ETV Bharat / state

ರಾಹುಲ್ ಗಾಂಧಿಗೆ ಅಗೌರವ ತರುವಂತೆ ಯಾರೂ ಮಾತನಾಡಬಾರದು : ಕಟೀಲ್‌ಗೆ ಬಿಎಸ್​ವೈ 'ತಿವಿ' ಮಾತು - ರಾಹುಲ್​ ಗಾಂಧಿ ಬಗ್ಗೆ ನಳಿನ್​ ಕುಮಾರ್​ ಹೇಳಿಕೆ

ಮಾಜಿ ಸಿಎಂಗಳಾದ ಹೆಚ್ ಡಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯನವರು ಆರ್​ಎಸ್​ಎಸ್ ಟೀಕಿಸಿದರೆ ತಮಗೆ ಲಾಭವಾಗಬಹುದು ಎಂದು ಭ್ರಮೆಯಲ್ಲಿದ್ದಾರೆ. ಆರ್​ಎಸ್​ಎಸ್ ಬಗ್ಗೆ​ ವಾಗ್ದಾಳಿ ನಡೆಸಿದ್ದು ಸರಿಯಲ್ಲ..

bs-yeddyurappa-reaction-on-nalin-kumar-kateel-statement
ಬಿಎಸ್​ವೈ ಪ್ರತಿಕ್ರಿಯೆ
author img

By

Published : Oct 20, 2021, 2:45 PM IST

ವಿಜಯಪುರ : ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಯವರ ಬಗ್ಗೆ ಅಪಾರ ಗೌರವವಿದೆ. ಅವರಿಗೆ ಅಗೌರವ ತರುವಂತೆ ಯಾರೂ ಮಾತನಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿಯ ಮೊರಟಗಿ ಗ್ರಾಮದಲ್ಲಿ ಉಪ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ಹೇಳಿಕೆಗೆ ಪ್ರತಿಕ್ರಿಯಿಸಿದರು. ಆ ತರಹ ಯಾರ ಬಗ್ಗೆಯೂ ಮಾತನಾಡಬಾರದು, ಅಂತಹ ಅಗತ್ಯವೂ ಇಲ್ಲ ಎಂದು ಬಿಎಸ್​ವೈ ತಿಳಿಸಿದರು.

ಇದನ್ನೂ ಓದಿ: ಚುನಾವಣಾ ಪೈಪೋಟಿ.. ಟ್ವೀಟ್​ ವಾರ್​ ಬಳಿಕ ರಾಹುಲ್​ ವಿರುದ್ಧ ಕಟೀಲ್ ವಿವಾದಾತ್ಮಕ ಹೇಳಿಕೆ

ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿ ಓರ್ವ ಡ್ರಗ್​ ಪೆಡ್ಲರ್​ ಅನ್ನೋ ಸುದ್ದಿ ಹಡಿದಾಡ್ತಿವೆ. ಇದೇ ವೇಳೆ ಕಾಂಗ್ರೆಸ್​ನಲ್ಲಿ ರಾಷ್ಟ್ರೀಯ ಅಧ್ಯಕ್ಷರು ಯಾರು ಅಂತಾ ಹೇಳಿ? ಸೋನಿಯಾ, ರಾಹುಲ್ ಗಾಂಧಿಯವರೇ ಅಧ್ಯಕ್ಷಗಿರಿಗೆ ಪೈಪೋಟಿ ನಡೆಸುತ್ತಿದ್ದಾರೆ ಎಂದು ಕಟೀಲ್ ನಿನ್ನೆ ಹುಬ್ಬಳ್ಳಿಯಲ್ಲಿ​ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಹೆಚ್​ಡಿಕೆ-ಸಿದ್ದರಾಮಯ್ಯರಿಗೆ ಭ್ರಮೆ : ಮಾಜಿ ಸಿಎಂಗಳಾದ ಹೆಚ್ ಡಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯನವರು ಆರ್​ಎಸ್​ಎಸ್ ಟೀಕಿಸಿದರೆ ತಮಗೆ ಲಾಭವಾಗಬಹುದು ಎಂದು ಭ್ರಮೆಯಲ್ಲಿದ್ದಾರೆ. ಆರ್​ಎಸ್​ಎಸ್ ಬಗ್ಗೆ​ ವಾಗ್ದಾಳಿ ನಡೆಸಿದ್ದು ಸರಿಯಲ್ಲ.

ಅವರಿಗೆ ಇಷ್ಟ ಬಂದಂತೆ ಮಾತನಾಡಲಿ, ಅನಗತ್ಯವಾಗಿ ಆರ್‌ಎಸ್ಎಸ್ ಹೆಸರು ತರುತ್ತಿದ್ದಾರೆ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯನವರು ಏನೋ ಸಾಧನೆ ಮಾಡಿರುವ ಭ್ರಮೆಯಲ್ಲಿ ಇದ್ದಾರೆ. ಇದರಿಂದ ಅವರಿಗೇನೂ ಲಾಭ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಮತದಾರರಿಗೆ ಯಾವುದು ಸರಿ ಯಾವುದು ತಪ್ಪು ಎಂದು ಗೊತ್ತಿದೆ. ಈ ಬಾರಿ ಚುನಾವಣೆಯಲ್ಲಿ ಮತದಾರರು ತಕ್ಕ ಉತ್ತರ ನೀಡುತ್ತಾರೆ ಎಂದು ಬಿಎಸ್​ವೈ ಹೇಳಿದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಹಿಳೆಯ ಬರ್ಬರ ಹತ್ಯೆ.. ಮನೆಯಿಂದ ಹೊರಬರುತ್ತಿದ್ದ ಹೊಗೆಯಿಂದ ಪ್ರಕರಣ ಬೆಳಕಿಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.