ವಿಜಯಪುರ: ರಾಜ್ಯದಲ್ಲಿ ರಚನೆಯಾಗಿರುವ ಬಿಜೆಪಿ ಸರ್ಕಾರ ಅವೈಜ್ಞಾನಿಕವಾಗಿದೆ ಎಂದು ನಾಗಠಾಣಾ ಕ್ಷೇತ್ರದ ಜೆಡಿಎಸ್ ಶಾಸಕ ದೇವಾನಂದ ಚೌಹಾಣ ಪ್ರತಿಕ್ರಿಯಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪವರಿಗೆ ಕೇಂದ್ರ ಸರ್ಕಾರ ಸಂಪೂರ್ಣವಾಗಿ ಸಹಕಾರ ನೀಡುತ್ತಿಲ್ಲ. ಅವರು ಮಾಡಿದ್ದು ಅವರೇ ಉಣ್ಣಬೇಕಾದ ಕಾಲ ಬಂದಿದೆ. ಸಿಎಂ ಬೆಂಬಲಿಗರ ಮೇಲೆ ಹಲ್ಲೆ ವಿಚಾರದ ಬಗ್ಗೆ ನಾವು ಮಾತನಾಡಲು ಬರುವುದಿಲ್ಲ. ಒಂದೇ ಮಾತಲ್ಲಿ ಹೇಳಬೇಕಾದ್ರೆ ನಾವು ಏನು ಮಾಡುತ್ತೇವೊ ಅದನ್ನ ಉಣ್ಣಬೇಕಾಗುತ್ತದೆ. ಬಿಜೆಪಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯ ದೊಡ್ಡ ಮಟ್ಟದಲ್ಲಿದೆ. ಮೈತ್ರಿ ಸರ್ಕಾರದ ಕಾಮಗಾರಿಗಳು ಪೂರ್ಣಗೊಂಡ್ರು ಕೂಡ ಹಣ ಬಿಡುಗಡೆ ಮಾಡದ ರೀತಿದಲ್ಲಿ ಸರ್ಕಾರದ ಪರಿಸ್ಥಿತಿ ಇದೆ ಎಂದರು.