ETV Bharat / state

ಮಗು ಮಾರಾಟದ ಬಳಿಕ ಕಂದ ಬೇಕೇಬೇಕು ಎಂದು ದೂರು ದಾಖಲಿಸಿದ ತಾಯಿ - ಜಿಲ್ಲಾಧಿಕಾರಿ ಪಿ ಸುನೀಲ ಕುಮಾರ

8 ದಿನದ ಹಿಂದೆ ಹುಟ್ಟಿದ ಮಗುವನ್ನು ಸಾಕಲು ಆಗದೇ ಕೇವಲ 5,000 ರೂ.ಗೆ ಬಾಣಂತಿ ರೇಣುಕಾ ಮಾರಾಟ ಮಾಡಿದ್ದಾರೆ. ನಂತರ ಮಗು ಬೇಕೆಂದು ರೇಣುಕಾ ದಂಪತಿ ಮಕ್ಕಳ ಸಹಾಯ ವಾಣಿಗೆ ದೂರು ನೀಡಿದ್ದಾರೆ.

child selling case registered in vijayapura
ವಿಜಯಪುರ ಮಗು ಮಾರಾಟ ಪ್ರಕರಣ
author img

By

Published : Sep 16, 2021, 12:12 PM IST

Updated : Sep 16, 2021, 2:04 PM IST

ವಿಜಯಪುರ: 8 ದಿನದ ಹಿಂದೆ ಹುಟ್ಟಿದ ಮಗುವನ್ನು ಸಾಕಲು ಆಗದೇ ಕೇವಲ 5,000 ರೂ.ಗೆ ಬಾಣಂತಿಯೊಬ್ಬಳು ಮಾರಾಟ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.‌ ಮೂರು ಬಾರಿ ಅತ್ಯುತ್ತಮ ಆಸ್ಪತ್ರೆ ಎನ್ನುವ ಹೆಗ್ಗಳಿಕೆಯ ಜಿಲ್ಲಾಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಮಗು ಮಾರಾಟ ಪ್ರಕರಣ ಆ. 26ರಂದು ನಡೆದಿದೆ ಎಂದು ಜಿಲ್ಲಾಧಿಕಾರಿ ಪಿ.‌ ಸುನೀಲ ಕುಮಾರ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಪಿ.‌ ಸುನೀಲ ಕುಮಾರ

ಘಟನೆ:

ಜಿಲ್ಲೆಯ ತಿಕೋಟಾ ಗ್ರಾಮದ ಬಿಜ್ಜರಗಿಯ ರೇಣುಕಾ ಶಿವಾನಂದ ಕಾಂಬಳೆ ದಂಪತಿಗೆ ಆ.19 ರಂದು ಸಹಜ ಹೆರಿಗೆಯಾಗಿ ರೇಣುಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಬಾಣಂತಿಗೆ ಕಸ್ತೂರಿ ಎಂಬ ನರ್ಸ್ ಪರಿಚಯವಾಗಿ ಮಗು ನೀಡುತ್ತೀರಾ ಎಂದು ನರ್ಸ್​​ ಕೇಳಿದ್ದರು. ಆಗ ಬಾಣಂತಿ ರೇಣುಕಾ ಮನೆಯವರನ್ನು ವಿಚಾರಿಸುವುದಾಗಿ ಹೇಳಿದ್ದಾರೆ. ರೇಣುಕಾ ಆ. 24ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆ. 26ರಂದು ಆಸ್ಪತ್ರೆಗೆ ಆಗಮಿಸಿದ್ದ ಬಾಣಂತಿ ರೇಣುಕಾ, ನರ್ಸ್ ಕಸ್ತೂರಿಯನ್ನು ಭೇಟಿಯಾಗಿ 5ಸಾವಿರ ರೂ. ಪಡೆದು ಮಗುವನ್ನು ನೀಡಿದ್ದಾರೆ.

ಹಣ ತೆಗೆದುಕೊಂಡು ಹೋಗುವಾಗ ರೇಣುಕಾ ವಾಪಸ್ ತಮ್ಮ ಮಗುವನ್ನು ಕೊಡಿ ಎಂದು ನರ್ಸ್​ ಬಳಿ ಅಂಗಲಾಚಿದ್ದಾರೆ. ಆದರೆ, ಮಗು ಕೊಡಲು ನರ್ಸ್ ಕಸ್ತೂರಿ‌ ನಿರಾಕರಿಸಿದ್ದಕ್ಕೆ ರೇಣುಕಾ ದಂಪತಿ ಮಕ್ಕಳ ಸಹಾಯ ವಾಣಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಫರ್ನಾಂಡಿಸ್ ಅಂತ್ಯಕ್ರಿಯೆ: ಬೆಂಗಳೂರಿಗೆ ಆಗಮಿಸಿದ ಕೆ.ಸಿ.ವೇಣುಗೋಪಾಲ್

ಸೆ. 12ರಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಒಟ್ಟು ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ನರ್ಸ್ ಕಸ್ತೂರಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ತನಿಖೆ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿ ಸುನೀಲ್​ ಕುಮಾರ ಸ್ಪಷ್ಟಪಡಿಸಿದ್ದಾರೆ.

Last Updated : Sep 16, 2021, 2:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.