ETV Bharat / state

ಕೊರೊನಾ ಪೀಡಿತ ಮಹಿಳೆಗೆ ಹೆರಿಗೆ ಮಾಡಿ ಮಾನವೀಯತೆ ಮೆರೆದ ಜಿಲ್ಲೆಯ ವೈದ್ಯರು - ವಿಜಯಪುರ ಲೇಟೆಸ್ಟ್​ ನ್ಯೂಸ್

ವಿಜಯಪುರ ಜಿಲ್ಲೆಗೆ ಮಹಾರಾಷ್ಟ್ರದ ನವಿಮುಂಬೈಯಿಂದ ವಿಜಯಪುರಕ್ಕೆ ಆಗಮಿಸಿದ್ದ ಕೊರೊನಾ ಸೋಂಕಿತ ಗರ್ಭಿಣಿಗೆ ಹೆರಿಗೆ ಮಾಡಿಸಿದ್ದಾರೆ. ಈ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

Covid -19 patient delivered baby successfully with a help of doctors at Vijayapura
ಕೊರೊನಾ ಪೀಡಿತ ಮಹಿಳೆಗೆ ಹೆರಿಗೆ ಮಾಡಿ ಮಾನವೀಯತೆ ಮೆರೆದ ಜಿಲ್ಲೆಯ ವೈದ್ಯರು
author img

By

Published : May 18, 2020, 7:30 PM IST

ವಿಜಯಪುರ : ಮಹಾರಾಷ್ಟ್ರದ ನವಿಮುಂಬೈಯಿಂದ ವಿಜಯಪುರಕ್ಕೆ ಆಗಮಿಸಿದ್ದ ಕೋವಿಡ್-19 ಸೋಂಕಿತ ಗರ್ಭಿಣಿಗೆ ಹೆರಿಗೆ ಮಾಡಿಸುವುದರ ಮೂಲಕ ಇಲ್ಲಿಯ ವೈದ್ಯರು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಮಾಹಿತಿ

ಮೇ 13 ರಂದು ವಿಜಯಪುರ ಜಿಲ್ಲೆಗೆ ಖಾಸಗಿ ವಾಹನದ ಮೂಲಕ ಆಗಮಿಸಿದ್ದ 7 ಜನರಲ್ಲಿ 5 ಜನರಿಗೆ ಕೋವಿಡ್-19 ಸೋಂಕು ದೃಡಪಟ್ಟಿದ್ದು, ಇವರಲ್ಲಿ ಓರ್ವ ಗರ್ಭಿಣಿ (ರೋಗಿ ನಂ- 1176) ಸಹ ಇದ್ದರು. ಜಿಲ್ಲೆಗೆ ಆಗಮಿಸಿದ್ದ ಈ ಮಹಿಳೆಗೆ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. ತೀವ್ರ ವೇದನೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಈ ಮಹಿಳೆಗೆ ಕೋವಿಡ್-19 ಎಂಸಿಎಚ್ ಆಸ್ಪತ್ರೆಯ ವಿಶೇಷ ಹೆರಿಗೆ ಕೋಣೆಯಲ್ಲಿ ನಾರ್ಮಲ್ ಹೆರಿಗೆ ಮಾಡಲಾಗಿದ್ದು, ಜನಿಸಿದ ಮಗುವಿನ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಸ್ಪಷ್ಟಪಡಿಸಿದ್ದಾರೆ.

ಇವರಿಗೆ ಹೆರಿಗೆ ಮಾಡಿಸುವ ಸಂದರ್ಭದಲ್ಲಿ ಎಲ್ಲಾ ತಜ್ಞರು, ವೈದ್ಯರು ಮತ್ತು ಇತರೆ ಸಿಬ್ಬಂದಿಗಳು ಪಿಪಿಇ ಕಿಟ್ ಮತ್ತು ಎನ್95 ಮಾಸ್ಕ್ ಸೇರಿದಂತೆ ಅವಶ್ಯಕವಾದ ಮುನ್ನೆಚ್ಚರಿಕೆ ವಹಿಸಿದ್ದರು.

ಮುಂಬೈಯಿಂದ ಬಂದಿದ್ದ 7 ಜನರಲ್ಲಿ 5 ಜನರಿಗೆ ಕೋವಿಡ್-19 ಸೋಂಕು ತಗುಲಿದ್ದು, ಇಬ್ಬರ ಗಂಟಲು ದ್ರವ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಪಾಸಿಟಿವ್ ರೋಗಿಗಳನ್ನು ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದ್ದು, ಇನ್ನುಳಿದ ಇಬ್ಬರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ.

  • ರೋಗಿ ಸಂಖ್ಯೆ- 1176 (19 ವರ್ಷ) ಮಹಿಳೆ
  • ರೋಗಿ ಸಂಖ್ಯೆ -1177 (45 ವರ್ಷ) ಪುರುಷ
  • ರೋಗಿ ಸಂಖ್ಯೆ -1183 (10 ವರ್ಷ) ಬಾಲಕ
  • ರೋಗಿ ಸಂಖ್ಯೆ 1184 (20 ವರ್ಷ) ಯುವಕ
  • ರೋಗಿ ಸಂಖ್ಯೆ 1211 (22 ವರ್ಷ) ಯುವಕ

ಇವರೆಲ್ಲರೂ ಕೊರೊನಾ ಪಾಸಿಟಿವ್ ರೋಗಿಗಳಾಗಿದ್ದು, ಅಂತಾರಾಜ್ಯ ಮಹಾರಾಷ್ಟ್ರ ಮತ್ತು ಮುಂಬೈ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲೆಗೆ 12,500 ಕ್ಕೂ ಹೆಚ್ಚು ಜನರು ವಿವಿಧ ರಾಜ್ಯಗಳಿಂದ ಆಗಮಿಸಿದ್ದು, ಅವರೆಲ್ಲರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ಇಂದು 820 ವಲಸೆ ಕಾರ್ಮಿಕರು ಚಿಪ್ಲೂನ್‍ದಿಂದ ಶ್ರಮಿಕ ಎಕ್ಸ್​ಪ್ರೆಸ್​ ಮೂಲಕ ಆಗಮಿಸಿದ್ದು, ಅವರೆಲ್ಲರ ಸಾಂಸ್ಥಿಕ ಕ್ವಾರಂಟೈನ್‍ಗೆ ಅವಶ್ಯಕ ಕ್ರಮ ಕೈಗೊಳ್ಳಲಾಗಿದೆ ಎಂದರು.

ಜಿಲ್ಲೆಯಲ್ಲಿ ವಿದೇಶ ಸೇರಿದಂತೆ ಇತರ ಪ್ರದೇಶಗಳಿಂದ ಒಟ್ಟು 2,425 ಜನರು ಆಗಮಿಸಿದ ಬಗ್ಗೆ ವರದಿಯಾಗಿದ್ದು, 1,540 ಜನರು 28 ದಿನಗಳ ಐಸೊಲೇಷನ್ ಅವಧಿ ಪೂರ್ಣಗೊಳಿಸಿದ್ದಾರೆ. 845 ಜನರು 1 ರಿಂದ 28 ದಿನಗಳ ರಿಪೋರ್ಟಿಂಗ್ ಅವಧಿಯಲ್ಲಿದ್ದಾರೆ. ಈ ವರೆಗೆ 2,741 ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರಲ್ಲಿ 2,649 ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಇನ್ನೂ 194 ಜನರ ವರದಿ ಬರಬೇಕಾಗಿದೆ. ಈ ವರೆಗೆ 59 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ 37 ಜನರು ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಆಸ್ಪತ್ರೆಯಲ್ಲಿ ಸದ್ಯ 19 ಸಕ್ರೀಯ ರೋಗಿಗಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.