ವಿಜಯಪುರ: ಕಳೆದ 2017ರ ಅಕ್ಟೋಬರ್ 30ರಂದು ಭೀಮಾ ತೀರದ ಹಂತಕ ಧರ್ಮರಾಜ್ ಚಡಚಣನ ಎನ್ಕೌಂಟರ್ ನಡೆದಿತ್ತು. ಈ ಪ್ರಕರಣದ ಒಟ್ಟು ಆರು ಪ್ರಮುಖ ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸದಾನಂದ ನಾಯಕ ಆದೇಶ ಹೊರಡಿಸಿದ್ದಾರೆ.
ಆರೋಪಿಗಳಾದ ಎಂ.ಬಿ,ಅಸೋಡೆ, ಪೊಲೀಸ್ ಪೇದೆ ಗಡ್ಡೆಪ್ಪ ನಾಯ್ಕೋಡಿ, ಹಣಮಂತ ಪೂಜಾರಿ, ಸಿದ್ದಗೊಂಡ ತಿಕ್ಕುಂಡಿ, ಭೀಮಾಶಂಕರ ಪೂಜಾರಿ, ಚಾಂದಹುಸೇನಿ ಚಡಚಣ ಜಾಮೀನು ಅರ್ಜಿ ವಜಾ ಮಾಡಲಾಗಿದೆ. ಧರ್ಮರಾಜ ಚಡಚಣನ ಎನಕೌಂಟರ್ ಹಾಗೂ ಗಂಗಾಧರ ಚಡಚಣನ ನಿಗೂಢ ಹತ್ಯೆ ಪ್ರಕರಣದಲ್ಲಿ ಈ ಆರೋಪಿಗಳ ಪಾತ್ರ ಇದೆ ಎನ್ನಲಾಗಿದೆ. 2017 ಅಕ್ಟೋಬರ್ 30ರಂದು ಚಡಚಣ ತಾಲೂಕಿನ ಕೊಂಕಣಗಾಂವ ಗ್ರಾಮದ ಧರ್ಮರಾಜ ಅಡ್ಡೆಯಲ್ಲಿ ಧರ್ಮರಾಜನನ್ನು ಎನಕೌಂಟರ್ ಮಾಡಲಾಗಿತ್ತು. ಬಳಿಕ ಅದೇ ದಿನ ಧರ್ಮರಾಜ ಸಹೋದರ ಗಂಗಾಧರನನ್ನು ನಿಗೂಢವಾಗಿ ಹತ್ಯೆ ಮಾಡಲಾಗಿತ್ತು.
ಚಡಚಣ ಸಹೋದರರ ತಾಯಿ ವಿಮಲಾಬಾಯಿ ಚಡಚಣ ದೂರಿನ ಆಧಾರದ ಮೇಲೆ ಎರಡೂ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಪ್ರಕರಣದ A1 ಆರೋಪಿ ಮಹಾದೇವ ಸಾಹುಕಾರ ಭೈರಗೊಂಡನಿಗೆ ಕೋರ್ಟ್ ಕಳೆದ ತಿಂಗಳು ಜಾಮೀನು ನೀಡಿತ್ತು. ಸದ್ಯ ಇನ್ನುಳಿದ ಆರು ಆರೋಪಿಗಳು ಜಾಮೀನು ಅರ್ಜಿ ಸಲ್ಲಿಸಿದ್ರು.