ETV Bharat / state

ಇಬ್ರಾಹಿಂಪುರ ರೈಲ್ವೆ ಮೇಲ್ಸೇತುವೆ ಕಾಮಗಾರಿ ಸ್ಥಗಿತ - ಬೆಂಗಳೂರು-ಸೋಲಾಪುರ ಹೆದ್ದಾರಿ

ಬೆಂಗಳೂರಿಗೆ ನಿತ್ಯ ಹೋಗಿ ಬರುವ ನೂರಾರು ವಾಹನಗಳು ಸುತ್ತುವರೆದು ವಜ್ರ ಹನುಮಾನ ರೈಲ್ವೆ ಗೇಟ್ ಮೂಲಕ ವಾಹನಗಳ ಸಂಚಾರ ಆರಂಭಿಸಲಾಗಿತ್ತು. ಆದರೆ ಕೊವಿಡ್ 2ನೇ ಅಲೆ ಬಂದ ಮೇಲೆ ಇಬ್ರಾಹಿಂಪುರ‌ ಮೇಲ್ಸೇತುವೆ ಕಾಮಗಾರಿ‌ ನಡೆಸುತ್ತಿದ್ದ ಕಾರ್ಮಿಕರು ರಾತ್ರೋರಾತ್ರಿ ಕೆಲಸ ಬಿಟ್ಟು ತಮ್ಮ ರಾಜ್ಯಗಳತ್ತ ಹೋಗಿರುವ ಕಾರಣ ಒಂದು ತಿಂಗಳಿಂದ ಕಾಮಗಾರಿ ಸ್ಥಗಿತವಾಗಿದೆ.

ಕಾಮಗಾರಿ ಸ್ಥಗಿತ
ಕಾಮಗಾರಿ ಸ್ಥಗಿತ
author img

By

Published : Mar 29, 2021, 3:47 PM IST

ವಿಜಯಪುರ: ವಿಜಯಪುರದಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಬೈಪಾಸ್ ರಸ್ತೆಯ ಇಬ್ರಾಹಿಂಪುರ ರೈಲ್ವೆಗೇಟ್ ಮೇಲೆ ನಿರ್ಮಿಸುತ್ತಿರುವ ಮೇಲ್ಸೇತುವೆ ಕಾಮಗಾರಿ ಅರ್ಧಕ್ಕೆ ಸ್ಥಗಿತವಾಗಿದೆ. ಕಳೆದ ಒಂದು ತಿಂಗಳಿಂದ ಕಾರ್ಮಿಕರು ಕಾಮಗಾರಿಯತ್ತ ಸುಳಿದಿಲ್ಲ. ಇದು ಕೊರೊನಾ 2ನೇ ಅಲೆಯ ಎಫೆಕ್ಟ್ ಎನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ.

ಇಬ್ರಾಹಿಂಪುರ ರೈಲ್ವೆ ಗೇಟ್​ನಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಕೇಂದ್ರ ಸರ್ಕಾರದ ಯೋಜನೆಯಲ್ಲಿ ಇಬ್ರಾಹಿಂಪುರ ರೈಲ್ವೆ ಗೇಟ್ ಮೇಲ್ಸೇತುವೆ ನಿರ್ಮಾಣಕ್ಕೆ ವರ್ಷದ ಹಿಂದೆ ಚಾಲನೆ ನೀಡಲಾಗಿತ್ತು.‌ ಈ ಕಾಮಗಾರಿ ಆರಂಭಗೊಂಡ ಕಾರಣ ಐದು ತಿಂಗಳ ಹಿಂದೆ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು.‌

ಇಬ್ರಾಹಿಂಪುರ ರೈಲ್ವೆ ಮೇಲ್ಸೇತುವೆ ಕಾಮಗಾರಿ ಸ್ಥಗಿತ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಹಾಗೂ ಸಂಸದ ರಮೇಶ್​ ಜಿಗಜಿಣಗಿ

ಹೀಗಾಗಿ ಬೆಂಗಳೂರಿಗೆ ನಿತ್ಯ ಹೋಗಿ ಬರುವ ನೂರಾರು ವಾಹನಗಳು ಸುತ್ತುವರೆದು ವಜ್ರ ಹನುಮಾನ ರೈಲ್ವೆ ಗೇಟ್ ಮೂಲಕ ವಾಹನಗಳ ಸಂಚಾರ ಆರಂಭಿಸಲಾಗಿತ್ತು. ಆದರೆ ಕೊವಿಡ್ 2ನೇ ಅಲೆ ಬಂದ ಮೇಲೆ ಇಬ್ರಾಹಿಂಪುರ‌ ಮೇಲ್ಸೇತುವೆ ಕಾಮಗಾರಿ‌ ನಡೆಸುತ್ತಿದ್ದ ಕಾರ್ಮಿಕರು ರಾತ್ರೋರಾತ್ರಿ ಕೆಲಸ ಬಿಟ್ಟು ತಮ್ಮ ರಾಜ್ಯಗಳತ್ತ ಹೋಗಿರುವ ಕಾರಣ ಒಂದು ತಿಂಗಳಿಂದ ಕಾಮಗಾರಿ ಸ್ಥಗಿತವಾಗಿದೆ.

ರೈಲ್ವೆ ಗೇಟ್ ಮೂಲಕ ಲಘು ವಾಹನ ಪ್ರವೇಶಕ್ಕೂ ರೈಲ್ವೆ ಅಧಿಕಾರಿಗಳು ಅನುಮತಿ ನೀಡದ ಕಾರಣ ಜನ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಈಗ ಜಿಲ್ಲಾಡಳಿತ ಕಾಮಗಾರಿ ಗುತ್ತಿಗೆ ಪಡೆದ ಕಂಪನಿ ಹಾಗೂ ರೈಲ್ವೆ ಇಲಾಖೆ ಜತೆ ಮಾತುಕತೆ ನಡೆಸಿ ಯಾವುದಾದರೂ ಒಂದು ವ್ಯವಸ್ಥೆ ಮಾಡಲು ಮುಂದಾಗಿದೆ.

ಆದರೆ ಇತ್ತ ಕಾಮಗಾರಿಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಅಗತ್ಯ ಅನುದಾನ ಬಿಡುಗಡೆ ಮಾಡಿರುವ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರಿಗೆ ಕಾಮಗಾರಿ ಸ್ಥಗಿತದ ಬಗ್ಗೆ ಬೇರೆಯೇ ಮಾಹಿತಿ ಲಭ್ಯವಾಗಿದೆ.

"ಗುತ್ತಿಗೆದಾರರು ಹಾಗೂ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳ ಮಧ್ಯೆ ನಡೆದಿರುವ ಭಿನ್ನಾಭಿಪ್ರಾಯದಿಂದ ಕಾಮಗಾರಿ ಸ್ಥಗಿತವಾಗಿದೆ. ಈ ಕುರಿತು ಗುತ್ತಿಗೆದಾರರೊಂದಿಗೆ ಮಾತನಾಡುವೆ. ಕಾಮಗಾರಿ ಅರಂಭಕ್ಕೆ ಸಿದ್ದರಿಲ್ಲದೇ ಇದ್ದರೆ ಪರ್ಯಾಯವಾಗಿ ಕೇಂದ್ರ ರೈಲ್ವೆ ಇಲಾಖೆಯ ಮೇಲೆ ಒತ್ತಡ ಹೇರಿ ರೈಲ್ವೆ ಗೇಟ್ ತೆರೆದು ಲಘು ವಾಹನಗಳ ಓಡಾಟಕ್ಕೆ ವ್ಯವಸ್ಥೆ ಮಾಡಿಸುವೆ." ಎಂದು ರಮೇಶ ಜಿಗಜಿಣಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ.. 6 ದಿನಗಳ ಬಳಿಕ ಮರಳು ರಾಶಿಯಿಂದ ಮೇಲೆದ್ದ ಸೂಯೆಜ್ ಕಾಲುವೆಯ ಬೃಹತ್ ಹಡಗು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.