ವಿಜಯಪುರ : ಶಾಲಾ ಬಸ್ ಹರಿದು ಮೂರು ವರ್ಷದ ಮಗು ಸಾವನ್ನಪ್ಪಿರುವ ಘಟನೆ ನಗರದ ಕೆಐಡಿಬಿ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಶಾಲಾ ಬಸ್ಸಿನಲ್ಲಿ ಬಂದ ಮಕ್ಕಳನ್ನು ಇಳಿಸಿಕೊಳ್ಳಲು ತಂದೆಯ ಜೊತೆ ತೆರಳಿದ ಬಾಲಕಿ ಸಾವನ್ನಪ್ಪಿದ್ದಾಳೆ. ಬಾಲಕಿಯನ್ನು ಗಮನಿಸದೇ ಬಸ್ ಚಾಲಕ ಮಗುವಿನ ಮೇಲೆ ಬಸ್ ಹರಿಸಿದ ಪರಿಣಾಮ ಈ ದುರಂತ ನಡೆದಿದೆ. ಭಕ್ತಿ ಗಿರಿಮಲ ನಿಡೋಣಿ(3) ಸಾವಿಗೀಡಾದ ಬಾಲಕಿ.
ಸ್ಥಳಕ್ಕೆ ವಿಜಯಪುರ ನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಾಹನದ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಜಯಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.