ETV Bharat / state

ವಿಜಯಪುರ ತಹಸೀಲ್ದಾರ್ ಕಚೇರಿ ಸಿಬ್ಬಂದಿಗೆ ಸೋಂಕು, ಸೀಲ್​ಡೌನ್‌ನಿಂದ ಜನರಿಗೆ ಪ್ರಾಬ್ಲಂ - vijypur tahasildar office news

ಮೂಲಗಳ ಪ್ರಕಾರ, ವಿಜಯಪುರ ತಹಸೀಲ್ದಾರ್ ಕಚೇರಿಯ ಐವರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎನ್ನಲಾಗಿದೆ. ಸಂಜೆ ಬರುವ ರಾಜ್ಯ ಹೆಲ್ತ್ ಬುಲೆಟಿನ್​ನಲ್ಲಿ ಅಂಕಿಅಂಶ ಪೂರ್ಣ ಪ್ರಮಾಣದಲ್ಲಿ ಲಭ್ಯವಾಗಲಿದೆ.

corona-positive
ತಹಸೀಲ್ದಾರ್ ಕಚೇರಿ ಸಿಬ್ಬಂದಿಗೆ ಕೊರೊನಾ
author img

By

Published : Jul 14, 2020, 3:25 PM IST

ವಿಜಯಪುರ : ತಹಸೀಲ್ದಾರ್ ಕಚೇರಿಯ ಕೆಲ ಸಿಬ್ಬಂದಿಗೆ ಕೊರೊನಾ ಸೋಂಕು ಬಂದ ಹಿನ್ನೆಲೆಯಲ್ಲಿ ಕಚೇರಿಯನ್ನು ಸೀಲ್​ಡೌನ್ ಮಾಡಲಾಗಿದೆ.

ಮಹಾನಗರ ಪಾಲಿಕೆ, ನೀರು ಸರಬರಾಜು ಮಂಡಳಿ, ಎನ್​ಟಿಪಿಸಿ, ಮಹಿಳಾ ವಿಶ್ವವಿದ್ಯಾಲಯ, ಆರೋಗ್ಯ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ ಹಾಗು ಕೆಇಬಿ ಸೇರಿದಂತೆ ಜಿಲ್ಲೆಯ ಹಲವು ಕಚೇರಿ, ಸಂಸ್ಥೆಗಳ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಕಚೇರಿಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ಕೆಲವು ಕಚೇರಿಗಳು ಈಗಾಗಲೇ ಸೀಲ್​ಡೌನ್ ಅವಧಿ ಮುಗಿದು ಸಾರ್ವಜನಿಕ ಸೇವೆ ಮುಂದುವರೆಸಿವೆ. ಈಗ ತಹಸೀಲ್ದಾರ್ ಕಚೇರಿಗೂ ಕೊರೊನಾ ಅಂಟಿಕೊಂಡಿದ್ದು ಒಂದು ದಿನದ ಮಟ್ಟಿಗೆ ಸೀಲ್​ಡೌನ್ ಮಾಡಲಾಗಿದೆ.

ಮೂಲಗಳ ಪ್ರಕಾರ, ತಹಸೀಲ್ದಾರ್ ಕಚೇರಿಯ ಐವರಿಗೆ ಕೊರೊನಾ ಬಂದಿದೆ ಎನ್ನಲಾಗಿದೆ. ಸಂಜೆ ಬರುವ ರಾಜ್ಯ ಹೆಲ್ತ್ ಬುಲಟೆನ್​ನಲ್ಲಿ ಅಂಕಿ ಅಂಶ ಪೂರ್ಣ ಪ್ರಮಾಣದಲ್ಲಿ ಲಭ್ಯವಾಗಲಿದೆ.

ಜನರ ಪರದಾಟ:

ತಹಸೀಲ್ದಾರ್ ಕಚೇರಿ ಸೀಲ್​ಡೌನ್ ಆಗಿರುವ ಮಾಹಿತಿ ಇಲ್ಲದ ಸಾರ್ವಜನಿಕರು ಬೆಳಗ್ಗೆಯಿಂದಲೇ ಕಚೇರಿಗೆ ಆಗಮಿಸಿದ್ದರು. ಕಚೇರಿ ಮುಚ್ಚಲಾಗಿರುವ ತಿಳಿದು ವಾಪಸ್ ಹೋಗಬೇಕಾದ ಪರಿಸ್ಥಿತಿ ಉಂಟಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.