ETV Bharat / state

ನೆನಪಿಗಾಗಿ ಅಗಲಿದ ತಾಯಿಯ ಮಂದಿರ ನಿರ್ಮಿಸಿದ ಮಕ್ಕಳು.. ಇದು ಮಾತೃಪ್ರೀತಿ..!

author img

By

Published : Mar 30, 2022, 7:51 PM IST

ಇಳಿ ವಯಸ್ಸಿನಲ್ಲಿ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸೋರನ್ನು ನಾವು ನೋಡಿರುತ್ತೇವೆ. ಅಲ್ಲಲ್ಲಿ ತಂದೆ- ತಾಯಿಯರನ್ನು ಅಪಾರ ಪ್ರೀತಿಯಿಂದ ನೋಡಿಕೊಳ್ಳುವವರನ್ನು ಕೂಡಾ ಕಾಣಬಹುದು. ಆದರೆ ತಾಯಿಯ ನೆನಪಿಗೆ ಮಂದಿರವೊಂದನ್ನು ಮಕ್ಕಳು ನಿರ್ಮಿಸಿರುವ ಸ್ಟೋರಿ ಇಲ್ಲಿದೆ..

children-built-temple-for-mother-in-vijayapura
ನೆನಪಿಗಾಗಿ ಅಗಲಿದ ತಾಯಿಯ ಮಂದಿರ ನಿರ್ಮಿಸಿದ ಮಕ್ಕಳು.. ಇದು ಮಾತೃಪ್ರೀತಿ..!

ವಿಜಯಪುರ : ಆ ತಾಯಿಗೆ ಮಕ್ಕಳ ಮೇಲೆ ಅಪಾರ ಪ್ರೀತಿ.. ಮಕ್ಕಳಿಗೂ ತಾಯಿ ಮೇಲೆ ಅಷ್ಟೇ ಪ್ರೀತಿ. ತಾಯಿ ಅಗಲಿಕೆ ಬಳಿಕ ಮಕ್ಕಳು ಮಂದಿರ ನಿರ್ಮಿಸಿ ನಿತ್ಯ ತಾಯಿಯನ್ನು ಪೂಜಿಸುತ್ತಿದ್ದಾರೆ. ವಿಜಯಪುರ ಜಿಲ್ಲೆಯ ಜಾಲಗೇರಿ ಗ್ರಾಮದಲ್ಲಿ ಇಂಥದ್ದೊಂದು ತಾಯಿ ಪ್ರೀತಿಯ ಅಪರೂಪದ ಕತೆ ಕಾಣಿಸಿದೆ. ಕಳೆದ ವರ್ಷ ಮಹಾಮಾರಿ ಕೋವಿಡ್ ವೇಳೆ ಜಾಲಗೇರಿ ಗ್ರಾಮದ 68 ವರ್ಷದ ಗಜರಾಬಾಯಿ ಕಾಯಿಲೆಯಿಂದ ಅಸುನೀಗಿದ್ದರು. ಆಕೆಗಾಗಿ ಮಕ್ಕಳು ಮಂದಿರ ನಿರ್ಮಾಣ ಮಾಡಿದ್ದಾರೆ.

ಗಜರಾಬಾಯಿ ಹಾಗೂ ದುಂಡಪ್ಪ ಕಾಂಬ್ಳೆ ದಂಪತಿಗೆ ಮೂವರು ಮಕ್ಕಳು. ಗಜರಾಬಾಯಿ ಅಗಲಿಕೆಯಿಂದ ಉಂಟಾದ ನೋವನ್ನು ಮರೆಯಲು ಮಕ್ಕಳು ತಾಯಿಗಾಗಿ ಮಂದಿರ ನಿರ್ಮಿಸುವ ನಿರ್ಧಾರ ಮಾಡಿದರು. ಪುತ್ರ ಯಮನಪ್ಪ, ಪುತ್ರಿಯರಾದ ರೇಣುಕಾ, ಶಾಂತಾಬಾಯಿ ಸೇರಿ ತಾಯಿ ಮೂರ್ತಿ ಕೆತ್ತಿಸಿ ಪ್ರತಿಷ್ಠಾಪಿಸಿದ್ದಾರೆ. ಪುತ್ರ ಯಮನಪ್ಪ ನಿತ್ಯ ಎರಡು ಬಾರಿ ತಾಯಿ ಪೂಜೆ ಮಾಡ್ತಾರೆ. ಪಂಡರಾಪುರದಲ್ಲಿ ಮಾರ್ಬಲ್ ಕಲ್ಲಿನಲ್ಲಿ ಮೂರ್ತಿ ಕೆತ್ತಿಸಿದ್ದು, ಮೂರ್ತಿ ಅತ್ಯದ್ಭುತವಾಗಿ ಮೂಡಿಬಂದಿದೆ.

ನೆನಪಿಗಾಗಿ ಅಗಲಿದ ತಾಯಿಯ ಮಂದಿರ ನಿರ್ಮಿಸಿದ ಮಕ್ಕಳು..

ಗಜರಾಬಾಯಿ ಅಗಲಿಕೆಗೆ ಒಂದು ವರ್ಷವಾಗಿದೆ. ಹೀಗಾಗಿ, ಮಂದಿರ ನಿರ್ಮಿಸಿ ಪ್ರಥಮ ಪುಣ್ಯ ಸ್ಮರಣೆ ಆಚರಿಸಲಾಗಿದೆ. ಈ ವೇಳೆ ಗ್ರಾಮದ ಪಾಟೀಲ್ ಮನೆತನ ಸೇರಿದಂತೆ ಗ್ರಾಮಸ್ಥರು ಪುಣ್ಯಸ್ಮರಣೆಯಲ್ಲಿ ಭಾಗಿಯಾಗಿ, ಗಜರಾಬಾಯಿ ಮೂರ್ತಿಗೆ ಹೂ ಮಾಲೆ, ಆರತಿ ಬೆಳಗಿದ್ದಾರೆ. ಯಾವುದೇ ಜಾತಿ-ಬೇಧ ಇಲ್ಲದೆ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಸೌಹಾರ್ದತೆಗೆ ಸಾಕ್ಷಿಯಾಗಿತ್ತು.

ಇದನ್ನೂ ಓದಿ: 'ರಾಮಕೋಟಿ' ಬರೆದು ಭದ್ರಾಚಲಂಗೆ ಯಾತ್ರೆ ಬೆಳೆಸಿದ ಕೋಲಾರದ ಮುಸ್ಲಿಂ ವ್ಯಕ್ತಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.