ETV Bharat / state

ಬಿಜೆಪಿ ಸರ್ಕಾರ ಡಬಲ್ ಎಂಜಿನ್ ಸರ್ಕಾರವಲ್ಲ, ಟ್ರಬಲ್ ಎಂಜಿನ್ ಸರ್ಕಾರ: ನಟಿ ರಮ್ಯಾ

ಧಾರ್ಮಿಕ ವಿರೋಧಿ ಹೇಳಿಕೆಗಳನ್ನು ನೀಡುವವರ ಮೇಲೆ ಕ್ರಮವಾಗಬೇಕು ಹೊರತು ಸಂಪೂರ್ಣವಾಗಿ ಬ್ಯಾನ್ ಮಾಡುವುದು ಸರಿಯಲ್ಲ ಎಂದು ನಟಿ ರಮ್ಯಾ ಅವರು ಬಜರಂಗದಳ ನಿಷೇಧದ ಬಗ್ಗೆ ತಮ್ಮ ಅಭಿಪ್ರಯಾ ವ್ಯಕ್ತಪಡಿಸಿದ್ದಾರೆ.

bjp-govt-is-not-double-engine-govt-trouble-engine-govt-says-actress-ramya
ಬಿಜೆಪಿ ಸರ್ಕಾರ ಡಬಲ್ ಎಂಜಿನ್ ಸರ್ಕಾರವಲ್ಲ, ಟ್ರಬಲ್ ಎಂಜಿನ್ ಸರ್ಕಾರ: ನಟಿ ರಮ್ಯಾ
author img

By

Published : May 6, 2023, 6:11 PM IST

ಬಿಜೆಪಿ ಸರ್ಕಾರ ಡಬಲ್ ಎಂಜಿನ್ ಸರ್ಕಾರವಲ್ಲ, ಟ್ರಬಲ್ ಎಂಜಿನ್ ಸರ್ಕಾರ: ನಟಿ ರಮ್ಯಾ

ವಿಜಯಪುರ: ಡಬಲ್ ಎಂಜಿನ್ ಸರ್ಕಾರ ಸಂಪೂರ್ಣ ವೈಫಲ್ಯ ಕಂಡಿದ್ದು, ಬಿಜೆಪಿ ರಾಜ್ಯ ಸರ್ಕಾರ ಟ್ರಬಲ್ ಎಂಜಿನ್ ಸರ್ಕಾರ ಎಂದು ಮಾಜಿ ಸಂಸದೆ ಹಾಗೂ ಚಿತ್ರನಟಿ ರಮ್ಯಾ ಅವರು ಲೇವಡಿ ಮಾಡಿದರು. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜರಂಗದಳ ಇರಲಿ ಏನೇ ಇರಲಿ ಬ್ಯಾನ್ ಎನ್ನುವುದು ಸರಿಯಲ್ಲ, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮುಕ್ತ ಅವಕಾಶವಿದೆ ಎಂದು ಹೇಳಿದರು.

ಧಾರ್ಮಿಕ ವಿಷಯವಾಗಿ ಮಾತನಾಡಿದರೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸುವ ಅಧಿಕಾರವನ್ನು ನ್ಯಾಯಾಲಯ ಈಗಾಗಲೇ ನಿರ್ದೇಶನ ನೀಡಿದೆ. ಬಜರಂಗದಳ ಅಷ್ಟೇ ಎಲ್ಲ, ಯಾರೇ ಧಾರ್ಮಿಕ ಅರಾಜಕತೆ, ಧಾರ್ಮಿಕ ವಿರೋಧಿ ಹೇಳಿಕೆಗಳನ್ನು ನೀಡುವವರ ಮೇಲೆ ಕ್ರಮವಾಗಬೇಕು ಹೊರತು ಸಂಪೂರ್ಣವಾಗಿ ಬ್ಯಾನ್ ಮಾಡುವುದು ಸರಿಯಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಘಟನೆಗಳಿಗೆ ಅವಕಾಶವಿದೆ. ಆದರೆ, ಸಮಾಜದಲ್ಲಿ ಶಾಂತಿ ಯಾರೇ ಕದಡಿದರೂ ಅದರ ಮೇಲೆ ಕ್ರಮವಾಗಬೇಕು ಎಂದು ಹೇಳಿದರು.

ರಾಜ್ಯ ಬಿಜೆಪಿ ನಾಯಕರು ರಾಜ್ಯದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿದ್ದರೆ ಅದನ್ನೆ ಪ್ರಚಾರ ಮಾಡುತ್ತಿದ್ದರು. ಆದರೆ, ಹೇಳಿಕೊಳ್ಳಲು ಅವರ ಬಳಿ ಏನೂ ಇಲ್ಲ, ಅದಕ್ಕಾಗಿ ದೆಹಲಿ ನಾಯಕರನ್ನು ಪ್ರಚಾರಕ್ಕಾಗಿ ಕರೆ ತಂದಿದ್ದಾರೆ ಎಂದು ಹೇಳಿದರು. ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಪುತ್ರ ಗಾಳಿಯಲ್ಲಿ ಗುಂಡು ಹಾರಿಸುವ ದೃಶ್ಯಗಳು ಮೈ ಜುಮ್​​​ ಎನಿಸುವಂತಹದ್ದು, ಈ ರೀತಿಯ ಸಂಸ್ಕೃತಿ ಬೆಳೆಯಬಾರದು, ನಮ್ಮ ಮಕ್ಕಳಿಗೆ ಬಂದೂಕು ಬೇಡ ಪುಸ್ತಕ ಬೇಕಾಗಿದೆ ಎಂದರು.

ಎಂ.ಬಿ.ಪಾಟೀಲ್​ ಅವರು ನೀರಾವರಿ ಯೋಜನೆಗಳಿಗೆ ಶರವೇಗ ನೀಡುವ ಮೂಲಕ ಅಂತರ್ಜಲ ವೃದ್ಧಿಯಾಗಿದ್ದು ಉತ್ತಮ ಕಾರ್ಯ ಮಾಡಿದ್ದಾರೆ. ಕಾವೇರಿ ತೀರ್ಪು ಹೊರಬರುವ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದರೂ ಹಮ್ಮು-ಬಿಮ್ಮು ಬಿಟ್ಟು ತೀರ್ಪಿಗಾಗಿ ಅಂಕಿ-ಅಂಶ ಸಂಗ್ರಹಣೆ, ವಿಚಾರ ವಿಮರ್ಶೆ ಮಾಡುತ್ತಿರುವುದನ್ನು ಕಣ್ಣಾರೆ ಕಂಡಿದ್ದೇನೆ, ಇದು ರೈತರು ಹಾಗೂ ನೀರಾವರಿ ವಿಷಯವಾಗಿ ಎಂ.ಬಿ.ಪಾಟೀಲ್​ ಅವರ ಬದ್ಧತೆ ಹಾಗೂ ವಿಶ್ವಾಸಾರ್ಹತೆ ಎಂದರು.

ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದ್ರೆ ಸವದಿ ಸಹೋದರರ ಸಕ್ಕರೆ ಕಾರ್ಖಾನೆ ಅವ್ಯವಹಾರ ಸಿಬಿಐ ತನಿಖೆಗೆ ಮನವಿ: ರಮೇಶ್ ಜಾರಕಿಹೊಳಿ

ಸಕ್ರಿಯ ರಾಜಕಾರಣಕ್ಕೆ ಮರಳುವ ಬಗ್ಗೆ ಯೋಚಿಸಿಲ್ಲ: ರಾಜಕಾರಣ ಪ್ರವೇಶಿಸುವ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ, ಈಗ ಕಾಂಗ್ರೆಸ್​​ ಪಕ್ಷದ ಸ್ಟಾರ್ ಪ್ರಚಾರಕಿಯಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದೇನೆ, ಸೋಷಿಯಲ್ ಮೀಡಿಯಾ ಜವಾಬ್ದಾರಿ, ಅನಾರೋಗ್ಯ ಕಾರಣದಿಂದಾಗಿ ಸಕ್ರೀಯ ರಾಜಕಾರಣದಿಂದ ದೂರ ಇದ್ದೆ, ಈಗ ಸಂಪೂರ್ಣವಾಗಿ ಆರೋಗ್ಯವಾಗಿದ್ದು ಪುನಃ ಸಕ್ರಿಯ ರಾಜಕಾರಣಕ್ಕೆ ಮರಳುವ ಬಗ್ಗೆ ಯೋಚಿಸಿಲ್ಲ ಎಂದರು.

ಮಂಡ್ಯ ಸಂಸದೆ ಸುಮಲತಾ ಅಂಬರೀಶ್​ ಅವರು ಬಿಜೆಪಿಗೆ ಬೆಂಬಲ ನೀಡುತ್ತಿರುವ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅದು ಅವರ ವೈಯಕ್ತಿಯ ಅಭಿಪ್ರಾಯ, ಅದರ ಬಗ್ಗೆ ನಾನೇನು ಮಾತನಾಡುವುದಿಲ್ಲ ಎಂದು ಉತ್ತರಿಸಿದರು. ಬಿಎಲ್‌ಡಿಇ ಸಂಸ್ಥೆಯ ನಿರ್ದೇಶಕ ರಾಹುಲ್ ಪಾಟೀಲ್​, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ, ಭಾಗಿರಥಿ ತೇಲಿ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಬಜರಂಗದಳಕ್ಕೆ ಅವಮಾನಿಸುವ ಪಕ್ಷಕ್ಕೆ ಸೇರಿರುವ ಸವದಿಯನ್ನು ಸೋಲಿಸಿ: ಅಮಿತ್ ಶಾ ಕರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.