ETV Bharat / state

ಟಗರು ಕಾಳಗದಲ್ಲಿ ಜಯ... ಸೋತವರಿಂದ ಗೆದ್ದವರ ಮೇಲೆ ಮಾರಣಾಂತಿಕ ಹಲ್ಲೆ ಆರೋಪ - ಮಾರಣಾಂತಿಕ ಹಲ್ಲೆ

ಟಗರಿನ ಕಾಳಗದಲ್ಲಿ ಗೆದ್ದು ಮರಳಿ ಬರುತ್ತಿರುವಾಗ ಹಿಂಬಾಲಿಸಿಕೊಂಡು ಬಂದ ಸೋತ ತಂಡವೊಂದು ಯರಝರಿ ಗ್ರಾಮದವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಸವನ ಬಾಗೇವಾಡಿ
author img

By

Published : Apr 9, 2019, 5:21 PM IST

ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಯರಝರಿ ಗ್ರಾಮದ ಟಗರು ಮಾಲೀಕರ ತಂಡವೊಂದು ಟಗರಿನ ಕಾಳಗದಲ್ಲಿ ಗೆದ್ದು ಮರಳಿ ಬರುತ್ತಿರುವಾಗ ಹಿಂಬಾಲಿಸಿಕೊಂಡು ಬಂದ ಇನ್ನೊಂದು ತಂಡ ಕುಂಟು ನೆಪ ತೆಗೆದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬಸವನ ಬಾಗೇವಾಡಿ ತಾಲೂಕಿನ ಕೊಲ್ಹಾರ ಪಟ್ಟಣದಲ್ಲಿ ನಡೆದಿದೆ.

ಟಗರು ಕಾಳಗದಲ್ಲಿ ಗೆದ್ದು ಬರುವಾಗ ಮಾರಣಾಂತಿಕ ಹಲ್ಲೆ

ಈ ಬಡಿದಾಟದಲ್ಲಿ ಸೆರೆ ಸಿಕ್ಕ ಇನ್ನೊಂದು ತಂಡದ ಒಬ್ಬ ವ್ಯಕ್ತಿಯನ್ನು ಗೆದ್ದ ತಂಡದವರು ಹಿಡಿದು ಯರಝರಿ ಗ್ರಾಮಕ್ಕೆ ಕರೆ ತಂದಿದ್ದಾರೆ. ಶನಿವಾರ ಈ ಘಟನೆ ನಡೆದಿದ್ದು, ಭಾನುವಾರ ಬೆಳಗ್ಗೆ ಊರಲ್ಲಿ ಈತನ ಮೆರವಣಿಗೆ ನಡೆಸಿ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲು ತೆರಳಿದಾಗ ಮುದ್ದೇಬಿಹಾಳ ಪೊಲೀಸರು ಘಟನೆ ತಮ್ಮ ಠಾಣೆ ವ್ಯಾಪ್ತಿಯಲ್ಲಿ ನಡೆದಿಲ್ಲ ಎಂದು ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿ ಕೊಲ್ಹಾರ ಠಾಣೆಗೆ ಹೋಗಿ ದೂರು ಕೊಡುವಂತೆ ತಿಳಿಸಿದ್ದಾರೆ.

ಸದ್ಯ ಘಟನೆಯ ಮಾಹಿತಿ ಪಡೆದುಕೊಂಡಿರುವ ಕೊಲ್ಹಾರ ಠಾಣೆ ಪೊಲೀಸರು ಯರಝರಿಗೆ ಬಂದು ಗೆದ್ದ ತಂಡದವರ ವಶದಲ್ಲಿದ್ದ ವಿಜಯಪುರದ ಗಣೇಶನಗರ ನಿವಾಸಿ ವಿನಯ್ ಕುಮಾರ್ ಎಂಬಾತನನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಏನಿದು ಘಟನೆ?:

ಯರಝರಿಯ ಮುತ್ತಪ್ಪ ಪೂಜಾರಿ ಎನ್ನುವವರು ಎರಡು ಟಗರು ಸಾಕಿದ್ದು, ಎಲ್ಲೇ ಟಗರಿನ ಕಾಳಗ ನಡೆದರೂ ಅಲ್ಲಿ ಸ್ಪರ್ಧೆಗೆ ಹೋಗುತ್ತಾರೆ. ಪ್ರತಿ ಬಾರಿ ಹೋದಾಗಲೂ ಇವರ ಟಗರುಗಳು ಗೆದ್ದು ಬಹುಮಾನ ಪಡೆದುಕೊಂಡು ಬರುತ್ತವೆ. ಮುಂಡರಗಿಯಲ್ಲೂ ಇವೇ ಟಗರು ಗೆದ್ದಿದ್ದವು. ಗೆಲುವಿನ ನಗೆಯೊಂದಿಗೆ ಯರಝರಿಗೆ ಮರಳಿ ಬರುತ್ತಿರುವಾಗ ಇವರ ವಾಹನ ಹಿಂಬಾಲಿಸಿಕೊಂಡು ಬಂದ ತಂಡವೊಂದು ಕೊಲ್ಹಾರದ ಹೋಟೆಲ್​ವೊಂದರ ಬಳಿ ಊಟಕ್ಕೆ ನಿಲ್ಲಿಸಿದಾಗ ವಾಹನ ಪಾರ್ಕಿಂಗ್ ವಿಷಯದಲ್ಲಿ ಜಗಳ ನಡೆದಿದೆ.

ಇನ್ನೊಂದು ತಂಡದವರು ಗೆದ್ದ ತಂಡದವರ ಮೇಲೆ ಕಬ್ಬಿಣದ ರಾಡುಗಳಿಂದ ಹಲ್ಲೆಗೆ ಮುಂದಾಗಿದ್ದಾರೆ. ಗೆದ್ದ ತಂಡದವರೂ ಪ್ರತಿ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಮುತ್ತಪ್ಪನಿಗೆ ತೀವ್ರ ಪೆಟ್ಟಾಗಿದೆ. ತಮ್ಮ ಟಗರು ಎಲ್ಲಾ ಕಡೆ ಗೆಲ್ಲುತ್ತಿದೆ. ಇದನ್ನು ಸಹಿಸದೆ ಸೋತ ತಂಡದವರು ಸಂಚು ನಡೆಸಿ ಈ ಹಲ್ಲೆ ನಡೆಸಿರಬಹುದು ಎನ್ನುವ ಸಂಶಯವನ್ನು ಗೆದ್ದ ಟಗರಿನ ಮಾಲೀಕ ಮುತ್ತಪ್ಪ ಪೂಜಾರಿ ವ್ಯಕ್ತಪಡಿಸಿದ್ದು, ಪೊಲೀಸರ ತನಿಖೆಯಿಂದ ನಿಜಾಂಶ ಹೊರಬರಬೇಕಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.