ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಲಾಲ್ ಬಹದ್ದೂರ್ ಶಾಸ್ತ್ರಿ (ಆಲಮಟ್ಟಿ) ಜಲಾಶಯ ಭರ್ತಿಯಾಗಲು ಕ್ಷಣಗಣನೆ ಆರಂಭವಾಗಿದೆ.
519.60 ಮೀಟರ್ ಸಾಮರ್ಥ್ಯದ ಜಲಾಶಯದಲ್ಲಿ ಇಂದು ಬೆಳಗ್ಗಿನ ಹೊತ್ತಿಗೆ 518.69 ಮೀಟರ್ನಷ್ಟು ನೀರು ಸಂಗ್ರಹವಾಗಿದೆ. ಆದರೆ, ಮಹಾರಾಷ್ಟ್ರದ ಕೃಷ್ಣಾ ಕಣಿವೆಯಲ್ಲಿ ಮಳೆ ಅಬ್ಬರ ಕಡಿಮೆಯಾಗಿದ್ದು ಜಲಾಶಯದ ಒಳಹರಿವು ಕಡಿಮೆಯಾಗಿದೆ.
ಇಂದು (ಜುಲೈ 5) 1,74,340 ಲಕ್ಷ ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬಂದಿದೆ, 1,68,912 ಲಕ್ಷ ಕ್ಯೂಸೆಕ್ ನೀರು ನದಿ ಬಿಡಲಾಗಿದೆ. ಕೃಷ್ಣಾಭಾಗ್ಯ ಜಲ ನಿಗಮ (KBJN) ಅಧಿಕಾರಿಗಳು ನೀರು ಸಂಗ್ರಹಕ್ಕೆ ಮುಂದಾದ ಕಾರಣ ಕಡಿಮೆ ಪ್ರಮಾಣದಲ್ಲಿ ನದಿಗೆ ಹರಿಸಲಾಗ್ತಿದೆ.
ವಿದ್ಯುತ್ ಉತ್ಪಾದನೆ: 55 ಮೆಗಾವ್ಯಾಟ್ ಸಾಮರ್ಥ್ಯದ 5 ಘಟಕ ಹಾಗೂ 15 ಮೆಗಾವ್ಯಾಟ್ ಸಾಮರ್ಥ್ಯದ ಒಂದು ಘಟಕ ಸೇರಿ ಒಟ್ಟು 6 ಘಟಕಗಳು ಇರುವ ವಿದ್ಯುದಾಗಾರದಲ್ಲಿ ವಿದ್ಯುತ್ ಉತ್ಪಾದನೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
26 ಗೇಟ್ಗಳ ಮೂಲಕ ನೀರು ಹೊರಕ್ಕೆ: ಜಲಾಶಯದ ಎಲ್ಲಾ 26 ಗೇಟ್ಗಳ ಮೂಲಕ 1,68,912 ಲಕ್ಷ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಒಳಗೆ ಜಲಾಶಯ ಸಂಪೂರ್ಣ ಭರ್ತಿಯಾಗಲಿದೆ.
ಕೃಷ್ಣಗೆ ಬಾಗಿನ: ಕೋವಿಡ್ ಹೆಚ್ಚಳವಾಗಿರುವ ಕಾರಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಾರಿ ಕೃಷ್ಣ ನದಿಗೆ ಬಾಗಿನ ಅರ್ಪಿಸುವುದು ಅನುಮಾನವಾಗಿದೆ. ಸಿಎಂ ಬದಲಾಗಿ ಸಚಿವರು, ಇಲ್ಲವೇ ಅಧಿಕಾರಿಗಳು ಬಾಗಿನ ಅರ್ಪಿಸಬಹುದು.