ವಿಜಯಪುರ: ಕಾಂಗ್ರೆಸ್ನಿಂದ ದೇಶದ ರಕ್ಷಣೆ ಆಗಲ್ಲ. ಆ ಪಕ್ಷ ತುಕುಡೆ..ತುಕುಡೆ ಗ್ಯಾಂಗ್ಗಳಿಗೆ ಬೆಂಬಲ ಕೊಡುತ್ತದೆ. ಪಾಕಿಸ್ತಾನದ ಐಎಸ್‌ಐಗೆ ಬೆಂಬಲ ಕೊಡೊದೇ ಈ ಗ್ಯಾಂಗ್‌ನ ಉದ್ದೇಶವಾಗಿದೆ. ಹಿಜಾಬ್ ವಿವಾದದ ಬಳಿಕ ಇವರ ಬಣ್ಣ ಬಯಲಾಗ್ತಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ವಾಕ್ಸಮರ ನಡೆಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಒಂದಿಲ್ಲೊಂದಿನ ಇವರು ದೇಶಕ್ಕೆ ಮಾರಕವಾಗ್ತಾರೆ. ಇವರನ್ನು ಬಗ್ಗು ಬಡಿಯಲೇಬೇಕು. ಈ ವಿವಾದದಲ್ಲಿ ಇರುವವರ ಸರ್ಕಾರಿ ಸೌಲಭ್ಯಗಳನ್ನು ಕಡಿತಗೊಳಿಸಬೇಕು. ಗೃಹ ಇಲಾಖೆ ಎಲ್ಲವನ್ನೂ ಗಮನಿಸ್ತಿದೆ. ಹೈಕೋರ್ಟ್ ತೀರ್ಮಾನದ ಬಳಿಕ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.
ಇದನ್ನೂ ಓದಿ: ಫೆ. 14 ರಿಂದ ಅಧಿವೇಶನ: ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ
ಹಿಜಾಬ್ ಪರ ವಿದ್ಯಾರ್ಥಿನಿಯರಿಗೆ ತರಬೇತಿ ವಿಚಾರ: ಉಡುಪಿ ಶಾಸಕ ರಘುಪತಿ ಭಟ್ ಸಾಕಷ್ಟು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಇಷ್ಟು ದಿನ ಯುವತಿಯರು ಹಿಜಾಬ್ ಹಾಕಿರಲಿಲ್ಲ. ಶಾಸಕರು ದಾಖಲೆಯಾಗಿ ಫೋಟೋ ನೀಡಿದ್ದಾರೆ. ಉದ್ದೇಶಪೂರ್ವಕವಾಗಿಯೇ ಇದೆಲ್ಲಾ ನಡೆಯುತ್ತಿವೆ. ಕರಾವಳಿ ಭಾಗದಲ್ಲಿ ದೇಶ ವಿರೋಧಿ ಚಟುವಟಿಕೆ ಹೆಚ್ಚಾಗಿವೆ. ಇದಕ್ಕಾಗಿ ತರಬೇತಿ ಕೊಡುವ ವ್ಯವಸ್ಥಿತ ಕೆಲಸ ನಡೆಯುತ್ತಿದೆ. ಹೀಗಾಗಿ ಗೃಹ ಇಲಾಖೆ ಒಳ್ಳೆಯ ಅಧಿಕಾರಿಗಳನ್ನು ನೇಮಕ ಮಾಡುತ್ತಿದೆ ಎಂದು ತಿಳಿಸಿದರು.
ಮೂರನೇ ಪೀಠದ ಸಭೆಗೆ ನಿರಾಣಿ ಸಹೋದರ ಭಾಗಿ ವಿಚಾರವಾಗಿ ಪ್ರತಿಕ್ರಿಯಿಸಿದ ಯತ್ನಾಳ, ನಿರಾಣಿ ಇಡೀ ಸಮುದಾಯವನ್ನು ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳಲು ಯತ್ನಿಸಿದ್ದರು. ತನಗೆ ಮಂತ್ರಿ ಹುದ್ದೆ ಸಿಗದೇ ಇದ್ದಾಗ ಪಂಚಮಸಾಲಿ ಪೀಠವನ್ನು ಉಪಯೋಗ ಮಾಡಿಕೊಳ್ತಿದ್ದರು ಎಂದು ಆರೋಪಿಸಿದರು.
ಇದನ್ನೂ ಓದಿ: ಚಿನ್ನ ಖರೀದಿಸಲು ಬಂದು ಕಳ್ಳತನ.. ಕ್ಷಣಾರ್ಧದಲ್ಲಿ ಲಕ್ಷಾಂತರ ರೂ.ಮೌಲ್ಯದ ಆಭರಣ ಕದ್ದೊಯ್ದ ಮಹಿಳಾ ಗ್ಯಾಂಗ್
ಈಗ ಆ ಕಾಲ ಹೋಯ್ತು, ಜನ ಜಾಗೃತರಾಗಿದ್ದಾರೆ. ಜನರಿಗೆ ಸೌಲಭ್ಯ ಬೇಕು. ಯತ್ನಾಳ್, ನಿರಾಣಿಯನ್ನು ಮಂತ್ರಿ ಮಾಡೋಕೆ ಪೀಠಗಳಿಲ್ಲ. ನಿರಾಣಿಯನ್ನು ಮಂತ್ರಿ ಮಾಡಲೇಬೇಕು ಅಂದಾಗ ಸಮಾಜದಲ್ಲಿ ಜಾಗೃತಿ ಶುರುವಾಯಿತು. ಮೂರನೇ ಪೀಠದಿಂದ ನಮ್ಮ ಏಕತೆ, ಹೋರಾಟಕ್ಕೆ ಯಾವುದೇ ಹಿನ್ನಡೆ ಆಗೋದಿಲ್ಲ ಎಂದರು.
ಸಂಗಮೇಶ ನಿರಾಣಿ ಅವರು ಹರಿಹರ ಪೀಠ ಮೊದಲು ಎಂದು ಹೇಳಿಕೆ ನೀಡಿರುವ ವಿಚಾರವಾಗಿ ಮಾತನಾಡಿದ ಯತ್ನಾಳ, ಅವರೇನು ಜಗದ್ಗುರುನಾ? ಎಂದು ಲೇವಡಿ ಮಾಡಿದರು. ಮೂರನೇ ಪೀಠ ನಿರಾಣಿ ಪೀಠ ಅಂತ ಮೊದಲೇ ಹೇಳಿದ್ದೆ. ಅವರು ಕೋಟ್ಯಂತರ ರೂಪಾಯಿ ಕೊಟ್ಟು ಪೀಠ ಮಾಡ್ತಿದ್ದಾರೆ. ಮಂತ್ರಿ ಸ್ಥಾನ ಉಳಿಸಿಕೊಳ್ಳಲು ಮೂರನೇ ಪೀಠ ಸೃಷ್ಟಿಸುತ್ತಿದ್ದಾರೆ. ಮೊದಲೇ ಹೇಳಿದ್ದೆ, ಈಗ ಸತ್ಯವಾಗಿದೆ, ಮುಂದಿನ ದಿನಗಳಲ್ಲಿ ಜನ ಸರಿಯಾಗಿ ಉತ್ತರ ಕೊಡ್ತಾರೆ ಎಂದು ಹೇಳಿದರು.