ETV Bharat / state

ಗೋವು ಸಾಗಿಸುತ್ತಿದ್ದ ವಾಹನ-ಕಾರಿನ ನಡುವೆ ಡಿಕ್ಕಿ: ಬಂಥನಾಳ ಶ್ರೀಗಳಿಗೆ ಗಾಯ - ವಾಹನ

ಗೋವು ಸಾಗಿಸುತ್ತಿದ್ದ ವಾಹನ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಬಂಥನಾಳ ಶ್ರೀಗಳು ಅಪಾಯದಿಂದ ಪಾರಾಗಿದ್ದಾರೆ.

ಬಂಥನಾಳ ಶ್ರೀಗಳಿಗೆ ಗಾಯ
author img

By

Published : Mar 18, 2019, 5:27 PM IST

ವಿಜಯಪುರ: ಗೋವು ಸಾಗಿಸುತ್ತಿದ್ದ ವಾಹನ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಬಂಥನಾಳ ಶ್ರೀಗಳು ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಆಕಳು ಸಹ ಮೃತಪಟ್ಟಿದೆ. ಇಂಡಿ ತಾಲೂಕಿನ ನಂದ್ರಾಳ ಕ್ರಾಸ್ ಬಳಿ ಈ ಅವಘಡ ನಡೆದಿದೆ.

ಏರ್ ಬ್ಯಾಗ್​ನಿಂದಾಗಿ ಶ್ರೀಗಳು ಅಪಾಯದಿಂದ ಪಾರಾಗಿದ್ದು, ಅವರನ್ನು ಸೊಲ್ಲಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೊಲ್ಲಾಪುರದಿಂದ ವಿಜಯಪುರ ಕಡೆಗೆ ಬಂಥನಾಳ ಸ್ವಾಮೀಜಿಗಳು ಆಗಮಿಸುತ್ತಿದ್ದರು.ಇದೇ ಸಂದರ್ಭದಲ್ಲಿ ಸೊಲ್ಲಾಪುರಕ್ಕೆ ಅಕ್ರಮವಾಗಿ ವಾಹನವೊಂದರಲ್ಲಿ ಖದೀಮರು ಗೋವುಗಳನ್ನು ಸಾಗಿಸುತ್ತಿದ್ದರು. ಈ ವೇಳೆ ಕಾರ್ ಹಾಗೂ 407 ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ.

ಬಂಥನಾಳ ಶ್ರೀಗಳಿಗೆ ಗಾಯ

ಈ ವೇಳೆ ರೊಚ್ಚಿಗೆದ್ದ ನಂದ್ರಾಳ್ ಹಾಗೂ ಭತಗುಣಕಿ ಗ್ರಾಮಸ್ಥರು ಗೋವು ಸಾಗಿಸುತ್ತಿದ್ದ 6 ಜನರನ್ನು ತರಾಟೆಗೆ ತೆಗೆದುಕೊಂಡು, ಖದೀಮರನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ. ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:Body:

ವಿಜಯಪುರ: 

ಗೋವು ಸಾಗಿಸುತ್ತಿದ್ದ ವಾಹನ ಹಾಗೂ ಇನ್ನೊವಾ ಕಾರ್ ನಡುವೆ ಡಿಕ್ಕಿ ಕಾರ್ ನಲ್ಲಿದ್ದ ಬಂಥನಾಳ ಶ್ರೀಗಳಿಗೆ ಗಾಯವಾಗಿದ್ದು ಎರಡು ಆಕಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ನಂದ್ರಾಳ ಕ್ರಾಸ್ ಬಳಿ ನಡೆದಿದೆ.

ಏರ್ ಬ್ಯಾಗ್ ನಿಂದಾಗಿ ಶ್ರೀಗಳು ಅಪಾಯದಿಂದ ಪಾರು ಆಗಿದ್ದು ಅವರನ್ನು ಸೋಲಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೊಲ್ಲಾಪುರ ದಿಂದ ವಿಜಯಪುರ ಕಡೆಗೆ ಬಂಥನಾಳ ಸ್ವಾಮೀಜಿಗಳು ಆಗಮಿಸುತ್ತಿದ್ದರು.

ಸೊಲ್ಲಾಪುರಕ್ಕೆ ಅಕ್ರಮವಾಗಿ ಗೋವು ಸಾಗಿಸುತ್ತಿದ್ದ ಖದೀಮರು  ವಾಹನದಲ್ಲಿದ್ದರು.

ಈ ವೇಳೆ ಕಾರ್ ಹಾಗೂ 407 ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ದುರ್ಘಟನೆಗಳನ್ನು ಸಂಭವಿಸಿದೆ.

ರೊಚ್ಚಿಗೆದ್ದ ನಂದ್ರಾಳ್, ಭತಗುಣಕಿ ಗ್ರಾಮಸ್ಥರು ಗೋವು ಸಾಗಿಸುತ್ತಿದ್ದ 5 ವಾಹನಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಗೋವು ಸಾಗಿಸುತ್ತಿದ್ದ 6ಜನ ಖದೀಮರನ್ನ ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.