ಮುದ್ದೇಬಿಹಾಳ : ತಾಲೂಕಿನ ನಾಲತವಾಡದಲ್ಲಿ 2018ರಲ್ಲಿ ಎಪಿಎಂಸಿ ಆವರಣದಲ್ಲಿ ಜರುಗಿದ್ದ ವಿದ್ಯುತ್ ಅವಘಡದಲ್ಲಿ ಮೃತಪಟ್ಟಿದ್ದ ದುರ್ಗಪ್ಪ ಬಂಡಿವಡ್ಡರ್ ಹಾಗೂ ಗಾಯಾಳು ಗಂಗಪ್ಪ ಚಲವಾದಿ ಅವರ ಕುಟುಂಬಕ್ಕೆ ಹೆಸ್ಕಾಂನಿಂದ ಪರಿಹಾರಧನ ವಿತರಿಸಲಾಗಿದೆ.
ದುರ್ಗಪ್ಪ ಬಂಡಿವಡ್ಡರ್ ಅವರ ಪತ್ನಿ ಲಕ್ಷ್ಮೀಬಾಯಿ ಬಂಡಿವಡ್ಡರ್ ಅವರಿಗೆ ಐದು ಲಕ್ಷ ಹಾಗೂ ಗಾಯಗೊಂಡಿದ್ದ ಗಂಗಪ್ಪ ಚಲವಾದಿ ಅವರಿಗೆ 4 ಲಕ್ಷ ರೂ.ಗಳ ಚೆಕ್‌ನ್ನು ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ,ನಾಲತವಾಡದ ಬಿಜೆಪಿ ಮುಖಂಡ ಎಂ.ಎಸ್.ಪಾಟೀಲ್ ವಿತರಿಸಿದರು.
ಈ ವೇಳೆ ಹೆಸ್ಕಾಂ ಎಇಇ ರಾಜಶೇಖರ ಹಾದಿಮನಿ,ಶಾಖಾಧಿಕಾರಿ ಎಂ.ಎಸ್.ತೆಗ್ಗಿನಮಠ,ಜಿ.ಮಹಾಂತೇಶ ಗಂಗನಗೌಡ್ರ,ತಾ, ಪಂ. ಮಾಜಿ ಸದಸ್ಯ ಖಾಜಾಹುಸೇನ್ ಎತ್ತಿಮನಿ ಮತ್ತಿತರರು ಇದ್ದರು.