ ಹಿನ್ನೆಲೆ ಗುಂಪು - ಗುಂಪಾಗಿ ಸೇರಿ ತೇರು ಎಳೆದು, ಸಾಮಾಜಿಕ ಅಂತರ ಮರೆತು ಜನರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಕೋವಿಡ್ನಿಂದಾಗಿ ಜಿಲ್ಲೆಯ ಎಲ್ಲ ಜಾತ್ರೆಗಳನ್ನು ಜಿಲ್ಲಾಡಳಿತ ಈಗಾಗಲೇ ರದ್ದು ಮಾಡಿ ಆದೇಶ ಹೊರಡಿಸಿದೆ. ಆದರೆ, ಗ್ರಾಮಸ್ಥರು ನಿಷೇಧದ ಮಧ್ಯೆಯೂ ರಥೋತ್ಸವ ನೆರವೇರಿಸಿದ್ದಾರೆ. ಜಾತ್ರಾ ಕಮಿಟಿ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೆಲವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕೊಳ್ಳೇಗಾಲ ಶಾಸಕ ಎನ್.ಮಹೇಶ್ಗೆ ಕೊರೊನಾ