ವಿಜಯಪುರ: ಭಾರತ ಗಡಿಯಲ್ಲಿ ಪುಂಡಾಟಿಕೆ ಮೆರೆಯುತ್ತಿರುವ ಚೀನಾಗೆ ತಕ್ಕ ಉತ್ತರ ನೀಡುವಂತೆ ಹಾಗೂ ದೇಶದಲ್ಲಿ ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಗಾಲ್ವನ್ ಪ್ರದೇಶದಲ್ಲಿ ಚೀನಾ ಅಶಾಂತಿ ಉಂಟು ಮಾಡುತ್ತಿದೆ. ಆ ದೇಶದ ಇಂಥ ಕೃತ್ಯಗಳನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಭಾರತೀಯ ಸೈನಿಕರನ್ನು ಹತ್ಯೆ ಮಾಡಿರುವ ಚೀನಾಗೆ ತಕ್ಕ ಉತ್ತರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಈ ವೇಳೆ ಆಗ್ರಹಿಸಲಾಯಿತು.