ETV Bharat / state

ಸಿಜೇರಿಯನ್ ಒಳಗಾದ ಬಾಣಂತಿಯರ ಹೊಲಿಗೆ ಬಿಚ್ಚುತ್ತಿರುವ ಪ್ರಕರಣ.. ತನಿಖೆಗೆ ಆದೇಶಿಸಿದ ಡಿಸಿ - C Section Maternity Sewing Problems District Collector ordered the investigation

ವಿಜಯಪುರ ಜಿಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಿಜೇರಿಯನ್ ಡೆಲಿವರಿ ಆದ‌ ಬಾಣಂತಿಯರಿಗೆ ಹೊಲಿಗೆ ಬಿಚ್ಚಿರುವ ಘಟನೆಗಳು ಬೆಳಕಿಗೆ ಬಂದಿವೆ. ಏಪ್ರಿಲ್​ 30ರಿಂದ ಈವರೆಗೆ 13 ಪ್ರಕರಣ ಈ ರೀತಿ ಆಗಿವೆ. ಇದಕ್ಕೆ ಹೆದರುವ ಅಗತ್ಯವಿಲ್ಲ ಎಂದು ಜಿಲ್ಲಾ ವೈದ್ಯಾಧಿಕಾರಿಳು ಹೇಳಿದ್ದಾರೆ.

District Collector ordered the investigation
ಸಿಜರಿಯನ್ ಒಳಗಾದ ಬಾಣಂತಿಯರ ಹೊಲಿಗೆ ತೆರೆಯುವ ಪ್ರಕರಣ ತನಿಖೆಗೆ ಆದೇಶ
author img

By

Published : May 15, 2022, 10:49 PM IST

ವಿಜಯಪುರ: ಜಿಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಿಜೇರಿಯನ್ ಡೆಲಿವರಿ ಆದ‌ ಬಾಣಂತಿಯರಿಗೆ ಶಸ್ತ್ರಚಿಕಿತ್ಸೆಯ ನಂತರ ಮಾಡಿದ ಹೊಲಿಗೆಗಳು ಬಿಚ್ಚಿರೋ ಘಟನೆಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅವರು ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ತಂಡ ರಚನೆ ಮಾಡಿ ಆದೇಶ ಹೊರಡಿಸಿದ್ದಾರೆ.

ಈ ತಂಡದಲ್ಲಿ ಎಸಿ, ಡಿಹೆಚ್ ಓ ಹಾಗೂ ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ನಿಯಂತ್ರಣಾಧಿಕಾರಿ ಇದ್ದು, ಇವರು ತಕ್ಷಣ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪ್ರಕರಣ ಕುರಿತು ಸಂಪೂರ್ಣ ತನಿಖೆ ನಡೆಸು 48ಗಂಟೆಯೊಳಗಾಗಿ ವರದಿ ನೀಡುವಂತೆ ಡಿಸಿಯವರು ಸೂಚನೆ ನೀಡಿದ್ದಾರೆ. ಸಿಜೇರಿಯನ್ ಡೆಲಿವರಿ ಆದ‌ ಬಾಣಂತಿಯರಿಗೆ ಶಸ್ತ್ರಚಿಕಿತ್ಸೆಯ ನಂತರ ಮಾಡಿದ ಹೊಲಿಗೆಗಳು ಬಿಚ್ಚಿರೋ ಘಟನೆಗಳು ಬೆಳಕಿಗೆ ಬಂದಿವೆ. ಏಪ್ರಿಲ್ 30 ರಿಂದ ಮೇ 13ರವರೆಗೆ 18 ಬಾಣಂತಿಯರಲ್ಲಿ ಈ ಸಮಸ್ಯೆ ಕಂಡು ಬಂದಿದೆ. ಭಾನುವಾರ ಮತ್ತೆ ಐವರು ಬಾಣಂತಿಯರು ಇದೇ ಸಮಸ್ಯೆಯಿಂದ ಆಸ್ಪತ್ರೆಗೆ ಬಂದಿದ್ದರು. ಈ ಸಂಬಂಧ ಜಿಲ್ಲಾಧಿಕಾರಿಗಳು ಆಸ್ಪತ್ರೆಯಿಂದ ಮಾಹಿತಿ ಪಡೆದಿದ್ದರು.

ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಅವರು, ಇದು 100 ಬೆಡ್​ನ ಆಸ್ಪತ್ರೆ, ಕೆಲಸದ ಒತ್ತಡ ಜಾಸ್ತಿ ಇದೆ. ಈ ತಿಂಗಳಲ್ಲಿ ಸುಮಾರು‌ 96 ಸಿಜೇರಿಯನ್ ಮಾಡಿದ್ದಾರೆ. ಅದರಲ್ಲಿ ಕೆಲವರದ್ದು ಪಸ್(ಕೀವು) ಕಾಣಿಸಿಕೊಂಡಿದೆ. ಓವರ್ ಲೋಡ್ ಇರುವ ಕಾರಣ ಸರಿಯಾಗಿ ಸ್ವಚ್ಛತೆ ಮಾಡಲು ಆಗಿಲ್ಲ ಎಂದು ಹೇಳಿಕೆ ನೀಡಿದ್ದರು. ಈಗ ಈ ಕುರಿತು ತಂಡ ರಚಿಸಿ ತನಿಖೆಗೆ ಆದೇಶಿಸಿದ್ದಾರೆ.

ಇದನ್ನೂ ಓದಿ: ವಿಜಯಪುರ : ಜಿಲ್ಲಾಸ್ಪತ್ರೆಯಲ್ಲಿ ಮುಂದುವರೆದ ಬಾಣಂತಿಯರ ಗೋಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.