ವಿಜಯಪುರ: ಸರ್ಕಾರದ ವಿವಿಧ ನೀತಿ ನಿಯಮಾವಳಿಗಳ ನಿರ್ಮಾಣದಲ್ಲಿ ಅಂಕಿ ಅಂಶಗಳು ಮುಖ್ಯಪಾತ್ರ ವಹಿಸಲಿದ್ದು, ಜನಗಣತಿ ಕಾರ್ಯವು ಅತ್ಯಂತ ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ನಡೆದ ಜನಗಣತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜನಗಣತಿ ಕಾರ್ಯ ಅಂಕಿ ಅಂಶ ಸಂಗ್ರಹಣೆಯಲ್ಲಿ ಅತ್ಯಂತ ಪ್ರಮುಖ ಅಂಶವಾಗಿದ್ದು, ಇದೇ ಪ್ರಪ್ರಥಮ ಬಾರಿಗೆ ಮೊಬೈಲ್ ಆ್ಯಪ್ ಮೂಲಕ ಜನಗಣತಿಕಾರ್ಯ ನಡೆಸುವ ವಿಶೇಷ ತಾಂತ್ರಿಕತೆ ಅಭಿವೃದ್ಧಿಪಡಿಸಲಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.
ಪಾರದರ್ಶಕ ರೀತಿಯಲ್ಲಿ ಹಾಗೂ ವಸ್ತುನಿಷ್ಠ ಅಂಕಿ-ಅಂಶ ಒದಗಿಸುವ ಜನಗಣತಿ ಕಾರ್ಯಕೈಗೊಳ್ಳಬೇಕು. ಅಧಿಕಾರ ಯಂತ್ರದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪ್ರಧಾನ ಜನಗಣತಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಅವರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ಜನಗಣತಿ ಅಧ್ಯಯನ ಅಧಿಕಾರಿಗಳಾಗಿ ಅಪರ ಜಿಲ್ಲಾಧಿಕಾರಿಗಳು, ಹೆಚ್ಚುವರಿ ಜಿಲ್ಲಾ ಜನಗಣತಿ ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಅದರಂತೆ ಈ ಬಾರಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಡಿ.ಐ.ಓ ಹಾಗೂ ಎನ್ ಐ ಸಿ ಅಧಿಕಾರಿಗಳು ಜನಗಣತಿ ಕಾರ್ಯಕ್ಕಾಗಿ ಸಿಬ್ಬಂದಿಗಳ ನಿಯೋಜನೆಯ ಜವಾಬ್ದಾರಿಯನ್ನುವಹಿಸುಕೊಳ್ಳುವಂತೆ ಸೂಚಿಸಿದ್ದಾರೆ.