ETV Bharat / state

ಮತ ಎಣಿಕೆ ಮಾಡುವಾಗಲೇ ಅಭ್ಯರ್ಥಿ ಸಾವು!

ಮತ ಎಣಿಕೆಯಲ್ಲಿ ಉಂಟಾದ ಏರುಪೇರು ಕಂಡು ಹಫೀಜ್ ಅಸ್ವಸ್ಥಗೊಂಡಿದ್ದರು. ಈ ವೇಳೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಸಾವನ್ನಪ್ಪಿದ್ದಾರೆ. ಮತ ಎಣಿಕೆ ವೇಳೆ ಹಫೀಜ್ ಅಲ್ಪ ಮತಗಳಿಂದ ಮುನ್ನಡೆಯಲ್ಲಿದ್ದರು.

author img

By

Published : Dec 30, 2020, 10:34 PM IST

ಮತ ಎಣಿಕೆ ಮಾಡುವಾಗಲೇ ಅಭ್ಯರ್ಥಿ ಸಾವು
ಮತ ಎಣಿಕೆ ಮಾಡುವಾಗಲೇ ಅಭ್ಯರ್ಥಿ ಸಾವು

ವಿಜಯಪುರ: ಮತ ಎಣಿಕೆ ವೇಳೆ ಅಸ್ವಸ್ಥಗೊಂಡಿದ್ದ ಅಭ್ಯರ್ಥಿ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ.

ತೆನಹಳ್ಳಿ ಗ್ರಾಮ ಪಂಚಾಯಿತಿ ವಾರ್ಡ್ 1ರಿಂದ ಸ್ಪರ್ಧಿಸಿದ್ದ ಹಫೀಜ್ ಖುರೇಷಿ(55) ಸಾವನ್ನಪ್ಪಿದ್ದಾರೆ. ಸಂಜೆಯವರೆಗೂ ಹಫೀಜ್ ಇಂಡಿ ಪಟ್ಟಣದಲ್ಲಿ ನಡೆಯುತ್ತಿದ್ದ ಮತ ಎಣಿಕೆ ಕೇಂದ್ರದಲ್ಲಿದ್ದರು.

ಮತ ಎಣಿಕೆಯಲ್ಲಿ ಉಂಟಾದ ಏರುಪೇರು ಕಂಡು ಹಫೀಜ್ ಅಸ್ವಸ್ಥಗೊಂಡಿದ್ದರು. ಈ ವೇಳೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಸಾವನ್ನಪ್ಪಿದ್ದಾರೆ. ಮತ ಎಣಿಕೆ ವೇಳೆ ಹಫೀಜ್ ಅಲ್ಪ ಮತಗಳಿಂದ ಮುನ್ನಡೆಯಲ್ಲಿದ್ದರು.

ಅಲ್ಲಿಯೇ ಅಸ್ವಸ್ಥರಾಗಿ ಕೆಳಗೆ ಬಿದ್ದಾಗ ಅವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಸಾವನ್ನಪ್ಪಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.