ವಿಜಯಪುರ : ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಜಾರಿ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಧರಣಿ ನಡೆಸಿದರು.
ರಾಜ್ಯ ಸರ್ಕಾರ ರೈತರನ್ನ ತುಳಿಯುವ ಹುನ್ನಾರ ಮಾಡುತ್ತಿದೆ. ಅಲ್ಲದೇ ಎಪಿಎಂಸಿ ಕಾಯ್ದೆ ತಿದ್ದುಪಡಿ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ವಿದ್ಯುತ್ ಕಾಯ್ದೆ ಜಾರಿ ಮಾಡುವ ಮೂಲಕ ಸರ್ಕಾರ ರೈತರಿಗೆ ಮೋಸ ಮಾಡಿ ಕಾರ್ಪೊರೇಟ್ ಕಂಪನಿಗಳಿಗೆ ಕಣ್ಣಿಗೆ ಬೆಣ್ಣೆ ಹಾಕುವ ಕಾರ್ಯ ಮಾಡುತ್ತಿದೆ. ಕಾಯ್ದೆಗಳ ಜಾರಿ ಮಾಡುವುರಿಂದ ರೈತರು ತಮ್ಮ ಜಮೀನು ಕಳೆದುಕೊಳ್ಳುವಂತಾಗುತ್ತದೆ. ಬೆಳೆದ ಬೆಳಗೆ ಸೂಕ್ತ ಬೆಲೆ ಸಿಗದೇ ನಷ್ಟದ ಹಾದಿಯಲ್ಲಿ ಸಾಗುವಂತಾಗುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದರು.
ಇನ್ನೂ ರಾಜ್ಯ ಸರ್ಕಾರ ಪ್ರವಾಹ ನಿರ್ವಹಣೆಯಲ್ಲಿ ವಿಫಲವಾಗಿದೆ. ಕೊರೊನಾ ವೈರಸ್ ಮಟ್ಟ ಹಾಕಲು ಸಾಮಗ್ರಿಗಳ ಖರೀದಿಯಲ್ಲಿ ಹಗರಣ ನಡೆಸುತ್ತಿದೆ. ತಮ್ಮ ಆಡಳಿತ ವೈಫಲ್ಯತೆಗಳನ್ನ ಮುಚ್ಚಿ ಹಾಕಲು ಜನ ವಿರೋಧಿ ನೀತಿ ಜಾರಿ ಮಾಡಲು ಮುಂದಾಗಿದೆ ಎಲ್ಲ ನೀತಿಗಳನ್ನ ಕೈ ಬಿಡುವಂತೆ ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಧರಣಿ ಸತ್ಯಾಗ್ರಹ ನಡೆಸಿದರು.