ETV Bharat / state

ಸಿದ್ದೇಶ್ವರ ಶ್ರೀಗಳಿಗೆ ಅನಾರೋಗ್ಯ: ಪಿಎಂ ಮೋದಿ, ಸಿಎಂ ಬೊಮ್ಮಾಯಿ, ಸಚಿವ ಜೋಶಿಯಿಂದ ಶ್ರೀಗಳ ಆರೋಗ್ಯ ವಿಚಾರಣೆ - Union Minister prahlad Joshi

ಅನಾರೋಗ್ಯಕ್ಕೀಡಾಗಿರುವ ವಿಜಯಪುರದ ಸಿದ್ದೇಶ್ವರ ಸ್ವಾಮೀಜಿ ಅವರನ್ನು ನಿನ್ನೆ ರಾತ್ರಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಸೂಕ್ತ ಚಿಕಿತ್ಸೆ ನೀಡಲು ಪ್ರಧಾನಿ ಮೋದಿ ಅವರೂ ಸೂಚಿಸಿದ್ದಾರೆ.

siddeshwar-swamiji
ಸಿದ್ದೇಶ್ವರ ಶ್ರೀಗಳಿಗೆ ಅನಾರೋಗ್ಯ
author img

By

Published : Jan 1, 2023, 7:00 AM IST

Updated : Jan 1, 2023, 4:11 PM IST

ಸಿದ್ದೇಶ್ವರ ಶ್ರೀಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಬಳಿಕ ಸಿಎಂ ಬೊಮ್ಮಾಯಿ ಮಾಧ್ಯಮದವರೊಂದಿಗೆ ಮಾತನಾಡಿದರು.

ವಿಜಯಪುರ: ಅನಾರೋಗ್ಯದಿಂದ ಬಳಲುತ್ತಿದ್ದು ಇದೀಗ ಚೇತರಿಕೆ ಹಾದಿಯಲ್ಲಿರುವ ಸಿದ್ದೇಶ್ವರ ಶ್ರೀಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ರಾತ್ರಿ ವಿಜಯಪುರಕ್ಕೆ ಆಗಮಿಸಿ ಜ್ಞಾನ ಯೋಗಾಶ್ರಮದಲ್ಲಿ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು.

ನಂತರ ಮಾತನಾಡಿದ ಅವರು, ಸಿದ್ದೇಶ್ವರ ಸ್ವಾಮೀಜಿಯವರ ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದಿದ್ದರಿಂದ ವಿಚಾರಿಸಲು ಬಂದಿದ್ದೇನೆ. ಕಳೆದೊಂದು ವಾರದಿಂದ ಪ್ರತಿದಿನ ಕರೆ ಮಾಡಿ ಆರೋಗ್ಯ ವಿಚಾರಿಸುತ್ತಿದ್ದೇನೆ. ಅವರ ಆರೋಗ್ಯದ ಮೇಲೆ ಕಾಳಜಿ ವಹಿಸಲು ಸೂಚಿಸಿದ್ದೇನೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಅವರೊಂದಿಗೆ ಮಾತನಾಡಿ ಶ್ರೀಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಶ್ರೀಗಳು ಆದಷ್ಟು ಬೇಗ ಗುಣಮುಖರಾಗಲೆಂದು ಪ್ರಧಾನಿ ಹಾರೈಸಿದ್ದಾರೆ ಎಂದು ಸಿಎಂ ತಿಳಿಸಿದರು.

ಶ್ರೀಗಳ ಬದುಕೇ ನಮಗೆ ಮಾದರಿ. ಅವರ ಮಾತು, ನಡೆ, ನುಡಿ ನಮ್ಮೆಲ್ಲರಿಗೂ ದಾರಿದೀಪವಾಗಿದೆ. ಪುಣ್ಯಭೂಮಿ ವಿಜಯಪುರವನ್ನು ಅವರ ಕರ್ಮಭೂಮಿ ಮಾಡಿಕೊಂಡಿದ್ದು ನಮ್ಮ ಪುಣ್ಯ ಎಂದು ಬಣ್ಣಿಸಿದರು.

'ಅಪರೂಪದ ತತ್ವಜ್ಞಾನಿ': ನಿಜವಾಗಿಯೂ ಶ್ರೀಗಳು ನಡೆದಾಡುವ ದೇವರು. ಅವರ ಆಚರಣೆ, ವಿಚಾರ ಎಲ್ಲವೂ ಪರಿಶುದ್ಧವಾಗಿದೆ. ಶ್ರೀಗಳು ಅಪರೂಪದ ತತ್ವಜ್ಞಾನಿಯಾಗಿದ್ದಾರೆ. ಬದುಕಿನ ಸೂಕ್ಷ್ಮತೆಯನ್ನು ನಿಖರ, ಸ್ಪಷ್ಟವಾಗಿ ತಿಳಿದುಕೊಂಡಿದ್ದಾರೆ. ಸಮಸ್ಯೆಗಳಿಗೆ ಸರಳವಾಗಿ ಪರಿಹಾರ ಕೊಟ್ಟವರು. ಅವರ ಮಾತುಗಳನ್ನು ಕೇಳಿ ನಾವೆಲ್ಲ ಬದಲಾಗಿದ್ದೇವೆ. ಹಲವಾರು ಬಾರಿ ಶ್ರೀಗಳು ರೈತರ, ನೀರಾವರಿ, ತತ್ವಗಳ ಬಗ್ಗೆ ಗಂಟೆಗಟ್ಟಲೇ ಚರ್ಚೆ ಮಾಡಿದ್ದೇವೆ ಎಂದರು.

ವೈದ್ಯ ತಪಾಸಣೆಯಲ್ಲಿ ಎಲ್ಲ ವರದಿಗಳು ಸಾಮಾನ್ಯವಾಗಿವೆ. ನಾನು ಮುಖ್ಯಮಂತ್ರಿಯಾದಾಗ ಕರೆ ಮಾಡಿ ಮಾಹಿತಿ ನೀಡಿದಾಗ, ನಿಮ್ಮಂತಹವರು ಹುದ್ದೆ ಪಡೆದಿದ್ದು ಸಂತೋಷ. ನಿಮ್ಮಿಂದ ನಾಡಿಗೆ ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡಿದ್ದರು. ಸಮಾಜದಲ್ಲಿ ಮೌಲ್ಯಗಳನ್ನು ಜೀವಂತವಾಗಿಡಲು ಶ್ರೀಗಳ ಅವಶ್ಯಕತೆ ಇದೆ. ಅವರ ಮಾರ್ಗದರ್ಶನ ನಮ್ಮೆಲ್ಲರಿಗೂ ಮುಂದುವರಿಯಲಿ ಎಂದು ಕೋರಿದರು.

ಧರ್ಮದ ಚೌಕಟ್ಟನ್ನು ಮೀರಿ ತತ್ವಗಳ‌ ಆಧಾರದ ಮೇಲೆ ಶ್ರೀಗಳು ಬೆಳೆದಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರಿಗೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಪ್ರಧಾನ ಮಂತ್ರಿಗಳು, ಕೇಂದ್ರ ಸಚಿವ ಜೋಶಿ ಅವರ ಮೂಲಕ ತಿಳಿಸಿದ್ದಾರೆ. ಇದಕ್ಕೆ ಶ್ರೀಗಳು ಕೃತಜ್ಞತೆ ತೋರಿಸಿದ್ದಾರೆ ಎಂದರು.

ಇದನ್ನೂ ಓದಿ: ಸಿದ್ದೇಶ್ವರ ಶ್ರೀಗಳ ಆರೋಗ್ಯದ ಬಗ್ಗೆ ಆತಂಕ ಬೇಡ: ಆಶ್ರಮದ ಸ್ವಾಮೀಜಿಗಳ ಮನವಿ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಶ್ರೀಗಳ ದೇಹದಲ್ಲಿ ಆಕ್ಸಿಜನ್ ಪ್ರಮಾಣ ಕಡಿಮೆಯಾಗಿದೆ ಎಂದು ಮಾಹಿತಿ ಸಿಕ್ಕಿದ್ದು, ಖುದ್ದಾಗಿ ನಾವೇ ಮಾತನಾಡಿಸಿಕೊಂಡು ಹೋಗಲು ಸಿಎಂ ಹಾಗೂ ನಾನು ಬಂದೆವು. ಆರಾಮವಾಗಿದ್ದ ಶ್ರೀಗಳಿಗೆ ಅನಾರೋಗ್ಯ ಉಂಟಾಗಿದ್ದು ಪ್ರಧಾನಿಗಳಲ್ಲೂ ಕಳವಳ ಉಂಟು ಮಾಡಿತ್ತು. ಶ್ರೀಗಳು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಸನ್ನೆಯ ಮೂಲಕ ಪ್ರಧಾನಿಗಳ ಜೊತೆ ಸಂವಹನ ನಡೆಸಿದರು. ಅವಶ್ಯವಿರುವ ಚಿಕಿತ್ಸೆಯ ವ್ಯವಸ್ಥೆ ಮಾಡುವಂತೆ ಪ್ರಧಾನಿಗಳು ನನಗೆ ಸೂಚಿಸಿದರು ಎಂದು ಮಾಹಿತಿ ನೀಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ, ಸಮಾಜ ಎಲ್ಲ ರೀತಿಯ ಸಹಕಾರವನ್ನು ನೀಡಲಿದೆ. ಚಿಕಿತ್ಸೆ ಪಡೆದುಕೊಳ್ಳಲು ವಿನಂತಿ ಮಾಡಲಾಗಿದೆ. ಆದರೆ, ಶ್ರೀಗಳು ಇದಕ್ಕೆ ಒಪ್ಪಿಗೆ ನೀಡುತ್ತಿಲ್ಲ. ಸನ್ನೆ ಮೂಲಕ ಬೇಡ ಎಂಬ ರೀತಿಯಲ್ಲಿ ಹೇಳುತ್ತಿದ್ದಾರೆ. ಆದರೆ, ಚಿಕಿತ್ಸೆಗಾಗಿ ಅವರ ಶಿಷ್ಯರ ಮೂಲಕ ಮನವೊಲಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಶ್ರೀಗಳನ್ನು ವರ್ಷದಿಂದ ಕಾಡುತ್ತಿರುವ ಅನಾರೋಗ್ಯ: 2022ರ ಆರಂಭದಲ್ಲಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದಲ್ಲಿ 'ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿ'ಯಿಂದ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮಕ್ಕೆ ಸಿದ್ದೇಶ್ವರ ಸ್ವಾಮೀಜಿ ಆಗಮಿಸಿದ್ದರು. ಈ ವೇಳೆ ಶ್ರೀಗಳು ಉಳಿದುಕೊಂಡಿದ್ದ ತೋಟದ ಮನೆಯಲ್ಲಿ ಕಾಲು ಜಾರಿ ಬಿದ್ದಿದ್ದರು. ಇದರಿಂದ ಬಲ ಭುಜ ಹಾಗೂ ತೊಡೆಯ ಮೇಲ್ಭಾಗದ ಮೂಳೆ ಮುರಿದಿತ್ತು.

ಇದಕ್ಕೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕನ್ಹೇರಿಯಲ್ಲಿರುವ ಸಿದ್ಧಗಿರಿ ಮಠದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಅದಾದ ಬಳಿಕ ಶ್ರೀಗಳು ನಿರಂತರವಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಲೇ ಇದ್ದಾರೆ. ಕೆಲ ದಿನಗಳಿಂದ ಹೆಚ್ಚು ಅಸ್ವಸ್ಥರಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ತರಹೇವಾರಿ ವದಂತಿ ಹಬ್ಬಿತ್ತು. ಹೀಗಾಗಿ ಮಠ ಯಾವುದೇ ಸುದ್ದಿಗೆ ಮನ್ನಣೆ ನೀಡದಂತೆ ಸೂಚನೆ ನೀಡಿತ್ತು. ಅನಾರೋಗ್ಯದ ಮಧ್ಯೆಯೂ ಸಿದ್ದೇಶ್ವರ ಶ್ರೀಗಳು ಭಕ್ತರಿಗೆ ಈಚೆಗಷ್ಟೇ ದರ್ಶನ ನೀಡಿದ್ದರು.

ಇದನ್ನೂ ಓದಿ: ವಿಜಯಪುರ: ಭಕ್ತರಿಗೆ ದರ್ಶನ ನೀಡಿದ ಸಿದ್ದೇಶ್ವರ ಸ್ವಾಮೀಜಿ

Last Updated : Jan 1, 2023, 4:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.