ETV Bharat / state

ಸಿ.ಸಿ.ಪಾಟೀಲರಿಗೆ ವಿಜಯಪುರ ಸಾರಥ್ಯ: ಜಿಲ್ಲಾ ಬಿಜೆಪಿಗರಲ್ಲಿ ಆತಂಕ.. ಒಳ ಬೇಗುದಿ! - ವಿಜಯಪುರ ಜಿಲ್ಲಾ ಸುದ್ದಿ

ಜಿಲ್ಲೆಯಲ್ಲಿ ಮೂವರು ಬಿಜೆಪಿ ಶಾಸಕರು ಆಯ್ಕೆಯಾಗಿದ್ದರೂ ಸಚಿವ ಸ್ಥಾನದ ಭಾಗ್ಯ ಗೋವಿಂದ ಕಾರಜೋಳ ಬಿಟ್ಟರೆ ಯಾರಿಗೂ ಲಭಿಸಿಲ್ಲ. ಹೀಗಾಗಿ ಉಸ್ತುವಾರಿ ಸಚಿವರ ನೇಮಕ ವಿಚಾರದಲ್ಲಿ ಬಿಜೆಪಿ ಹೈ ಕಮಾಂಡ ಅಳೆದು ತೂಗಿ ಹೆಜ್ಜೆ ಇಟ್ಟಿದ್ದು, ಗದಗ ಜಿಲ್ಲೆಯ ನರಗುಂದ ಶಾಸಕ ಸಿ.ಸಿ.ಪಾಟೀಲರಿಗೆ ಗದಗ ಜತೆ ವಿಜಯಪುರ ಉಸ್ತುವಾರಿ ನೀಡಿದ್ದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಸಿ.ಸಿ ಪಾಟೀಲರಿಗೆ
author img

By

Published : Sep 19, 2019, 10:35 AM IST

ವಿಜಯಪುರ : ಜಿಲ್ಲೆಗೆ ಸಚಿವ ಸ್ಥಾನ ಕೈ ತಪ್ಪಿದ್ದ ಬೆನ್ನಲ್ಲೆ ಉಸ್ತುವಾರಿ ಸಚಿವರ ಆಯ್ಕೆಯಲ್ಲೂ ಜಿಲ್ಲೆಗೆ ಸೂಕ್ತವಾದ ನಾಯಕರನ್ನು ನೀಡಿಲ್ಲ ಎಂದು ಜಿಲ್ಲಾ ಬಿಜೆಪಿಯಲ್ಲಿ ಬಿನ್ನಮತ ಮತ ಶುರುವಾಗಿದ್ದು, ಮನೆಯೊಂದು ಮೂರು ಬಾಗಿಲು ಎನ್ನುವಂತ ಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯಲ್ಲಿ ಮೂವರು ಬಿಜೆಪಿ ಶಾಸಕರು ಆಯ್ಕೆಯಾಗಿದ್ದರೂ ಸಚಿವ ಸ್ಥಾನದ ಭಾಗ್ಯ ಗೋವಿಂದ ಕಾರಜೋಳ ಬಿಟ್ಟರೆ ಯಾರಿಗೂ ಲಭಿಸಿಲ್ಲ. ಹೀಗಾಗಿ ಉಸ್ತುವಾರಿ ಸಚಿವರ ನೇಮಕ ವಿಚಾರದಲ್ಲಿ ಬಿಜೆಪಿ ಹೈ ಕಮಾಂಡ್​​ ಅಳೆದು ತೂಗಿ ಹೆಜ್ಜೆ ಇಟ್ಟಿದ್ದು, ಗದಗ ಜಿಲ್ಲೆಯ ನರಗುಂದ ಶಾಸಕ ಸಿ.ಸಿ.ಪಾಟೀಲರಿಗೆ ಗದಗ ಜತೆ ವಿಜಯಪುರ ಉಸ್ತುವಾರಿ ನೀಡಿದ್ದು, ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಮೊದಲೇ ಜಿಲ್ಲಾ ಬಿಜೆಪಿ ನಾಯಕರಲ್ಲಿ ವೈಮನಸ್ಸು ಉಂಟಾಗಿದ್ದು, ಎಲ್ಲ ಗುಂಪುಗಳನ್ನು ಒಗ್ಗೂಡಿಸಿಕೊಂಡು ಹೋಗುವ ನಾಯಕ ಉಸ್ತುವಾರಿ ಬೇಕಾಗಿತ್ತು. ಎನ್ನುವುದು ನಿಷ್ಠಾವಂತ ಬಿಜೆಪಿ ಕಾರ್ಯಕರ್ತರ ಬಯಕೆ. ಆದರೆ, ಈಗ ಗದಗ ಜಿಲ್ಲೆಯವರಿಗೆ ವಿಜಯಪುರ ಉಸ್ತುವಾರಿ ನೀಡಿದರೆ ಅವರಿಗೆ ಇಲ್ಲಿನ ಒಳ ರಾಜಕೀಯ ಹೇಗೆ ಗೊತ್ತಾಗಬೇಕು ಎಂಬುದು ಜಿಲ್ಲಾ ಬಿಜೆಪಿ ಮುಖಂಡರುಗಳಿಂದ ಕೇಳಿ ಬರುತ್ತಿರುವ ಮಾತು.

ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಗುಂಪುಗಳ ಶೀತಲ ಸಮರದಿಂದ ರಾಜಕೀಯವಾಗಿ ಸಾಕಷ್ಟು ನಷ್ಟ ಅನುಭವಿಸಿರುವ ಜಿಲ್ಲಾ ಬಿಜೆಪಿ ಪಕ್ಷ ಮತ್ತೊಮ್ಮೆ ಪುಟಿದೇಳಬೇಕಾಗಿದೆ. ಇನ್ನೇನು ಮಹಾನಗರ ಪಾಲಿಕೆ ಚುನಾವಣೆ ಹತ್ತಿರವಾಗುತ್ತಿದೆ. ಈ ವೇಳೆ, ಎರಡು ಗುಂಪುಗಳ ನಾಯಕರನ್ನು ಒಗ್ಗೂಡಿಸಿಕೊಂಡು ಹೋಗುವ ಜವಾಬ್ದಾರಿ ಉಸ್ತುವಾರಿ ಸಚಿವರ ಮುಂದಿದೆ. ಆದರೆ, ಇದು ಅವರಿಂದ ಆಗದ ಕೆಲಸ ಎಂದು ಬಿಜೆಪಿ ಕಾರ್ಯಕರ್ತರಿಗೆ ಮನವರಿಕೆಯಾದಂತಿದೆ.

ಕಳೆದ ಹಲವು ವರ್ಷಗಳಿಂದ ಜಿಲ್ಲೆಯ ಇಬ್ಬರು ನಾಯಕರ ಮಧ್ಯೆ ಇರುವ ವೈಮನಸ್ಸು ದೂರ ಮಾಡಲು ಯಾರಿಂದಲೂ ಸಾಧ್ಯವಾಗಿಲ್ಲ. ಹಿಂದಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಬಿ.ಎಸ್.ಯಡಿಯೂರಪ್ಪ ಇಬ್ಬರ ನಡುವೆ ಸಂಧಾನ ಮಾಡಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಇವರ ನಡುವೆ ಸಿಲುಕಿರುವ ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಟಗಿ ತಟಸ್ಥ ನಿಲುವು ತಾಳಿದ್ದಾರೆ.

ಕಾರಜೋಳ ಬೇಕಿತ್ತಾ?

ಪಕ್ಕದ ಬಾಗಲಕೋಟೆ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಇಲ್ಲವೇ ಸಚಿವ ಲಕ್ಷ್ಮಣ ಸವದಿ ಉಸ್ತುವಾರಿ ಸಚಿವರಾಗಬೇಕಿತ್ತು ಎನ್ನುವ ಅಭಿಪ್ರಾಯ ಕಾರ್ಯಕರ್ತರಲ್ಲಿ ಕೇಳಿ ಬಂದಿದೆ. ಜಿಲ್ಲೆಯ ರಾಜಕೀಯ ಚನ್ನಾಗಿ ಬಲ್ಲ ಇವರಲ್ಲಿ ಒಬ್ಬರು ಉಸ್ತುವಾರಿಯಾಗಿದ್ದರೆ ಉತ್ತಮ ಎನ್ನುವ ಅಭಿಪ್ರಾಯ ಕಾರ್ಯಕರ್ತರಲ್ಲಿ ಇದೆ. ಅದರಲ್ಲಿ ಮುಖ್ಯವಾಗಿ ಗೋವಿಂದ ಕಾರಜೋಳ ಆಗಬೇಕಿತ್ತು ಎನ್ನುವ ಬೇಡಿಕೆ ಒಂದು ಬಣದ್ದಾಗಿದೆ. ಈಗಾಗಲೇ ಈ ಕುರಿತು ನೂತನ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ್​ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಇನ್ನೊಂದು ಗುಂಪು ವಿರೋಧ ವ್ಯಕ್ತಪಡಿಸಿದ ಕಾರಣ. ಸಿ.ಸಿ.ಪಾಟೀಲ್​​ ನೇಮಕವೇ ಸಮಯೋಚಿತವಾಗಿದೆ ಎನ್ನುವ ಅಭಿಪ್ರಾಯ ಬಿಜೆಪಿ ರಾಜ್ಯ ಘಟಕದಿಂದ ಬಂದಂತಿದೆ.

ಸದ್ಯ ಸ್ಥಳೀಯ ಬಿಜೆಪಿ ಮುಖಂಡರ ಮುಸುಕಿನ ಗುದ್ದಾಟ, ಹೊರ ಜಿಲ್ಲೆಯವರ ಉಸ್ತುವಾರಿ ಜಿಲ್ಲಾ ಬಿಜೆಪಿಯನ್ನು ಯಾವ ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ ಎನ್ನುವದನ್ನು ಕಾದು ನೋಡಬೇಕಾಗಿದೆ.

Intro:ವಿಜಯಪುರ Body:ವಿಜಯಪುರ: ಕೊನೆಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರನ್ನು ಆಮದು ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಮೂವರು ಹಾಗೂ ಪಕ್ಕದ ಜಿಲ್ಲೆ ಬಾಗಲಕೋಟೆಯಲ್ಲಿ ಐವರು ಬಿಜೆಪಿ ಶಾಸಕರು ಆಯ್ಕೆಯಾಗಿದ್ದರೂ ಸಚಿವ ಸ್ಥಾನದ ಭಾಗ್ಯ ಗೋವಿಂದ ಕಾರಜೋಳ ಬಿಟ್ಟರೆ ಯಾರಿಗೂ ಲಭಿಸಿಲ್ಲ, ಹೀಗಾಗಿ ಉಸ್ತುವಾರಿ ಸಚಿವ ನೇಮಕ ವಿಚಾರದಲ್ಲಿ ಬಿಜೆಪಿ ಹೈ ಕಮಾಂಡ ಅಳೆದು ತೂಗಿ ಹೆಜ್ಜೆ ಇಟ್ಟಿದ್ದು ಗದಗ ಜಿಲ್ಲೆಯ ನರಗುಂದ ಶಾಸಕ ಸಿ.ಸಿ.ಪಾಟೀಲರನ್ನು ಗದಗ ಜತೆ ವಿಜಯಪುರ ಉಸ್ತುವಾರಿ ನೀಡಿದ್ದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಮೊದಲೇ ವಿಜಯಪುರ ಜಿಲ್ಲಾ ಬಿಜೆಪಿಯಲ್ಲಿ ಮನೆಯೊಂದು ಎರಡು ಬಾಗಿಲು ಎನ್ನುವ ಪರಿಸ್ಥಿತಿ ಇದೆ. ಎಲ್ಲ ಗುಂಪುಗಳನ್ನು ಒಗ್ಗೂಡಿಸಿಕೊಂಡು ಹೋಗುವ ನಾಯಕ ಉಸ್ತುವಾರಿ ಸಚಿವರಾಗಬೇಕಿತ್ತು ಎನ್ನುವದು ನಿಷ್ಠಾವಂತ ಬಿಜೆಪಿ ಕಾರ್ಯಕರ್ತರ ಬಯಕೆಯಾಗಿತ್ತು. ಈಗ ಗದಗ ಜಿಲ್ಲೆಯವರಿಗೆ ವಿಜಯಪುರ ಉಸ್ತುವಾರಿ ನೀಡಿದರೆ ಅವರಿಗೆ ಇಲ್ಲಿನ ಒಳ ರಾಜಕೀಯ ಹೇಗೆ ಗೊತ್ತಾಗಬೇಕು. ತಿಂಗಳಿಗೊಮ್ಮೆ ಜಿಲ್ಲೆಗೆ ಆಗಮಿಸಿ ಜಿಲ್ಲಾ ಪಂಚಾಯಿತಿ ಸಭೆ, ಇಲ್ಲವೇ ಡಿಸಿ ಜತೆ ಸಭೆ, ಸಮಾರಂಭದಲ್ಲಿ ಭಾಗವಹಿಸಿ ಹೋಗುವ ಇವರಿಗೆ ಜಿಲ್ಲಾ ಬಿಜೆಪಿಯ ಒಳ ಜಗಳ ಹೇಗೆ ಅರ್ಥವಾಗುತ್ತದೆ ಎನ್ನುವದು ಬಿಜೆಪಿ ಮುಖಂಡರುಗಳಿಂದ ಕೇಳಿಬರುತ್ತಿರುವುದು ಅಭಿಪ್ರಾಯವಾಗಿದೆ.
ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಗುಂಪುಗಳ ಶೀತಲ ಸಮರದಿಂದ ರಾಜಕೀಯವಾಗಿ ಸಾಕಷ್ಟು ನಷ್ಟ ಅನುಭವಿಸಿರುವ ಜಿಲ್ಲಾ ಬಿಜೆಪಿ ಪಕ್ಷ ಮತ್ತೊಮ್ಮೆ ಪುಟಿದೇಳಬೇಕಾಗಿದೆ. ಇನ್ನೇನು ಮಹಾನಗರ ಪಾಲಿಕೆ ಚುನಾವಣೆ ಹತ್ತಿರವಾಗುತ್ತಿದೆ. ಈ ವೇಳೆ ಎರಡು ಗುಂಪುಗಳ ನಾಯಕರನ್ನು ಒಗ್ಗೂಡಿಸಿಕೊಂಡು ಹೋಗುವ ಜವಾಬ್ದಾರಿ ಉಸ್ತುವಾರಿ ಸಚಿವರ ಮುಂದಿದೆ. ಆದರೆ ಇದು ಅವರಿಂದ ಆಗದ ಕೆಲಸ ಎಂದು ಬಿಜೆಪಿ ಕಾರ್ಯಕರ್ತರಿಗೆ ಮನವರಿಕೆಯಾಗಿದೆ. ಕಳೆದ ಹಲವು ವರ್ಷಗಳಿಂದ ಜಿಲ್ಲೆಯ ಇಬ್ಬರು ನಾಯಕರ ಮಧ್ಯೆ ಇರುವ ವೈಮನಸ್ಸು ದೂರ ಮಾಡಲು ಯಾರಿಂದಲೂ ಸಾಧ್ಯವಾಗಿಲ್ಲ. ಹಿಂದಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಬಿ.ಎಸ್.ಯಡಿಯೂರಪ್ಪ ಇಬ್ಬರ ನಡುವೆ ಸಂಧಾನ ಮಾಡಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಇವರಿಬ್ಬರ ವೈಮನಸ್ಸಿನಿಂದ ಹೆಚ್ಚು ಸ್ಥಾನ ಹೊಂದಿದ್ದರೂ ಮಹಾನಗರ ಪಾಲಿಕೆಯಲ್ಲಿ ಅಧಿಕಾರದಿಂದ ವಂಚಿತವಾಗಿದೆ. ಇವರ ನಡುವೆ ಸಿಲುಕಿರುವ ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಟಗಿ ತಟಸ್ಥ ನಿಲುವು ತಾಳಿದ್ದಾರೆ. ಇದರೆಲ್ಲದರ ಪರಿಣಾಮ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಹಿಡಿತ ಕಳೆದುಕೊಂಡಿದೆ. ಹೀಗಿರುವಾಗ ಗದಗ ಜಿಲ್ಲೆಯ ನಾಯಕರನ್ನು ವಿಜಯಪುರ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿರುವದು ಗಾಯದ ಮೇಲೆ ಬರೆ ಎಳೆದಂತಿದೆ.
ಕಾರಜೋಳ ಬೇಕಿತ್ತು?: ಪಕ್ಕದ ಬಾಗಲಕೋಟೆ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಇಲ್ಲವೇ ಸಚಿವ ಲಕ್ಷ್ಮಣ ಸವದಿ ಉಸ್ತುವಾರಿ ಸಚಿವರಾಗಬೇಕಿತ್ತು ಎನ್ನುವ ಅಭಿಪ್ರಾಯ ಕಾರ್ಯಕರ್ತರಲ್ಲಿ ಕೇಳಿ ಬಂದಿದೆ. ಜಿಲ್ಲೆಯ ರಾಜಕೀಯ ಚನ್ನಾಗಿ ಬಲ್ಲ ಇವರಲ್ಲಿ ಒಬ್ಬರು ಉಸ್ತುವಾರಿಯಾಗಿದ್ದರೆ ಉತ್ತಮ ಎನ್ನುವ ಅಭಿಪ್ರಾಯ ಕಾರ್ಯಕರ್ತರಲ್ಲಿ ಇದೆ.
ಅದರಲ್ಲಿ ಮುಖ್ಯವಾಗಿ ಗೋವಿಂದ ಕಾರಜೋಳ ಆಗಬೇಕಿತ್ತು ಎನ್ನುವ ಬೇಡಿಕೆ ಒಂದು ಬಣದ್ದಾಗಿದೆ. ಈಗಾಗಲೇ ಈ ಕುರಿತು ನೂತನ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಇನ್ನೊಂದು ಗುಂಪು ವಿರೋಧ ವ್ಯಕ್ತಪಡಿಸಿದ ಕಾರಣ. ಸಿ.ಸಿ.ಪಾಟೀಲ ನೇಮಕವೇ ಸಮಯೋಚಿತವಾಗಿದೆ ಎನ್ನುವ ಅಭಿಪ್ರಾಯ ಬಿಜೆಪಿ ರಾಜ್ಯ ಘಟಕ ಬಂದಂತಿದೆ.
ದಲಿತ ಸಮುದಾಯಕ್ಕೆ ಸೇರಿರುವ ಗೋವಿಂದ ಕಾರಜೋಳ ಜಿಲ್ಲೆಯ ಸಂಸದರ ಸಂಬಂಧಿ ಕೂಡ ಹೌದು, ತಮ್ಮ ಮಗನ ರಾಜಕೀಯ ಭವಿಷ್ಯವನ್ನು ವಿಜಯಪುರ ಜಿಲ್ಲೆಯಲ್ಲಿಯೇ ರೂಪಿಸಬೇಕೆಂದು ಮಗನನ್ನು ಜಿಲ್ಲೆಯ ಸಕ್ರಿಯ ರಾಜಕೀಯದಲ್ಲಿ ತೊಡಗಿಸಿದ್ದಾರೆ.
ಸ್ಥಳೀಯ ಬಿಜೆಪಿ ಮುಖಂಡರ ಮುಸುಕಿನ ಗುದ್ದಾಟ, ಹೊರ ಜಿಲ್ಲೆಯವರ ಉಸ್ತುವಾರಿ ಜಿಲ್ಲಾ ಬಿಜೆಪಿಯನ್ನು ಯಾವ ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ ಎನ್ನುವದನ್ನು ಕಾದು ನೀಡಬೇಕಾಗಿದೆ.Conclusion:ವಿಜಯಪುರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.