ETV Bharat / state

ಎಣ್ಣೆ ಏಟಲ್ಲಿ ಭೀಮಾತೀರದ ಸಾಹುಕಾರನನ್ನು ಏಕ ವಚನದಲ್ಲಿ ಬೈದ ಶಿಷ್ಯ...  ವಿಡಿಯೋ ವೈರಲ್​ - Bheema teera

ಭೀಮಾತೀರದ ಸಾಹುಕಾರನೆಂದೇ ಖ್ಯಾತಿ ಹೊಂದಿರುವ ಮಹಾದೇವ ಸಾಹುಕಾರ ಭೈರಗೊಂಡನ ವಿರುದ್ಧ ಆತನ ಶಿಷ್ಯನೇ ಕುಡಿದ ಅಮಲಿನಲ್ಲಿ ಹರಿಹಾಯ್ದಿರುವ ವಿಡಿಯೋವೊಂದು ವೈರಲ್ ಆಗಿದೆ.

chanda pasha
ಚಾಂದಪಾಶಾ
author img

By

Published : Mar 6, 2020, 10:14 AM IST

ವಿಜಯಪುರ: ಭೀಮಾತೀರದ ಸಾಹುಕಾರನೆಂದೇ ಖ್ಯಾತಿ ಹೊಂದಿರುವ ಮಹಾದೇವ ಸಾಹುಕಾರ ಭೈರಗೊಂಡನ ವಿರುದ್ಧ ಆತನ ಶಿಷ್ಯನೇ ಕುಡಿದ ಅಮಲಿನಲ್ಲಿ ಹರಿಹಾಯ್ದಿರುವ ವಿಡಿಯೋವೊಂದು ವೈರಲ್ ಆಗಿದೆ.

ಭೀಮಾತೀರದ ಹಂತಕ ಧರ್ಮರಾಜ್ ಚಡಚಣ ಹಾಗೂ ಗಂಗಾಧರ ಚಡಚಣ ಕೊಲೆ ಮಾಡಿರುವ ಆರೋಪವನ್ನು ಮಾದೇವ ಸಾಹುಕಾರ ಭೈರಗೊಂಡ ಎದುರಿಸುತ್ತಿದ್ದು, ಇದೀಗ ನನ್ನ ಬಳಿ ಹಣ ಕೇಳುತ್ತಾನೆ, ಯಾಕೆ ಹಣ ಕೊಡಬೇಕು. ಆತ ತುಂಬಾ ಜನರಿಗೆ ಅನ್ಯಾಯ ಮಾಡಿ ಹಣಗಳಿಸಿದ್ದಾನೆ ಎಂದು ಚಡಚಣ ಪೋಲಿಸ್ ಠಾಣೆಯಲ್ಲಿ ಸಾಹುಕಾರನ‌ ವಿರುದ್ದ ಚಾಂದಪಾಶಾ ಹರಿಹಾಯ್ದಿದ್ದಾನೆ.

ವೈರಲ್​ ವಿಡಿಯೋ

ಆತನ ವಿರುದ್ದ ಪ್ರಕರಣ ದಾಖಲಿಸಿ ಅತನನ್ನು ಅರೆಸ್ಟ್ ಮಾಡಿ ಎಂದು ಠಾಣೆಯಲ್ಲಿ ಕುಳಿತು ಆವಾಜ್ ಹಾಕಿ, ನನಗೆ ಬರೆಯಲು‌ ಬರಲ್ಲ ನೀವೇ ಕಂಪ್ಲೇಟ್ ಬರೆಯಿರಿ ಎಂದು ಚಾಂದಬಾಷಾ ಬೇಡಿಕೊಂಡಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಚಾಂದಪಾಶಾ ಉಲ್ಟಾ ಹೊಡೆದಿದ್ದಾನೆ.

ನಾನು ತಪ್ಪು ಮಾಡಿದ ಕಾರಣ ಸಾಹುಕಾರ ನನಗೆ ಹೊಡೆದಿದ್ದರು. ಕುಡಿದ ಮತ್ತಿನಲ್ಲಿ ಸಾಹುಕಾರನ ವಿರುದ್ಧ ದೂರು ಕೊಡಲು ಹೊಗಿದ್ದೆ. ನಾನು ಠಾಣೆಯಲ್ಲಿ ಮಾತನಾಡಿದ ವಿಡಿಯೋ ಯಾರೋ ರೆಕಾರ್ಡ್​ ಮಾಡಿಕೊಂಡು ಈಗ ವೈರಲ್ ಮಾಡಿದ್ದಾರೆ ಎಂದು ಆರೋಪಿಸಿದ್ದಾನೆ. ಅಲ್ಲದೇ ಸಾಹುಕಾರನೇ ನನಗೆ ಹೋಟೆಲ್​ ಹಾಕಿ ಕೊಟ್ಟು ಜೀವನಕ್ಕೆ ಒಂದು ದಾರಿ ಮಾಡಿಕೊಟ್ಟಿದ್ದಾರೆ. ಸಾಹುಕಾರ ನನ್ನ ಪಾಲಿಗೆ ದೇವರು ಎಂದು ಚಾಂದಪಾಶಾ ಸಾಹುಕಾರನನ್ನು ಹೊಗಳಿದ್ದಾನೆ.

ಪೋಲಿಸ್ ಠಾಣೆಯಲ್ಲಿ ಒದರಾಡಿದ ವ್ಯಕ್ತಿ ನನ್ನ ಮಗನಿದ್ದಂತೆ. ಆತನಿಗೆ ನಾನೇ ಹೋಟೆಲ್​ ಹಾಕಿ ಕೊಟ್ಟಿದ್ದೇನೆ, ಆತ ನನ್ನ ಮಗನೆ. ಯಾರೋ ಗ್ರಾಮಸ್ಥರು ಆತನಿಗೆ ಕುಡಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಕುಡಿದ ಮತ್ತಿನಲ್ಲಿ ಪಿ.ಎಸ್.ಐ ಮುಂದೆ ಏಕ ವಚನದಲ್ಲೇ ನನಗೆ ಬೈದಿದ್ದಾನೆ. ಆತ ನನ್ನ ಮಗನಿದ್ದಂತೆ ಬೈದ್ದದ್ದು ಏನೂ ತಪ್ಪಿಲ್ಲ ಎಂದು ಮಹಾದೇವ ಸಾಹುಕಾರ ಸ್ಪಷ್ಟನೆ ನೀಡಿದ್ದಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.