ವಿಜಯಪುರ: ಟಿಪ್ಪುವಿನ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಟಿಪ್ಪು ಸುಲ್ತಾನ್ 269ನೇ ಜಯಂತಿಯನ್ನು ಟಿಪ್ಪು ಸುಲ್ತಾನ್ ಜಯಂತಿ ಸಂಘಟನಾ ಸಮಿತಿಯಿಂದ ಆಚರಿಸಲಾಯಿತು.
ನಗರದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಟಿಪ್ಪುವಿನ ಭಾವಚಿತ್ರಕ್ಕೆ ಹೂವಿನ ಹಾರ ಹಾಕುವ ಮೂಲಕ ಟಿಪ್ಪು ಸುಲ್ತಾನ್ ಜಯಂತಿಯನ್ನು ಶಾಂತಿಯುತವಾಗಿ ಆಚರಿಸಲಾಯಿತು. ಪ್ರತಿ ವರ್ಷದಂತೆ ಹಜರತ್ ಟಿಪ್ಪುವಿನ ಜಯಂತಿಯನ್ನು ಮುಸ್ಲಿಂ ಸಮುದಾಯದ ಯುವಕರು ಆಚರಿಸಿದರು.
ಟಿಪ್ಪುವಿನ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಯುವಕರು ಟಿಪ್ಪುವಿನ ಭಾವಚಿತ್ರ ಹಿಡಿದು ಹಜರತ್ ಟಿಪ್ಪುವಿನ ಘೋಷಣೆ ಕೂಗುತ್ತಾ ಬೈಕ್ ಜಾಥಾ ಮಾಡಿದರು.
ಈ ವರ್ಷ ಟಿಪ್ಪು ಜಯಂತಿಗೆ ಸರ್ಕಾರ ಅನುಮತಿ ನೀಡದ ಕಾರಣ ಟಿಪ್ಪು ಸುಲ್ತಾನ್ ಸಂಘಟನಾ ಸಮಿತಿಯಿಂದ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಪೊಲೀಸ್ ಭದ್ರತೆಯಲ್ಲಿ ಆಚರಣೆ ಮಾಡುತ್ತಿದ್ದೇವೆ ಎಂದು ಟಿಪ್ಪು ಸುಲ್ತಾನ್ ಜಯಂತಿ ಸಂಘಟನಾ ಸಮಿತಿ ಅಧ್ಯಕ್ಷ ಇರ್ಫಾನ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.