ETV Bharat / state

ಮಾಸ್ಕ್​ ಇಲ್ಲದೆ ಹೊರ ಬಂದ್ರೇ ಬೀಳುತ್ತೆ ದಂಡ!! - vijaypur latest fine news

ಜಿಲ್ಲಾಡಳಿತ ಮಾಸ್ಕ್ ಧರಿಸಿ ಓಡಾಟ ನಡೆಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ರೂ ಜನ ಕ್ಯಾರೇ ಎನ್ನುತ್ತಿರಲಿಲ್ಲ. ಹೀಗಾಗಿ ಪಾಲಿಕೆ ಸಿಬ್ಬಂದಿ ಸಾರ್ವಜನಿಕ ಸ್ಥಳಗಳಲ್ಲಿ ಸಂಚಾರ ನಡೆಸುವವರನ್ನು ತಡೆದು ದಂಡ ಹಾಕುತ್ತಿರುವ ದೃಶ್ಯ ಕಂಡು ಬರುತ್ತಿದೆ.

corporation fine
ಮಾಸ್ಕ್ ಧರಿಸದಿದ್ರೆ ಬೀಳುತ್ತೆ ದಂಡ
author img

By

Published : May 6, 2020, 7:14 PM IST

ವಿಜಯಪುರ : ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಮಾಸ್ಕ್​ ಧರಿಸದೆ ರಸ್ತೆಯಲ್ಲಿ ಓಡಾತ್ತಿರುವವರನ್ನು ಗುರುತಿಸಿ ಮಹಾನಗರ ಪಾಲಿಕೆ ಸಿಬ್ಬಂದಿ 200 ರೂ. ದಂಡ ವಿಧಿಸುತ್ತಿದ್ದಾರೆ.

ನಗರದ ಗಾಂಧಿ ವೃತ್ತ, ಬಸವೇಶ್ವರ ಸರ್ಕಲ್, ಸಿದ್ದೇಶ್ವರ ಮಂದಿರ, ಕೇಂದ್ರ ಬಸ್ ನಿಲ್ದಾಣ ಸೇರಿ ನಗರದ ಹಲವು ಭಾಗಗಳಲ್ಲಿ ಮಹಾನಗರ ಪಾಲಿಕೆ ಸಿಬ್ಬಂದಿ ಮಾಸ್ಕ್​ ಧರಿಸದೆ ತಿರುಗುತ್ತಿರುವವರಿಗೆ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆ. ಜಿಲ್ಲಾಡಳಿತ ಮಾಸ್ಕ್ ಧರಿಸಿ ಓಡಾಟ ನಡೆಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ರೂ ಜನ ಕ್ಯಾರೇ ಎನ್ನುತ್ತಿರಲಿಲ್ಲ. ಹೀಗಾಗಿ ಪಾಲಿಕೆ ಸಿಬ್ಬಂದಿ ಸಾರ್ವಜನಿಕ ಸ್ಥಳಗಳಲ್ಲಿ ಸಂಚಾರ ನಡೆಸುವವರನ್ನು ತಡೆದು ದಂಡ ಹಾಕುತ್ತಿರುವ ದೃಶ್ಯ ಕಂಡು ಬರುತ್ತಿದೆ.

ಪಾಲಿಕೆಯ 3 ಸಿಬ್ಬಂದಿ ಸೇರಿಸಿ ಒಂದು ಗುಂಪು ಮಾಡಲಾಗಿದೆ. ಹೀಗೆ ಒಟ್ಟು 19 ತಂಡ ರಚನೆ ಮಾಡಲಾಗಿದೆ. ಈ ತಂಡಗಳು ರಸ್ತೆಯಲ್ಲಿ ಗಸ್ತು ತಿರುಗಿ ದಂಡ ವಿಧಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.