ETV Bharat / state

ಬಿಎಸ್​ವೈ ಪೂರ್ಣಾವಧಿ ಸಿಎಂ ಆಗಲು ಅವರ ವಯಸ್ಸು ಅಡ್ಡಿಯಾಯ್ತು: ಚಲವಾದಿ ನಾರಾಯಣಸ್ವಾಮಿ - ಬಿಎಸ್​ವೈ ಪೂರ್ಣಾವಧಿ ಸಿಎಂ ಆಗಲು ಅವರ ವಯಸ್ಸು ಅಡ್ಡಿಯಾಯಿತು

ನಮ್ಮ ಪಕ್ಷದಲ್ಲಿ 75 ವರ್ಷ ಮೇಲ್ಪಟ್ಟವರಿಗೆ ರಾಜಕೀಯ ನಿವೃತ್ತಿ- ಬಿಎಸ್​ವೈ ಅವರಿಗೆ ಶಕ್ತಿ ಮೀರಿ ಹೆಚ್ಚಿನ ಕಾಲಾವಕಾಶ ನೀಡಲಾಗಿತ್ತು - ಚಲವಾದಿ ನಾರಾಯಣಸ್ವಾಮಿ ಹೇಳಿಕೆ

Vidhana Parishad member Chalavadi Narayanaswamy who spoke in Vijayapura
ವಿಧಾನಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ
author img

By

Published : Jul 24, 2022, 5:12 PM IST

ವಿಜಯಪುರ: ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರು ಪಕ್ಷದ ನಿಷ್ಠಾವಂತ ನಾಯಕರು. ಅವರು ಪಕ್ಷದಿಂದ ದೂರವಿರಲು ಸಾಧ್ಯವಿಲ್ಲ. ಪಕ್ಷ ಅವರಿಗೆ ಎಲ್ಲ ಸ್ಥಾನಮಾನ ನೀಡಿದೆ. ಅದು ಅವರಿಗೂ ತೃಪ್ತಿ ಇದೆ. ನಮ್ಮ ಪಕ್ಷದಲ್ಲಿ 75 ವರ್ಷ ಮೇಲ್ಪಟ್ಟವರಿಗೆ ರಾಜಕೀಯ ನಿವೃತ್ತಿ ನಿಗದಿಯಾಗಿದೆ. ಆದರೂ ಬಿಎಸ್​ವೈ ಅವರಿಗೆ ಶಕ್ತಿ ಮೀರಿ ಹೆಚ್ಚಿನ ಕಾಲಾವಕಾಶ ನೀಡಲಾಗಿದೆ. ಇದು ಸಹಜವಾಗಿ ಅವರಿಗೆ ತೃಪ್ತಿ ತಂದಿದೆ ಎಂದು ವಿಧಾನಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ ಹೇಳಿದರು.

ವಿಧಾನಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯೆ

ಬಿಎಸ್​ವೈ ನಾಲ್ಕು ಬಾರಿ ಸಿಎಂ ಹುದ್ದೆ ಅಲಂಕರಿಸಿದರೂ ಒಂದು ಬಾರಿಯೂ ಐದು ವರ್ಷದ ಪೂರ್ಣಾವಧಿ ಅಧಿಕಾರ ನಡೆಸಿಲ್ಲ ಎಂಬ ಪ್ರಶ್ನೆಗೆ ನಾರಾಯಣಸ್ವಾಮಿ ಉತ್ತರಿಸಿದರು. ಅದಕ್ಕೆ ವಯೋಮಿತಿಯೇ ಕಾರಣವಾಗಿದೆ. ಅದರ ಜತೆ ಅವರು ಸಿಎಂ ಆದಾಗಿನ ಸಂದರ್ಭ ಸಹ ಕಾರಣವಾಗುತ್ತದೆ. ಅವರಿಗೆ ಇನ್ನೂ ವಯಸ್ಸು ಇದ್ದಿದ್ದರೆ, ನಮ್ಮ ಪಕ್ಷದಲ್ಲಿ ಅವರೇ ನಾಯಕರಾಗಿರುತ್ತಿದ್ದರು. ಸದ್ಯ ಅವರು ಕೇವಲ ಚುನಾವಣೆ ರಾಜಕೀಯದಿಂದ ದೂರ ಉಳಿದಿದ್ದಾರೆ, ಹೊರತು ಸಕ್ರಿಯ ರಾಜಕೀಯದಿಂದಲ್ಲ ಎಂದರು.

ದಲಿತ ವಿರೋಧಿ ಕಾಂಗ್ರೆಸ್: 75ವರ್ಷದ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷ ಕೇವಲ ದಲಿತರನ್ನು ಮತ ಬ್ಯಾಂಕ್​ಗಳನ್ನಾಗಿ ಮಾಡಿದೆ. ಆದ್ರೆ ಅವರನ್ನು ವಿದ್ಯಾವಂತರನ್ನಾಗಲು ಪ್ರಯತ್ನಿಸಲಿಲ್ಲ. ತಮ್ಮ ಮತ ಎಲ್ಲಿ ಕಳೆದು ಹೋಗುತ್ತೆ ಎನ್ನುವ ಭಯ ಅವರಲ್ಲಿದೆ. ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದ ಹಲವು ದಲಿತರನ್ನು ಪಕ್ಷ ಕೇವಲ ಬಳಸಿಕೊಂಡಿದೆ, ಆದರೆ ಅಧಿಕಾರ ನೀಡಿಲ್ಲ. ಬೇರೆ ಪಕ್ಷದಿಂದ ಬಂದ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನಕ್ಕೆ ಏರಿಸಿತು. ದಲಿತ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರು‌ ಹಲವು ದಶಕಗಳಿಂದ ದುಡಿದರೂ ಅವರಿಗೆ ಸಿಎಂ ಪಟ್ಟ ನೀಡದಿರುವುದು ಬೇಸರ ತಂದಿದೆ ಎಂದು ಹೇಳಿದರು.

ಇದನ್ನೂ ಓದಿ: ಶಾಸಕ ಎಸ್.ಆರ್.ವಿಶ್ವನಾಥ್ ಹುಟ್ಟುಹಬ್ಬಕ್ಕೆ ಶುಭ ಕೋರಿದ ಸಿಎಂ ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.