ವಿಜಯಪುರ : ಕೃಷ್ಣಾ ನದಿಯಲ್ಲಿ ಮೀನು ಹಿಡಿಯಲು ಹೋಗಿ ಸಹೋದರರಿಬ್ಬರು ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ಬಳೂತಿ ಜಾಕ್ವೆಲ್ ಬಳಿ ನಡೆದಿದೆ. ಬಳೂತಿ ಗ್ರಾಮದ ಬಸಪ್ಪ ಮಳೆಪ್ಪ ದಳವಾಯಿ (29) ಹಾಗೂ ಅಜೀತ್ ಮಳೆಪ್ಪ ದಳವಾಯಿ (25) ನಾಪತ್ತೆಯಾದವರು.
ನಾಪತ್ತೆಯಾಗಿರುವ ಮೀನುಗಾರ ಸಹೋದರರಿಗಾಗಿ ಪೊಲೀಸರು,ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಸ್ಥಳೀಯರು ಹುಡುಕಾಟ ನಡೆಸುತ್ತಿದ್ದಾರೆ. ಬಳೂತಿ, ರೊಳ್ಳಿ, ನದಿ ದಂಡೆಗಳಲ್ಲಿ ಅಗ್ನಿ ಶಾಮಕ ದಳದಿಂದ ಹುಡುಕಾಟ ನಡೆದಿದೆ.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ : ವಿಚಾರಣೆಗೆ ಕರೆದಿದ್ದ 50 ಅಭ್ಯರ್ಥಿಗಳ ಪೈಕಿ 45 ಮಂದಿ ಹಾಜರು!