ETV Bharat / state

ಜಮೀರ್​ ಅಹ್ಮದ್​ ಹಿಂದು ವಿರೋಧಿ, ಮೊದಲು ಜೈಲಿಗೆ ಹಾಕಿ: ಯತ್ನಾಳ್​ ಕಿಡಿ - ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​

ಹುಬ್ಬಳ್ಳಿ ಗಲಾಟೆ ಪ್ರಕರಣದಲ್ಲಿ ಜೈಲು ಸೇರಿರುವ ಆರೋಪಿಗಳ ಕುಟುಂಬಸ್ಥರಿಗೆ ಆಹಾರದ ಕಿಟ್​ ನೀಡಲು ಕಾಂಗ್ರೆಸ್​ ಶಾಸಕ ಜಮೀರ್​ ಅಹ್ಮದ್ ಮುಂದಾಗಿದ್ದಾರೆ ಎಂಬ ಆರೋಪಕ್ಕೆ ಕಿಡಿಕಾರಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್ ಅವರು ಜಮೀರ್​ರನ್ನು ಜೈಲಿಗೆ ಹಾಕಿ ಎಂದಿದ್ದಾರೆ.

bjp-mla-basanagowda
ಯತ್ನಾಳ್​ ಕಿಡಿ
author img

By

Published : Apr 30, 2022, 4:21 PM IST

ವಿಜಯಪುರ: ಹುಬ್ಬಳ್ಳಿ ಗಲಾಟೆಗೆ ಕಾರಣವಾದ ಕುಟುಂಬದವರಿಗೆ ಶಾಸಕ ಜಮೀರ್ ಅಹಮ್ಮದ್ ಆಹಾರದ ಕಿಟ್ ಹಂಚಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಅವರು, ಜಮೀರ್ ಅಹ್ಮದ್ ಖಾನ್ ಹಿಂದೂ ವಿರೋಧಿಯಾಗಿದ್ದಾರೆ. ಉತ್ತರಪ್ರದೇಶದಲ್ಲಿ ಮಾಜಿ ಶಾಸಕ ಅಜಂ ಖಾನ್​ರನ್ನು ಒಳಗೆ ಹಾಕಿದಂತೆ ಜಮೀರ್​ರನ್ನೂ ಒಳಗೆ ಹಾಕಿ. ಇವರೆಲ್ಲಾ ದೇಶ ವಿರೋಧಿ ಚಟುವಟಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಪೊಲೀಸ್ ಠಾಣೆ ಹಾಗೂ ದೇವಸ್ಥಾನದ ಮೇಲೆ ಕಲ್ಲು ಎಸೆಯುವವರ ಬಂಧನವಾದ ಬಳಿಕ ಜೈಲಿಗೆ ಹೋಗುವ ಜಮೀರ್ ಅಲ್ಲಿದ್ದವರನ್ನು ಸನ್ಮಾನ ಮಾಡುತ್ತಾರೆ. ಹಾಗಾದರೆ, ಗೃಹ ಸಚಿವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಜಮೀರ್​ ಅಹ್ಮದ್​ ಹಿಂದು ವಿರೋಧಿ, ಮೊದಲು ಜೈಲಿಗೆ ಹಾಕಿ: ಯತ್ನಾಳ್​ ಕಿಡಿ

ನಮ್ಮವರದ್ದೇ ಸಲುಗೆಯಿದೆ, ಎಲ್ಲಾ ಆಡ್ಜೆಸ್ಟ್​ಮೆಂಟ್ ಇರೋ ಕಾರಣ ಹೀಗಾಗುತ್ತಿದೆ. ಇಂಥವರನ್ನು ಗೃಹ ಸಚಿವರು ಒಳಗೆ ಹಾಕಬೇಕು. ಗಲಾಟೆ ಮಾಡಿದವರನ್ನು ಹೇಗೆ ಜೈಲಿನೊಳಗೆ ಹಾಕಲಾಗಿದೆಯೋ, ಹಾಗೆಯೇ ಜಮೀರ್​ರನ್ನು ಒಳಗೆ ಹಾಕಿ. ಈ ವಿಚಾರವಾಗಿ ಸಿದ್ದರಾಮಯ್ಯ ಅವರು ಉತ್ತರ ನೀಡದೇ ಜಮೀರ್​ನನ್ನು ಕೈಬಿಟ್ಟಿದ್ದಾರೆ ಎಂದು ಛೇಡಿಸಿದರು.

ಕೆಪಿಎಸ್ಸಿಯಲ್ಲೂ ಹಗರಣ: ಪಿಎಸ್​ಐ ನೇಮಕಾತಿ ಅಲ್ಲದೇ ಕೆಪಿಎಸ್‌ಸಿ ನೇಮಕದಲ್ಲೂ ಭ್ರಷ್ಟಾಚಾರ ನಡೆದಿದೆ. ಕೆಪಿಎಸ್​ಸಿ ಸದಸ್ಯರಾಗಲು 5 ರಿಂದ 10 ಕೋಟಿ ರೂಪಾಯಿ ಕೊಡ್ತಾರೆ. ಚೇರ್ಮನ್ ಆಗಲೂ ಹಣ ಕೊಡ್ತಾರೆ ಎಂದು ಯತ್ನಾಳ್​ ಹೊಸ ಬಾಂಬ್ ಸಿಡಿಸಿದರು.

ಶಾಮ್​ಭಟ್​​ರ ಮನೆ ರೇಡ್ ಮಾಡಿದ ಮೇಲೆ ಎಷ್ಟು ಹಣ ಸಿಕ್ತು ಎಂದು ಗೊತ್ತಿದೆ. ನೇಮಕಾತಿಗಳೇ ದಂಧೆಗಳಾಗಿವೆ. ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ ಆಗಬೇಕು. ಪಾರದರ್ಶಕತೆ ತರಬೇಕು ಎಂದು ಅವರು ಆಗ್ರಹಿಸಿದರು.

ಓದಿ: ಕೋಲ್​ ಕಂಪನಿಗಳಲ್ಲಿ 72.5 ಮಿಲಿಯನ್ ಟನ್​​ ಕಲ್ಲಿದ್ದಲು ಸ್ಟಾಕ್​ ಇದೆ: ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.