ETV Bharat / state

ಕ್ರಿಕೆಟ್‌ ಪಂದ್ಯಾವಳಿ ವೇಳೆ ಮಾರಾಮಾರಿ: ಹಲವರಿಗೆ ಗಾಯ, 10 ಜನರ ಬಂಧನ

author img

By

Published : Jan 12, 2021, 9:04 PM IST

ಮುದ್ದೇಬಿಹಾಳದ ತಾಳಿಕೋಟೆ ಪಟ್ಟಣದಲ್ಲಿ ಅಂಜುಮನ್ ಕಾಲೇಜು ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ವೇಳೆ ಸದ್ದಾಂ ಅಲ್ಲಾಭಕ್ಷ ಮನಗೂಳಿ ಹಾಗೂ ಸಿಕಂದರ್ ಮರ್ತೂಜಸಾಬ ಡೋಣಿ ಇವರ ಗುಂಪುಗಳ ಮಧ್ಯೆ ಜಗಳ ಆರಂಭಗೊಂಡಿದ್ದು, ಜಗಳ ತಾರಕಕ್ಕೆ ಏರಿದಾಗ ಕ್ರಿಕೆಟ್ ಬ್ಯಾಟ್, ಸ್ಟಿಕ್​ಗಳಿಂದ ಹೊಡೆದಾಡಿಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ 10 ಜನರನ್ನು ಬಂಧಿಸಲಾಗಿದೆ.

conflict during cricket match
ಕ್ರಿಕೆಟ್‌ ಪಂದ್ಯಾವಳಿ ವೇಳೆ ಮಾರಾಮಾರಿ

ಮುದ್ದೇಬಿಹಾಳ: ತಾಳಿಕೋಟೆ ಪಟ್ಟಣದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಎರಡು ತಂಡಗಳ ಆಟಗಾರರು ಅಂಪೈರ್ ತೀರ್ಮಾನದ ವಿಷಯವಾಗಿ ಹೊಡೆದಾಡಿಕೊಂಡಿದ್ದು, ಹಲವರು ಗಾಯಗೊಂಡು ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆಗೆ‌ ಸಂಬಂಧಿಸಿದಂತೆ ದೂರು ಪ್ರತಿ ದೂರು ದಾಖಲಾಗಿದ್ದು, ಪೊಲೀಸರು ಪುರಸಭೆ ಉಪಾಧ್ಯಕ್ಷ ಮುಸ್ತಫಾ ಚೌಧರಿ ಸೇರಿದಂದತೆ 10 ಜನರನ್ನು ಬಂಧಿಸಿದ್ದಾರೆ. ತಾಳಿಕೋಟೆ ಪಟ್ಟಣದ ಅಂಜುಮನ್ ಕಾಲೇಜು ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ವೇಳೆ ಸದ್ದಾಂ ಅಲ್ಲಾಭಕ್ಷ ಮನಗೂಳಿ ಹಾಗೂ ಸಿಕಂದರ್ ಮರ್ತೂಜಸಾಬ ಡೋಣಿ ಇವರ ಗುಂಪುಗಳ ಮಧ್ಯೆ ಜಗಳ ಆರಂಭಗೊಂಡಿದ್ದು, ಜಗಳ ತಾರಕಕ್ಕೆ ಏರಿದಾಗ ಕ್ರಿಕೆಟ್ ಬ್ಯಾಟ್, ಸ್ಟಿಕ್​ಗಳಿಂದ ಹೊಡೆದಾಡಿದ್ದಾರೆ ಎನ್ನಲಾಗಿದೆ.

ಓದಿ:ವಾಣಿಜ್ಯ ಮಳಿಗೆಯಲ್ಲಿ ಬೆಂಕಿ: ಬಟ್ಟೆ ಅಂಗಡಿ ಭಸ್ಮ

ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇತರೆ ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಘಟನೆಯಲ್ಲಿ ಎರಡೂ ಕಡೆಯ 51 ಜನರ ವಿರುದ್ಧ ದೂರು-ಪ್ರತಿ ದೂರು ತಾಳಿಕೋಟೆ ಪೊಲೀಸರು ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.