ETV Bharat / state

ಹಿಜಾಬ್ ವಿವಾದ ಪ್ರಕರಣ.. ಬಿಜೆಪಿ ನಾಯಕರ ಪ್ರತಿಕ್ರಿಯೆ ಏನು ? - ಈಟಿವಿ ಭಾರತ ಕನ್ನಡ

ಹಿಜಾಬ್​ ವಿವಾದ ಪ್ರಕರಣ ಸುಪ್ರೀಂ ಕೋರ್ಟ್​ನಿಂದ ಸಂವಿಧಾನ ಪೀಠಕ್ಕೆ ವರ್ಗಾಯಿಸಲಾಗಿದ್ದು, ಇನ್ನೂ ಪ್ರಕರಣದ ಬಗ್ಗೆ ಅಂತಿಮ ತೀರ್ಪು ಹೊರಬೀಳಬೇಕಿದೆ. ಈ ಕುರಿತು ಬಿಜೆಪಿ ನಾಯಕರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

bjp-leaders-reaction-on-hijab-controversy-verdict
ಹಿಜಾಬ್ ವಿವಾದ ಪ್ರಕರಣ.. ಬಿಜೆಪಿ ನಾಯಕರ ಪ್ರತಿಕ್ರಿಯೆ ಏನು ?
author img

By

Published : Oct 13, 2022, 3:58 PM IST

ವಿಜಯಪುರ(ಹುಬ್ಬಳ್ಳಿ) : ಸುಪ್ರೀಂಕೋರ್ಟ್ ನಲ್ಲಿನ ಹಿಜಾಬ್ ಪ್ರಕರಣದ ವಿಚಾರಣೆಯನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸಿದ್ದು, ಅಲ್ಲಿ ಬರುವ ತೀರ್ಮಾನಕ್ಕೆ ಬದ್ಧವಿರುವುದಾಗಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು. ವಿಜಯಪುರದಲ್ಲಿ ಮಾತನಾಡಿದ ಅವರು, ಹಿಜಾಬ್ ಪ್ರಕರಣವನ್ನು ಇಡೀ ಪ್ರಪಂಚವೇ ಗಮನಿಸುತ್ತಿದೆ. ಇಡೀ ದೇಶದ ಜನ ಯಾವುದು ಸರಿ ಯಾವುದು ತಪ್ಪು ಎನ್ನುವ ಚರ್ಚೆಯಲ್ಲಿ ತೊಡಗಿದ್ದಾರೆ ಎಂದು ಹೇಳಿದರು.

ಹಿಜಾಬ್​ ಪ್ರಕರಣದ ತೀರ್ಪಿಗೆ ಬದ್ಧ : ಇಸ್ಲಾಂ ಧರ್ಮದಲ್ಲಿ ಹಿಜಾಬ್ ಕಡ್ಡಾಯ ಇಲ್ಲ, ಕುರಾನ್​​​ನಲ್ಲೂ ಇದು ಎಲ್ಲಿಯೂ ಇದರ ಉಲ್ಲೇಖಿಸಿಲ್ಲ, ಹೀಗಾಗಿ ಹೈಕೋರ್ಟ್ ತೀರ್ಪು ನೀಡಿದಾಗಲೇ ಮುಸ್ಲಿಂ ಮುಖಂಡರು ಆ ಆರು ಹೆಣ್ಣು ಮಕ್ಕಳಿಗೆ ಬೈದು ಬುದ್ದಿ ಹೇಳಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸದ್ಯ ದ್ವಿಸದಸ್ಯ ಪೀಠ ವಿಭಿನ್ನ ಅಭಿಪ್ರಾಯ ನೀಡಿದ್ದು ಅದನ್ನು ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ. ಸಮಾನತೆಗೆ, ಸಂವಿಧಾನಕ್ಕೆ ಆದ್ಯತೆ ಕೊಡಬೇಕು, ಐದು ಅಥವಾ ಏಳು ಜನರ ನ್ಯಾಯಾಧೀಶರ ತೀರ್ಪು ಏನಾಗಲಿದೆ ಎಂಬುದು ನೋಡಬೇಕು ಎಂದರು.

ಆರು ಜನ ಹೆಣ್ಣು ಮಕ್ಕಳನ್ನು ಎಬ್ಬಿಸಿದ ರಾಷ್ಟ್ರ ದ್ರೋಹಿಗಳು ಯಾರು? ಮುಸ್ಲಿಂ ದಂಗೆಗೆ ಕಾರಣ ಯಾರು? ಎಂಬ ಚರ್ಚೆ ಶುರುವಾಗಿ ಹಿಂದೂ ಮಕ್ಕಳು ಸಹ ಹೋರಾಟಕ್ಕೆ ಮುಂದಾದರು. ಆಗಲೇ ಮಕ್ಕಳಿಗೆ ಬುದ್ದಿ ಹೇಳಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ, ಬೆಂಕಿ ಹಚ್ಚುವ ಕೆಲಸ ಆಗಿದ್ದರಿಂದ ಪರಿಸ್ಥಿತಿ ಇಲ್ಲಿಗೆ ಬಂದಿದೆ ಎಂದು ಅಭಿಪ್ರಾಯಪಟ್ಟರು.

ಹಿಜಾಬ್ ವಿವಾದ ಪ್ರಕರಣ.. ಬಿಜೆಪಿ ನಾಯಕರ ಪ್ರತಿಕ್ರಿಯೆ ಏನು ?

ಹಿಜಾಬ್ ಸಂಬಂಧ ಕೂಡಲೇ ಸೂಕ್ತ ಆದೇಶದ ಅವಶ್ಯಕತೆ ಇದೆ : ಶೆಟ್ಟರ್ - ಹಿಜಾಬ್ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ ದ್ವಿಸದಸ್ಯ ಪೀಠದ ಒಬ್ಬರು ನ್ಯಾಯಾಧೀಶರು ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದ್ದರೇ ಮತ್ತೊಬ್ಬರು ಹೈಕೋರ್ಟ್ ಆದೇಶವನ್ನು ತಿರಸ್ಕಾರ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಸಾಂವಿಧಾನ ಪೀಠ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ತೀರ್ಪು ಹೊರ ಬರಬೇಕಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

ಹಿಜಾಬ್ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ದ್ವಿ ಸದಸ್ಯ ಪೀಠ ಈಗ ಪ್ರಕರಣವನ್ನು ಸಿಜೆಐಗೆ ವರ್ಗಾವಣೆ ಮಾಡಿದ್ದು, ಈ ಬಗ್ಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸಾಂವಿಧಾನ ಪೀಠ ನ್ಯಾಯಾಲಯದ ಮೂಲಕ ಹಿಜಾಬ್ ಪ್ರಕರಣವನ್ನು ಶೀಘ್ರವೇ ಇತ್ಯರ್ಥ ಮಾಡಬೇಕಾಗಿದೆ ಎಂದು ಹೇಳಿದರು.

ಈಗಾಗಲೇ ದ್ವಿ ಸದಸ್ಯ ಪೀಠದಲ್ಲಿ ಎರಡು ರೀತಿಯಲ್ಲಿ ತೀರ್ಪು ಬಂದಿದ್ದು, ಯಥಾಸ್ಥಿತಿ ಕಾಪಾಡಲು ಕೋರ್ಟ್ ಸೂಚನೆ ನೀಡಿದೆ. ಸಿಜೆಐ ತೀರ್ಪಿನ ನಂತರವೇ ಮುಂದಿನ ನಿರ್ಧಾರ ಬರಲಿದೆ. ಈಗ ಎರಡು ವಿಭಿನ್ನ ರೀತಿಯ ತೀರ್ಪಿನಿಂದ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಹಿಜಾಬ್ ದೇಶದಲ್ಲಿ ಮಾತ್ರವಲ್ಲದೇ ಜಗತ್ತಿನಾದ್ಯಂತ ಚರ್ಚೆಗೆ ಬಂದಿರುವ ವಿಷಯವಾಗಿದ್ದು, ಇತ್ತೀಚೆಗೆ ಇರಾಕ್ ಹಾಗೂ ಇರಾನ್ ದೇಶದಲ್ಲಿ ಅಲ್ಲಿನ ಮಹಿಳೆಯರು ಹಿಜಾಬ್ ಧರಿಸುವುದನ್ನು ವಿರೋಧಿಸಿ ಧ್ವನಿ ಎತ್ತಿದ್ದಾರೆ. ಕೂಡಲೇ ಇದಕ್ಕೆ ಒಂದು ಸೂಕ್ತ ನಿರ್ಧಾರದ ಅವಶ್ಯಕತೆ ಇದೆ ಎಂದು ಅವರು ಹೇಳಿದರು.

ಹಿಜಾಬ್ ಪ್ರಕರಣದಲ್ಲಿ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ : ಹೊರಟ್ಟಿ - ಹಿಜಾಬ್ ವಿವಾದ ಈಗ ಸಿಜೆಐಗೆ ಹೋಗಿರುವುದರಿಂದ ಸರ್ಕಾರ ಯಾವುದೇ ರೀತಿಯಲ್ಲಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಈ ಬಗ್ಗೆ ಮುಖ್ಯ ನ್ಯಾಯಮೂರ್ತಿಗಳೇ ಅಂತಿಮ ನಿರ್ಧಾರದ ಮೂಲಕ ತೀರ್ಪನ್ನು ನೀಡಬೇಕಿದೆ ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಹಿಜಾಬ್ ಕುರಿತು ಸುಪ್ರೀಂ ಕೋರ್ಟ್ ದ್ವಿ ಸದಸ್ಯ ಪೀಠದ ತೀರ್ಪಿನ ಕುರಿತು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಅವರು, ನ್ಯಾಯಾಲಯ ತೀರ್ಪು ಕೊಟ್ಟು ಪುನಃ ಸಿಜೆಐಗೆ ಒಪ್ಪಿಸಿದೆ. ಅಂದರೆ ಕೇಸ್ ಇನ್ನೂ ಪೆಂಡಿಂಗ್ ಇದೆ ಅಂತಲೇ ಅರ್ಥ. ಈಗ ಸಿಜೆಐ ಬಳಿಗೆ ಹೋಗಿ ಅಲ್ಲಿ ಅಂತಿಮ ತೀರ್ಮಾನ ಕೈಗೊಂಡ ಮೇಲೆಯೇ ಹಿಜಾಬ್ ವಿವಾದಕ್ಕೆ ತೆರೆ ಬೀಳಲಿದೆ ಎಂದು ಹೇಳಿದರು.

ಸುಪ್ರೀಂ ಕೋರ್ಟ್ ತೀರ್ಪು ನೀಡಿ ಹಾಗೇ ಬಿಟ್ಟಿದ್ದರೇ ಮುಂದಿನ ಹಂತದಲ್ಲಿ ಸರ್ಕಾರ ಏನಾದರೂ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇತ್ತು. ಆದರೆ ಈಗ ಕೋರ್ಟ್ ಸಿಜೆಐಗೆ ಒಪ್ಪಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ಯಾವುದೇ ರೀತಿಯ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ಈಗಾಗಲೇ ಹಿಜಾಬ್ ಕುರಿತು ದ್ವಿ ಸದಸ್ಯ ಪೀಠ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದು, ಸಿಜೆಐಗೆ ಒಪ್ಪಿಸಿದೆ. ಸಿಜೆಐ ಈ ಪ್ರಕರಣದ ಆಳ ಅಗಲವನ್ನು ಅಧ್ಯಯನ ಮಾಡಿ ತೀರ್ಪು ನೀಡಲಿದ್ದಾರೆ. ಅಲ್ಲಿಯವರೆಗೆ ಕಾಯಬೇಕು ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ಇದನ್ನೂ ಓದಿ : ಶಾಲೆಗಳಲ್ಲಿ ಹಿಜಾಬ್ ನಿಷೇಧ ಆದೇಶ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ: ಸಚಿವರ ಸ್ಪಷ್ಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.