ಮುದ್ದೇಬಿಹಾಳ : ಕೊರೊನಾ ವಾರಿಯರ್ಸ್ಗಳಾಗಿ ತಮ್ಮ ಜೀವ ಒತ್ತೆ ಇಟ್ಟು ಹೋರಾಟ ನಡೆಸುತ್ತಿರುವ ಅಧಿಕಾರಿಗಳ ಪರಿಶ್ರಮಕ್ಕೆ, ವಿಧಾನಪರಿಷತ್ ಸದಸ್ಯ ಸುನೀಲಗೌಡ ಪಾಟೀಲರು ಪತ್ರ ಮುಖೇನ ಅಭಿನಂದನೆ ಸಲ್ಲಿಸಿದ್ದಾರೆ.

ವಿಜಯಪುರ - ಬಾಗಲಕೋಟೆ ಸ್ಥಳೀಯ ಸಂಸ್ಥೆಯನ್ನು ಪ್ರತಿನಿಧಿಸುತ್ತಿರುವ ಸುನೀಲಗೌಡರು, ಕೊರೊನಾ ವಾರಿಯರ್ಸ್ಗಳಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಮನವಿ ಮಾಡಿದ್ದಾರೆ.
ಈ ಕುರಿತು ವಿಧಾನಪರಿಷತ್ ಸದಸ್ಯ ಸುನೀಲಗೌಡರು ಮುದ್ದೇಬಿಹಾಳ ಪುರಸಭೆಗೆ ಬರೆದಿರುವ ಪತ್ರ ಈ ಟಿವಿ ಭಾರತ್‌ಗೆ ದೊರೆತಿದೆ.