ETV Bharat / state

ನಿವೃತ್ತ ಶಿಕ್ಷಕನಿಂದ ಮಣ್ಣಿನ ಗಣಪತಿ ನಿರ್ಮಾಣ; ತಂದೆಯ ನೆರವಿಗೆ ವಿದೇಶದಿಂದ ಬರುವ ಮಕ್ಕಳು - ಪರಿಸರ ಸ್ನೇಹಿ

ವಿಜಯಪುರದಲ್ಲಿ ನಿವೃತ್ತ ಶಿಕ್ಷಕರೊಬ್ಬರು ಪರಿಸರಸ್ನೇಹಿ ಗಣಪತಿ ಮೂರ್ತಿ ತಯಾರಿಸುತ್ತಿದ್ದು, ಇವರಿಗೆ ನೆರವಾಗಲು ಮಕ್ಕಳು ವಿದೇಶದಿಂದ ಬಂದಿದ್ದಾರೆ.

ನಿವೃತ್ತ ಶಿಕ್ಷಕನಿಂದ ಮಣ್ಣಿನ ಗಣಪತಿ
ನಿವೃತ್ತ ಶಿಕ್ಷಕನಿಂದ ಮಣ್ಣಿನ ಗಣಪತಿ
author img

By ETV Bharat Karnataka Team

Published : Sep 19, 2023, 12:05 PM IST

Updated : Sep 19, 2023, 2:21 PM IST

ನಿವೃತ್ತ ಶಿಕ್ಷಕನಿಂದ ಮಣ್ಣಿನ ಗಣಪತಿ ನಿರ್ಮಾಣ

ವಿಜಯಪುರ: ನಿಮಗೆ ಗಣೇಶನ ಮೂರ್ತಿ ಬೇಕಿದ್ದರೆ ನೀವು ಇವರ ಬಳಿ ಒಂದು ತಿಂಗಳ ಮುಂಚಿತವೇ ಕಾಯ್ದಿರಿಸಬೇಕು. ಮೂರ್ತಿಗಳ ಆಕರ್ಷಕ ವಿನ್ಯಾಸವೇ ಇದಕ್ಕೆ ಕಾರಣ. ಹೌದು, ಇವರ ಹೆಸರು ಮನೋಹರ ಪತ್ತಾರ. ನಿವೃತ್ತ ಚಿತ್ರಕಲಾ ಶಿಕ್ಷಕರು. ಶಿಲ್ಪ ಅಕಾಡೆಮಿ ನಿರ್ದೇಶಕರಾಗಿದ್ದವರು. ತಲೆತಲಾಂತರದಿಂದ ಬಳುವಳಿಯಾಗಿ ಬಂದ ಆಭರಣ ತಯಾರಿಕೆ ಇವರ ಮೂಲ ಕಸುಬು.

ಆದರೆ ಇವರ ಕುಟುಂಬ ಆಯ್ದುಕೊಂಡಿದ್ದು ಮಾತ್ರ ಮಣ್ಣಿನ ಗಣೇಶ ಮೂರ್ತಿ ತಯಾರಿಕೆ ಕೆಲಸ. ಇವರ ಪುತ್ರರು ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿದ್ದಾರೆ. ಗಣೇಶ ಹಬ್ಬಕ್ಕೆ ಬಂದು ತಂದೆ, ತಾಯಿಯ ಕಾಯಕಕ್ಕೆ ತಪ್ಪದೆ ಬಂದು ನೆರವಾಗುತ್ತಾರೆ. ಇಲ್ಲಿ ಗಣೇಶ ಮೂರ್ತಿ ಬೇಕಾದರೆ ಒಂದು ತಿಂಗಳ ಮುಂಚಿತವಾಗಿ ಬುಕ್ ಮಾಡಬೇಕು. ಅಷ್ಟು ಡಿಮ್ಯಾಂಡ್ ಇವರು ತಯಾರಿಸುವ ಮೂರ್ತಿಗಳಿಗಿದೆ.

ಗಣೇಶ ಚತುರ್ಥಿ ಬಂದಾಗ ಪಿಒಪಿ ಹಾಗೂ ಮಣ್ಣಿನ ಮೂರ್ತಿ ತಯಾರಿಕೆ ಜಟಾಪಟಿ ಸಾಮಾನ್ಯ‌. ಆದರೆ ಬಸವನಾಡು ವಿಜಯಪುರ ನಗರದ ವಾಟರ್ ಟ್ಯಾಂಕ್​ನಲ್ಲಿರುವ ನಿವೃತ್ತ ಶಿಕ್ಷಕ ಮನೋಹರ ಪತ್ತಾರ ತಯಾರಿಸುವ ಮಣ್ಣಿನ ಮೂರ್ತಿಗಳಿಗೆ ಎಲ್ಲಿಲ್ಲದ ಡಿಮ್ಯಾಂಡ್ ಇದೆ‌. ಇವರು ಕೇವಲ 250 ಮಣ್ಣಿನ ಮೂರ್ತಿ ತಯಾರಿಸಿ ನೈಸರ್ಗಿಕ ಬಣ್ಣ ಲೇಪಿಸುತ್ತಾರೆ‌‌‌. ಕುಟುಂಬಕ್ಕೆ ತಮ್ಮ ತಂದೆಯ ಕಾಲದಿಂದಲೂ ಶಾಶ್ವತ ಗ್ರಾಹಕರಿದ್ದಾರೆ. ಮಡಿ, ಶ್ರದ್ಧೆ ಹಾಗೂ ಭಕ್ತಿಯಿಂದ ಗಣೇಶ ಮೂರ್ತಿ ತಯಾರು ಮಾಡುತ್ತಾರೆ. ಚತುರ್ಥಿಯ ಮೊದಲ ತಿಂಗಳಲ್ಲೇ ಇವರು ತಯಾರಿಸಿದ ಗಣೇಶ ಮೂರ್ತಿ ಬುಕ್ ಆಗಿರುತ್ತದೆ.

ಪತ್ನಿ ಶಾರದಾ ಗಣೇಶ ಮೂರ್ತಿ ತಯಾರಿಕೆಗೆ ಸಾಥ್‌ ನೀಡುತ್ತಿದ್ದಾರೆ. ಗ್ರಾಹಕರೇ ಮೂರ್ತಿಗೆ ದರ ನಿಗದಿಸಿ ಖರೀದಿಸುತ್ತಾರೆ. ಪ್ರತಿ ವರ್ಷವೂ ಹೆಚ್ಚು ಗಣಪತಿ ಮೂರ್ತಿ ತಯಾರಿಸುವ ಬಯಕೆ ಇದೆ. ಆದರೆ ವಯಸ್ಸಿನ ಕಾರಣ ಇಂತಿಷ್ಟೇ ಮೂರ್ತಿ ಅಂತಾ ಸಿದ್ಧಪಡಿಸುತ್ತಿದ್ದಾರೆ ಮನೋಹರ ಪತ್ತಾರ.

ಇದನ್ನೂ ಓದಿ: ನ್ಯೂಸ್​ ಪೇಪರ್​ನಲ್ಲೇ 12 ಅಡಿ ಗಣೇಶನನ್ನು ಪ್ರತಿಷ್ಠಾಪಿಸಿದ ಸಿದ್ದಗಂಗಾ ಶಾಲೆಯ ವಿದ್ಯಾರ್ಥಿಗಳು: ಪರಿಸರ ಪ್ರೇಮ ಮೆರೆದ ಮಕ್ಕಳು

Last Updated : Sep 19, 2023, 2:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.