ವಿಜಯಪುರ: ಸಿಎಂ ಬದಲಾವಣೆ ಕುರಿತು ರಾಷ್ಟ್ರೀಯ ನಾಯಕರು ಚರ್ಚಿಸುತ್ತಿದ್ದು, ಮೇ 10ರಂದು ಸಿಎಂ ಬದಲಾವಣೆ ಆಗಬಹುದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡುತ್ತಾ, ಸಿಎಂ ಬದಲಾವಣೆ ಕುರಿತು ಚರ್ಚೆಯಾಗುತ್ತಿದೆ. ಪ್ರಧಾನಿ ಅಂತಿಮ ತೀರ್ಮಾನ ಮಾಡುತ್ತಾರೆ ಎಂದರು.
ಸಾಮೂಹಿಕ ನಾಯಕತ್ವದ ಮೂಲಕ ರಾಜ್ಯ ಬಿಜೆಪಿ ಮುಂದಿನ ಚುನಾವಣೆ ಎದುರಿಸಲಿದೆ. ಒಬ್ಬರ ನಾಯಕತ್ವ ಇಲ್ಲ. ನಾನೇ ಪಕ್ಷವನ್ನು ಅಧಿಕಾರಕ್ಕೆ ತರ್ತೀನಿ, ನನ್ನಿಂದಲೇ ಅಂದ್ರೆ ಇಲ್ಲ, ಎಲ್ಲರೂ ಸೇರಿಯೇ 150 ಸೀಟ್ ತರಬೇಕಿದೆ. ನನ್ನಿಂದಲೇ ಸೂರ್ಯೋದಯ ಆಗುತ್ತೆ ಅನ್ನೋದನ್ನು ತಲೆಯಿಂದ ತೆಗೆಯಬೇಕು. ಈಗ ಬಿಜೆಪಿಗೆ ಯಾವುದೇ ಹಂಗಿಲ್ಲ. ಸಾಮೂಹಿಕ ನಾಯಕತ್ವದಲ್ಲಿ ಹೋಗುತ್ತೆ, ಈ ಸಾಮೂಹಿಕ ನಾಯಕತ್ವದಲ್ಲಿ ಯಡಿಯೂರಪ್ಪ ಕೂಡ ಇರ್ತಾರೆ ಎಂದು ತಿಳಿಸಿದರು.
ಸಿಎಂ ಬದಲಾವಣೆ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಇವರು, ಸಿದ್ದರಾಮಯ್ಯಗೆ ಬಿಜೆಪಿ ಭಯ ಇದೆ. ಸಿಎಂ ಬದಲಾವಣೆಯಾದ್ರೆ ಒಬ್ಬರಿಗೆ ಜೈಲಿಗೆ ಹೋಗುವ ಭಯ ಇದೆ, ಇನ್ನೊಬ್ಬರಿಗೆ ಸಿಎಂ ಆಗಲ್ಲ ಎನ್ನುವ ಭಯ ಇದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ರಾಜ್ಯಕ್ಕೆ ಅಮಿತ್ ಶಾ ಆಗಮನ: ಸ್ವಾಗತಕ್ಕೂ ಮುನ್ನ ಬಿಎಸ್ವೈ ಭೇಟಿ ಮಾಡಿದ ಬೊಮ್ಮಾಯಿ