ETV Bharat / state

ರಾಜ್ಯದ ವಿವಿಧೆಡೆ ಸಡಗರದ ಕ್ರಿಸ್​​ಮಸ್​ ಸಂಭ್ರಮ: ಕಳೆಗಟ್ಟಿದ ಚರ್ಚ್​ಗಳು! - ರಾಜ್ಯದ ವಿವಿಧೆಡೆ ಕ್ರಿಸ್​ ಮಸ್​ ಸಂಭ್ರಮ

ರಾಜ್ಯದ ವಿವಿಧೆಡೆ ಚರ್ಚ್​ಗಳಲ್ಲಿ ಕ್ರಿಸ್ ಮಸ್​ ಸಂಭ್ರಮ ಕಳೆಗಟ್ಟಿದ್ದು, ವಿಜಯಪುರ, ಕೊಪ್ಪಳ, ಬಳ್ಳಾರಿ, ಹುಬ್ಬಳ್ಳಿ ಚರ್ಚ್​ಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

christmas-celebrations-across-the-state
ಕ್ರೈಸ್ತನ ಜನ್ಮ ಸ್ಥಳದ ಅನಾವರಣ
author img

By

Published : Dec 25, 2019, 11:45 PM IST

ವಿಜಯಪುರ/ಕೊಪ್ಪಳ,ಹುಬ್ಬಳ್ಳಿ/ಬಳ್ಳಾರಿ: ಕ್ರಿಸ್​ಮಸ್ ಹಬ್ಬವನ್ನು ವಿಜಯಪುರ ನಗರದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ನಗರದಲ್ಲಿ ಚರ್ಚ್​ಗಳಿಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಗಾಂಧಿ ವೃತ್ತದ ಬಳಿಯ ಚರ್ಚ್‌ನಲ್ಲಿ ಜನರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಕ್ರಿಶ್ಚಿಯನ್ ಬಾಂಧವರು ಪರಸ್ಪರ ಕ್ರಿಸ್​ಮಸ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು‌.

ರಾಜ್ಯದೆಲ್ಲೆಡೆ ಕ್ರಿಸ್​ಮಸ್​​​

ಹುಬ್ಬಳ್ಳಿ: ವಿಶ್ವಕ್ಕೆ ಶಾಂತಿ ಮಂತ್ರ ಸಾರಿದ ಏಸುಕ್ರಿಸ್ತನ ಜನ್ಮದಿನದ ನಿಮಿತ್ತವಾಗಿ ಕ್ರಿಸಮಸ್ ಹಬ್ಬವನ್ನು ಹುಬ್ಬಳ್ಳಿ ಸೇರಿದಂತೆ ಜಿಲ್ಲೆಯಾದ್ಯಂತ ಸಂಭ್ರಮ, ಸಡಗರದಿಂದ ಮನೆಮಾಡಿತ್ತು.

ನಗರದ ಹಲವು ಚರ್ಚ್​ಗಳಲ್ಲಿ ಝಗಝಮಿಸಿದ ಕ್ಯಾಂಡೆಲ್‌ಗಳ ನೋಟ ಕಣ್ಮನ ಸೆಳೆಯಿತು. ಕಾರವಾರ ರಸ್ತೆಯ ಬಾಷಲ್ ಮಿಶನ್ ಶಾಲೆ ಸಮೀಪದ ಮೈಯರ್ ಮೆಮೋರಿಯಲ್ ಚರ್ಚ್, ಕೇಶ್ವಾಪೂರದ ಸಂತ ಜೋಸೆಫರ ಕ್ಯಾಥೋಲಿಕ್ ಚರ್ಚ್, ಗಾಂಧಿವಾಡದ ಎಬಿಎಂ ತೆಲುಗು ಬ್ಯಾಪ್ಟಿಸ್ಟ್ ಚರ್ಚ್, ಉಣಕಲ್ ಚರ್ಚ್, ಶಾಂತಿ ಕಾಲೊನಿಯ ಬಾಲಯೇಸು ದೇವಾಲಯ, ಗದಗ ರಸ್ತೆಯ ಸೆಂಟ್ ಜಾನ್ಸ್ ಲುಥೇರನ್ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಕೇಕ್ ವಿತರಿಸುವ ಜತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಕ್ರೈಸ್ತ ಬಾಂಧವರು ಸಂಭ್ರಮಪಟ್ಟರು. ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದು, ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರಗು ನೀಡಿತು.

ಕ್ರಿಸ್‌ಮಸ್ ಟ್ರೀ, ಬಣ್ಣ ಬಣ್ಣದ ಸ್ಟಾರ್ಸ್‌ಗಳು, ಕೃತಕ ಗೋದಲಿಗಳು, ಬಗೆ ಬಗೆಯ ಗ್ರೀಟಿಂಗ್ ಕಾರ್ಡ್‌ಗಳು, ವಿದ್ಯುತ್ ಅಲಂಕಾರಿಕ ಸಾಮಗ್ರಿಗಳು ಹಾಗೂ ಬಲೂನ್‌ಗಳು ನಗರದಲ್ಲಿ ರಾರಾಜಿಸುತ್ತಿದ್ದವು.

ಗಣಿನಾಡು ಬಳ್ಳಾರಿ ನಗರದ ಸಂತ ಅಂತೋನಿಯ ಪ್ರಧಾನಾಲಯದಲ್ಲಿ ಇಂದು ಕ್ರಿಸ್ ಮಸ್ ಹಬ್ಬ ಸಂಭ್ರಮದಿಂದ ಆಚರಿಸಲಾಯಿತು. ಈ ಸಮಯದಲ್ಲಿ ಕ್ರೈಸ್ತ ಧರ್ಮದವರು ಪರಸ್ಪರ ಶುಭಕೋರಿದರು. ನಗರದಲ್ಲಿನ ಬಡವರಿಗೆ ಉಚಿತವಾಗಿ ಬಟ್ಟೆ, ಸಿಹಿ, ಹಣಕಾಸಿನ ಸಹಾಯ ಮಾಡಿದ ಫಾದರ್ ಅಂತೋನಿ ರಾಜ್.

ಕೊಪ್ಪಳ: ಕ್ರೈಸ್ತ ಜಯಂತಿ ಆಚರಣೆ ಕೊಪ್ಪಳದಲ್ಲೂ ಸಂಭ್ರಮದಿಂದ ಜರುಗಿತು. ನಗರಸಭೆ ಬಳಿಯ ಇಸಿಐ ಚರ್ಚ್ ಸೇರಿದಂತೆ ಜಿಲ್ಲೆಯ ವಿವಿಧ ಚರ್ಚ್​ಗಳಲ್ಲಿ ಕ್ರಿಸ್​ ಮಸ್​ ಹಬ್ಬ ಕಳೆಗಟ್ಟಿತ್ತು. ಹೊಸ ಬಟ್ಟೆಗಳನ್ನು ಧರಿಸಿಕೊಂಡು ಚರ್ಚ್​ಗೆ ಆಗಮಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಫಾದರ್ ರೆವೆರೆಂಡ್ ಜೆ. ರವಿಕುಮಾರ್ ಅವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ನಗರದ ಮಧ್ಯರಾತ್ರಿಯಿಂದಲೇ ಪ್ರಾರ್ಥನೆಗಳು ನಡೆದಿವೆ. 2 ಸಾವಿರ ಭಕ್ತರು ಆಗಮಿಸಿದ್ದರು.

Intro:kn_bly_02_251219_updatanewsCrismassfestnews_ka10007

ಗಣಿನಾಡು ಬಳ್ಳಾರಿಯ ನಗರದ ಸಂತ ಅಂತೋನಿಯ ಪ್ರಧಾನಾಲಯದಲ್ಲಿ ಇಂದು ಕ್ರಿಸ್ ಮಸ್ ಹಬ್ಬ ಸಂಭ್ರಮದಿಂದ ಆಚರಣೆ.
ಬಡವರಿಗೆ ಸಿಹಿ, ಬಟ್ಟೆ ಮತ್ತು ಹಣ ನೀಡಿ ಸಹಾಯ ಮಾಡಿದ ಫಾದರ್ ಅಂತೋನಿ ರಾಜ್‌‌

Body:

ನಗರದ ಸಂತ ಅಂತೋನಿ ಪ್ರಧಾನಾಲಯದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಫಾದರ್ ಅಂತೋನಿ ರಾಜ್ ಅವರು ಈ ದಿನ ಕ್ರಿಸ್ ಮಸ್ ಹಬ್ಬವನ್ನು ಸಂತೋಷ, ಸಡಗರದಿಂದ ಆಚರಣೆ ಮಾಡುತ್ತಿದ್ದೆವೆ ಎಂದರು.
ಪ್ರಭು ಯೇಸು ನೂತನ ಇತಿಹಾಸವನ್ನು ಸೃಷ್ಟಿಸಿದ್ದಾತೆ ಜನರ ನೋವು, ಕಷ್ಟಗಳಲ್ಲಿ ಭಾಗಿಯಾಗಿ ನಮ್ಮೊಂದಿಗೆ ಇರುವವರಾಗಿದ್ದಾರೆ.

ಬಳ್ಳಾರಿ ನಗರದಲ್ಲಿ ಮಧ್ಯರಾತ್ರಿ ಇಂದಲ್ಲೇ ಪ್ರಾರ್ಥನೆಗಳು ನಡೆದಿವೆ ಇದರಲ್ಲಿ 2 ಸಾವಿರ ಭಕ್ತರು ಆಗಮಿಸಿದ್ದರು ಹಾಗೇ ಇಂದು ಬೆಳಿಗ್ಗೆ 7 ಗಂಟೆ 30 ನಿಮಿಷ ದಿಂದ 9 ಗಂಟೆವರೆ್ಗೂಗೂ ಪ್ರಾರ್ಥನೆ ಮಾಡಿದ್ಧೆವೆ.

ಇಂದು ಬಡವರಿಗೆ ಆಹಾರ ಪದಾರ್ಥಗಳನ್ನು, ಬಟ್ಟೆಗಳನ್ನು, ಸಿಹಿ, ಹಣವನ್ನು ಹಂಚುವ ಮೂಲಕ ಕ್ರಿಸ್ ಭಕ್ತರು ಈ ಹಬ್ಬವನ್ನು ಆಚರಣೆ ಮಾಡಿತ್ತಿದ್ದಾರೆ ಎಂದು ತಿಳಿಸಿದರು.
ಇದರಿಂದ ಸಂತೋಷ, ಸಮಾಧಾನವನ್ನು ದಯಪಾಲಿಸಿದ್ದಾರೆ ಎಂದು ಹೇಳಿದರು.

ಕ್ರೈಸ್ತ ಧರ್ಮದ ಕೈದಿಗಳಿಗೆ ಮತ್ತು ಕುಷ್ಟರೋಗಿಗಳಿಗೂ ಸಹ ಸಿಹಿ ಹಂಚು, ಉತ್ತಮ ಸಂದೇಶ ನೀಡಿ ಕ್ರಿಸ್ ಮಸ್ ವನ್ನು ವಿಶೇಷ ಆಚರಣೆ ಮಾಡಿದ್ದೆವೆ ಎಂದು ತಿಳಿಸಿದರು.

Conclusion:ಈ ಸಮಯದಲ್ಲಿ ಕ್ರೈಸ್ತ ಧರ್ಮದ ಜನಾಂಗದವರು ಪ್ರಾರ್ಥನೆ ಮಾಡಿ, ಪರಸ್ಪರ ಶುಭಕೋರಿಕೊಂಡರು‌. ಮಕ್ಕಳ, ಯುವತಿರು, ಹೆಣ್ಣು ಮಕ್ಕಳು, ಹಿರಿಯ ನಾಗರೀಕ ಭಾಗವಹಿಸಿದ್ದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.